ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬಂದಿದ್ದ ಬೆಂಗಳೂರು ಮೂಲದ ಪೊಲೀಸ್ ಪೇದೆ ಮೇಲೆ ದೇಗುಲದ ಮುಂಭಾಗದಲ್ಲೇ ಹಲ್ಲೆ ನಡೆಸಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಕಳೆದ ರಾತ್ರಿ ದೇವಸ್ಥಾನದ ಮುಂಭಾಗದಲ್ಲಿ ಕಾರು ನಿಲ್ಲಿಸಿದ್ದಾಗ ಈ ಘಟನೆ ನಡೆದಿದ್ದು, ಪೇದೆ ರಾಜೇಗೌಡ, ಪತ್ನಿ ಕುಸುಮ ಹಾಗೂ ಅವರ ಅಣ್ಣ–ಅತ್ತಿಗೆಯ ಮೇಲೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಶೃಂಗೇರಿ ಪಟ್ಟಣದ ಕಿಡಿಗೇಡಿ ಸ್ಪರ್ಶಿತ್ ಎಂಬಾತ ಹಲ್ಲೆ ನಡೆಸಿದ್ದು, ಶೃಂಗೇರಿ ಕಾರು ಪಾರ್ಕಿಂಗ್ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಬೆಂಗಳೂರು ಮೂಲದ ಪೊಲೀಸ್ ಪೇದೆ ರಾಜೇಗೌಡ ಮತ್ತು ಕುಟುಂಬ ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬಂದಿದ್ದರು. ಕಳೆದ ರಾತ್ರಿ ಪೇದೆಯ ಅಣ್ಣ–ಅತ್ತಿಗೆ ಉಳಿಯಲು ಲಾಡ್ಜ್ ಕೇಳಲು ಹೋಗಿದ್ದರು.
ಆಗ ಸ್ಕೂಟಿಯಲ್ಲಿ ಬಂದ ಇಬ್ಬರು ಹಾಗೂ ದೇವಾಲಯದ ಮುಂಭಾಗವಿದ್ದ ಮತ್ತಿಬ್ಬರು ಸೇರಿ ಗಲಾಟೆ ಮಾಡಿದ್ದು, ದೇವಸ್ಥಾನದ ಮುಂಭಾಗ ಇದ್ದ ಕಾರ್ ತೆಗೆಯುವಂತೆ ಖ್ಯಾತೆ ತೆಗೆದಿದ್ದಾರೆ.
ಈ ವೇಳೆ ಗಲಾಟೆ ಜೋರಾಗಿ ಕಬ್ಬಿಣದ ರಾಡ್ ನಿಂದ ಪೇದೆ ರಾಜೇಗೌಡ ಮೇಲೆ ಹಲ್ಲೆಗೆ ಯತ್ನಿಸಿದ್ದು, ಗಲಾಟೆ ಬಿಡಿಸಲು ಬಂದ ಪೇದೆ ಅಣ್ಣ ಉಮೇಶ್ ಮೇಲೂ ಹಲ್ಲೆ ನಡೆಸಿದ್ದಾರೆ. ಪೇದೆ ರಾಜೇಗೌಡ ಹಾಗೂ ಉಮೇಶ್ ಇಬ್ಬರ ಕೈಗೂ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಕೊಲೆ ಮಾಡುವುದಾಗಿ ಸ್ಪರ್ಶಿತ್ ಮತ್ತು ಸಹಚಚರು ಬೆದರಿಕೆ ಹಾಕಿದ್ದಾರೆ.
ಅಪರಿಚಿತ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪೇದೆಯಾಗಿರುವ ರಾಜೇಗೌಡ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹಲ್ಲೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


