ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 31ರಂದು ಭಾರತಕ್ಕೆ ಬಂದು ಸೆರೆಂಡರ್ ಆಗುವುದಾಗಿ ತಿಳಿಸಿದ್ದಾರೆ. ಈ ವೇಳೆ SIT ಅವರನ್ನು ವಶಪಡಿಸಿಕೊಳ್ಳಲಿದೆ.
ಮೇ 31 ರಂದು ಪ್ರಜ್ವಲ್ ರೇವಣ್ಣನನ್ನು(Prajwal Revanna) ವಶಕ್ಕೆ ಪಡೆಯುವ SIT ಮೊದಲು ಧ್ವನಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ. ಹೌದು, ಸಂಸದ(MP) ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದರೆ ಧ್ವನಿ ಪರೀಕ್ಷೆ ನಡೆಸಲು ವಿಶೇಷ ತನಿಖಾ ದಳ (ಎಸ್ ಐಟಿ) ಅಲೋಚಿಸಿದೆ. ಈ ಧ್ವನಿ ಪರೀಕ್ಷೆಯಲ್ಲಿ ಪೆನ್ ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೋಗಳಲ್ಲಿ ಕೇಳಿ ಬರುವ ಪುರುಷನಿಗೆ ಹೋಲಿಕೆಯಾದರೆ ಸಂಸದರ ವಿರುದ್ಧದ ಅತ್ಯಾಚಾರ ಕೃತ್ಯಗಳ ರುಜುವಾತಿಗೆ ಎಸ್ ಐಟಿಗೆ ಮಹತ್ವದ ವೈದ್ಯಕೀಯ ಸಾಕ್ಷ್ಯ ಲಭಿಸಿದಂತಾಗುತ್ತದೆ.
ಅಂದ ಹಾಗೆ, ಈಗಾಗಲೇ ತಾನು ಹೇಳಿದಂತೆ ಪ್ರಜ್ವಲ್ ಭಾರತಕ್ಕೆ ಬರಲು ಜರ್ಮನಿಯ ಮ್ಯೂನಿಕ್ ನಿಂದ ಬೆಂಗಳೂರಿಗೆ ಬರೋಕೆ ಪ್ರಜ್ವಲ್ ರೇವಣ್ಣ ಅವರು ಲುಫ್ತಾನ್ಸಾ ಏರ್ ಲೈನ್ಸ್ ಬುಕ್ ಮಾಡಿದ್ದಾರೆ. ಮೇ 31ರ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಬರ್ತಿದ್ದಂತೆ ಏರ್ ಪೋರ್ಟ್‍ನಲ್ಲೇ ಲಾಕ್ ಆಗುವ ಸಾಧ್ಯತೆಗಳಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


