ಹಾವಿನ ಭಯದಿಂದ ಕಂಗೆಟ್ಟು ಹೋಗುವ ಬದಲು ಮನೆಯ ಬಳಿ ಹಾವು ಬರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಇದಕ್ಕಾಗಿ ಕೆಲವು ಗಿಡಗಳನ್ನು ನಿಮ್ಮ ಮನೆಯ ಅಕ್ಕ ಪಕ್ಕ ಬೆಳಸುವುದು ಬಹಳ ಉತ್ತಮ. ಅಂತಹ ಗಿಡಗಳ ಬಗ್ಗೆ ಮಾಹಿತಿ ಇಲ್ಲಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ತುಳಸಿ ಮತ್ತು ಸೇಜ್ ಎಲೆಗಳು ತಮ್ಮ ಪರಿಮಳಕ್ಕೆ ಪ್ರಸಿದ್ಧವಾದವು. ಇವುಗಳ ಪರಿಮಳ ಹಾವುಗಳಿಗೆ ಆಗಿ ಬರುವುದಿಲ್ಲ. ದೂರದಲ್ಲಿದ್ದರೂ ಕೂಡ ತುಳಸಿ ಗಿಡದ ಹಾಗೂ ಸೇಜ್ ಎಲೆಗಳ ವಾಸನೆಗೆ ಹಾವು ಹತ್ತಿರ ಕೂಡ ಸುಳಿಯಲು ಪ್ರಯತ್ನಿಸುವುದಿಲ್ಲ. ಹಾಗಾಗಿ ನಿಮ್ಮ ಮನೆಯ ಹೂಕುಂಡದಲ್ಲಿ ಅಥವಾ ಹಿತ್ತಲಿನಲ್ಲಿ ಇದನ್ನು ಬೆಳೆಸುವುದು ಉತ್ತಮ.
ಕ್ಯಾಕ್ಟಸ್ ನಿಮಗೆಲ್ಲ ಗೊತ್ತಿರುವ ಹಾಗೆ ಒಂದು ಮುಳ್ಳಿನ ಗಿಡ. ಪೂರ್ತಿ ಮುಳ್ಳು ತುಂಬಿರುವ ಕ್ಯಾಕ್ಟಸ್ ಗಿಡದ ಹತ್ತಿರ ಹಾವು ಬರುವುದಿಲ್ಲ. ನಿಮ್ಮ ಮನೆಯ ಅಕ್ಕ ಪಕ್ಕ ಯಾವುದೇ ಜಾಗದಲ್ಲಿ ನೀವು ಕ್ಯಾಕ್ಟಸ್ ಗಿಡವನ್ನು ಬೆಳೆಯಬಹುದು. ಹಾವು ನೆಲದಲ್ಲಿ ಹರಿದಾಡುವುದರಿಂದ ನೆಲದಿಂದ ಸ್ವಲ್ಪ ಎತ್ತರದಲ್ಲಿ ಕ್ಯಾಕ್ಟಸ್ ಗಿಡ ಇದ್ದರೆ ಸಾಕು. ಹಾವು ನಿಮ್ಮ ಮನೆಯಿಂದ ದೂರವೇ ಇರುತ್ತದೆ. ಈ ಗಿಡದ ಎಲೆಗಳು ಮುಳ್ಳಿನ ಆಕಾರದಲ್ಲಿ ಸುತ್ತಲೂ ಚೂಪಾದ ತುದಿಯನ್ನು ಹೊಂದಿರುತ್ತದೆ. ಹೀಗಾಗಿ ಹಾವು ಇದರ ಮೇಲೆ ಏರಲು ಆಗುವುದಿಲ್ಲ. ಈ ಗಿಡದ ವಾಸನೆ ಕೂಡ ತುಂಬಾ ಗಾಢವಾಗಿ ಇರುತ್ತದೆ. ಇದರ ವಾಸನೆ ಹಾವುಗಳಿಗೆ ಇಷ್ಟ ಆಗುವುದಿಲ್ಲ. ಹೀಗಾಗಿ ಹಾಲಿ ಗಿಡ ನಿಮ್ಮ ಮನೆಯ ಬಳಿ ಇದ್ದರೆ ಹಾವುಗಳು ದೂರ ಉಳಿಯುತ್ತವೆ.
ಚೆಂಡು ಹೂವು ಕೇವಲ ದೇವರ ಪೂಜಾ ಅಲಂಕಾರಕ್ಕಾಗಿ ಮೀಸಲಾಗಿಲ್ಲ. ಬದಲಿಗೆ ಚೆಂಡು ಹೂವು ತನ್ನ ಗಾಢವಾದ ವಾಸನೆಯ ಮೂಲಕ ಕ್ರಿಮಿ ಕೀಟಗಳನ್ನು ಸಹ ದೂರ ಇರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚೆಂಡು ಹೂವಿನ ಅಥವಾ ಚೆಂಡು ಹೂವಿನ ಗಿಡದ ವಾಸನೆಯಿಂದ ಹಾವು ಮನೆಯ ಹತ್ತಿರ ಬರುವುದಿಲ್ಲ. ಇದು ಸಾಮಾನ್ಯವಾಗಿ ಉದ್ದವಾಗಿ ಬೆಳೆಯುತ್ತದೆ ಮತ್ತು ಮರದ ತರಹ ಬೇರು ಗಳನ್ನು ಹೊಂದಿರುತ್ತದೆ. ಇದು ಕೂಡ ಗಾಡವಾದ ವಾಸನೆಯನ್ನು ಬೀರಲಿದ್ದು, ಹಾವುಗಳನ್ನು ದೂರ ಇರಿಸುವ ವಾಸನೆ ಅದಾಗಿರುತ್ತದೆ. ಈ ಗಿಡ ನಿಮ್ಮ ಮನೆ ಬಳಿ ಇದ್ದರೆ, ಹಾವುಗಳು ದೂರವೇ ಉಳಿಯುತ್ತವೆ.
ಈರುಳ್ಳಿ ಮತ್ತು ಬೆಳ್ಳುಳ್ಳಿ ಸಾಧಾರಣವಾಗಿ ಗಾಢವಾದ ವಾಸನೆಯನ್ನು ಹೊಂದಿರುತ್ತವೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯ ಕಡು ವಾಸನೆ ಹಾವುಗಳಿಗೆ ಹೊಂದಿಕೆಯಾಗುವುದಿಲ್ಲ. ಏಕೆಂದರೆ ಇವುಗಳಲ್ಲಿ ಸಲ್ಫೋನಿಕ್ ಆಮ್ಲ ಇರುತ್ತದೆ. ಹಾವುಗಳಿಗೆ ಈ ವಾಸನೆ ಇಷ್ಟವಾಗುವುದಿಲ್ಲ. ಹೀಗಾಗಿ ಹಾವು ಹತ್ತಿರ ಕೂಡ ಸುಳಿಯುವುದಿಲ್ಲ. ಇದು ಕೂಡ ಈರುಳ್ಳಿ ಜಾತಿಗೆ ಸೇರಿದ ಒಂದು ಸಸ್ಯವಾಗಿದ್ದು, ಈ ಗಿಡದ ಹೂವುಗಳು ಒಂದು ರೀತಿಯ ಗಾಢವಾದ ವಾಸನೆಯನ್ನು ಕೊಡುತ್ತವೆ. ಕೇವಲ ಹೂವು ಮಾತ್ರವಲ್ಲ, ಈ ಗಿಡದ ಎಲೆಗಳು ಕೂಡ ಗಾಢವಾದ ವಾಸನೆಯಿಂದ ಕೂಡಿರುತ್ತವೆ. ಹೀಗಾಗಿ ಈ ಗಿಡ ಕೂಡ ಹಾವುಗಳನ್ನು ಮನೆಯಿಂದ ದೂರವೇ ಇರಿಸುತ್ತದೆ. ಹೆಸರೇ ಹೇಳುವಂತೆ ಈ ಗಿಡ ನೋಡಲು ಹಾವಿನ ತರಹ ಇರುತ್ತದೆ. ಇದರ ಚೂಪಾದ, ಉದ್ದವಾದ ಮತ್ತು ಸುರುಳಿ ಸುತ್ತಿಕೊಂಡಿರುವ ಎಲೆಗಳು ನೋಡಲು ಹಾಲಿನ ತರಹ ಕಾಣುತ್ತವೆ. ಹಾವುಗಳು ಇಂತಹ ಗಿಡ ನೋಡಿ ಇದು ಇರುವ ಕಡೆ ಬರುವುದಿಲ್ಲ ಎಂದು ಹೇಳುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296