ಸಿರಾ: ರಾಜ್ಯ ಬಿಜೆಪಿ ಮೋರ್ಚಾ ಅಲ್ಪಸಂಖ್ಯಾತರ ರಾಜ್ಯ ಅಧ್ಯಕ್ಷರಾದ ಸಯ್ಯದ್ ಮುಝಮ್ಮಿಲ್ ಬಾಬುರವರು ನಗರದ ಐತಿಹಾಸಿಕ ಹಜರತ್ ಮಲ್ಲಿಕ್ ರೆಹಮಾನ್ ದರ್ಗಾ ಶರೀಫ್ ಗೆ ತೆರಳಿ ಸಿರಾ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಜ್ ಭವನವನ್ನು ನಿರ್ಮಿಸಿತು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನದಾಗಿ ಅನುದಾನ ನೀಡುತ್ತಾ ಬಂದಿದೆ. ಇದರಿಂದ ತೀರ ಹಿಂದುಳಿದ ಅಲ್ಪಸಂಖ್ಯಾತರಿಗೆ ತಮ್ಮ ಸ್ವಯಂ ಉದ್ಯೋಗ ನಿರ್ವಹಣೆಗೆ ತುಂಬಾ ಅನುಕೂಲವಾಗಿದೆ. ಕೇಂದ್ರ ಬಿಜೆಪಿ ಸರ್ಕಾರವಾಗಲಿ ಅಥವಾ ರಾಜ್ಯ ಬಿಜೆಪಿ ಸರ್ಕಾರ ಆಗಲಿ ಅಲ್ಪಸಂಖ್ಯಾತರ ಪರವಾಗಿದೆ ನಾವು ಕಾಣಬಹುದು. ಆದ್ದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬೇಕಾದರೆ, ನಮ್ಮ ಬಿಜೆಪಿ ಪಕ್ಷದ ವತಿಯಿಂದ ಸ್ಥಳೀಯ ನಗರ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ ಎಂದರು.
ಕೆ.ಎಂ.ಡಿ.ಸಿ. ನಜೀರ್ ಪಾಷಾ, ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನದೀಮ್, ಇಮ್ತಿಯಾಜ್ ಪಾಶ (ಅಲ್ಪಸಂಖ್ಯಾತರ ಮಧುಗಿರಿ ತಾಲ್ಲೂಕು ಮೋರ್ಚಾ ಅಧ್ಯಕ್ಷರು ) , ಹಸೀನಾ ಬೇಗಮ್ (ಬೂತ್ ಅಧ್ಯಕ್ಷರು ಮತ್ತು ಮಹಿಳಾ ಮುಖಂಡರು ಮಧುಗಿರಿ ), ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy