ಮದ್ಯ ಸರ್ವ್ ಮಾಡಲು ಬಾರ್ ಸಿಬ್ಬಂದಿ ನಿರಾಕರಿಸಿದರೆಂಬ ಕೋಪಕ್ಕೆ ವ್ಯಕ್ತಿಯೊಬ್ಬ ಅಲ್ಲೇ ಇದ್ದ ಡಿಜೆಯನ್ನು ಗುಂಡಿಕ್ಕಿ ಹತ್ಯೆಮಾಡಿದ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ.
ಆರೋಪಿ ಹಾಗೂ ಆತನ ನಾಲ್ವರು ಸ್ನೇಹಿತರು ಮಧ್ಯರಾತ್ರಿ ಸುಮಾರು 1 ಗಂಟೆಗೆ ಬಾರ್ ಗೆ ಬಂದಿದ್ದರು. ಆ ಸಮಯದಲ್ಲಿ ಬಾರ್ ಮುಚ್ಚಲಾಗಿತ್ತು. ಆದರೂ ಅಲ್ಲಿದ್ದ ಸಿಬ್ಬಂದಿಗೆ ಮದ್ಯ ಸರ್ವ್ ಮಾಡುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಸಿಬ್ಬಂದಿ ನಿರಾಕರಿಸಿದ್ದು, ಆಗ ಜಗಳ ಶುರುವಾಗಿದೆ. ಬಾರ್ ಸಿಬ್ಬಂದಿ ಮತ್ತು ಯುವಕರ ನಡುವೆ ಮಾರಾಮಾರಿಯೇ ನಡೆದಿತ್ತು. ಈ ನಡುವೆ ಕೋಪದಲ್ಲಿ ತನ್ನ ಕಾರ್ ನಲ್ಲಿದ್ದ ರೈಫಲ್ ತೆಗೆದುಕೊಂಡು ಬಂತ ಅಪರಿಚಿತ ಒಬ್ಬ ಡಿಜೆ ಜಾಕಿ ಎದೆಗೆ ಗುಂಡಿಕ್ಕಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಡಿಜೆಯನ್ನು ರಾಜೇಂದ್ರ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಅಲ್ಲೇ ಕೊನೆಯುಸಿರೆಳೆದಿದ್ದಾನೆ. ಸಿಸಿಟಿವಿ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


