ಬಾಗಲಕೋಟೆ: ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಮನೆ ಮೇಲ್ಚಾವಣಿ ಕುಸಿದು ಅಕ್ಕ-ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಗೀತಾ ಆದಾಪುರಮಠ(14) ಹಾಗೂ ರುದ್ರಯ್ಯ(10) ಮೃತ ದುರ್ದೈವಿಗಳಾಗಿದ್ದಾರೆ.
ಮನೆಯಲ್ಲಿ ಅಕ್ಕ-ತಮ್ಮ ಹಾಗೂ ಅವರ ಅಜ್ಜ, ಅಜ್ಜಿ ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೆ ಅಜ್ಜಿ ಪಾರಾಗಿದ್ದಾರೆ. ಇನ್ನು ಅದೃಷ್ಟವಶಾತ್ ಮನೆ ಬೀಳುವ ಕೆಲವೇ ಕ್ಷಣಗಳ ಮೊದಲು ಅಜ್ಜ ಮನೆಯಿಂದ ಹೊರಗಡೆ ಹೋಗಿದ್ದ, ಅಜ್ಜಿ ಸಹ ಒಳಗಿಂದ ಹೊರಗಡೆ ಬಂದು ಕುಳಿತಿದ್ದಳು. ಹೀಗಾಗಿ ಅಜ್ಜ-ಅಜ್ಜಿ ಸ್ವಲ್ಪದರಲ್ಲೆ ಪಾರಾಗಿದ್ದಾರೆ. ಇತ್ತ ಮೃತ ಮಕ್ಕಳ ತಂದೆ-ತಾಯಿ ಮಕ್ಕಳಿಗೆ ಶಾಲೆಗೆ ಹೋಗಿ ಎಂದು ಬೆಳಗ್ಗೆ ಹೊಲದ ಕೆಲಸಕ್ಕೆ ಹೋಗಿದ್ದರು. ಆದರೆ, ಇವತ್ತು ಮೊದಲ ದಿನ ಎಂದು ಶಾಲೆಗೆ ಹೋಗದೇ ಮಕ್ಕಳು ಮನೆಯಲ್ಲೆ ಇದ್ದರು.
ಕಾರ್ಯಾಚರಣೆ ನಡೆಸಿ, ಮಣ್ಣಲ್ಲಿ ಸಿಲುಕಿದ್ದ ಇಬ್ಬರ ಮೃತದೇಹ ಹೊರತೆಗೆಯಲಾಗಿದ್ದು, ಇಳಕಲ್ ತಾಲೂಕು ಆಸ್ಪತ್ರೆಗೆ ಎರಡು ಮಕ್ಕಳ ಮೃತದೇಹವನ್ನು ರವಾನೆ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


