ಬಹುತೇಕ ಸೀರಿಯಲ್ ಗಳಲ್ಲಿನ ನಾಯಕ–ನಾಯಕಿಯ ಜೋಡಿಯನ್ನು ನೋಡಿ ವೀಕ್ಷಕರು ನೀವಿಬ್ಬರೂ ಯಾಕೆ ಒಟ್ಟಾಗಬಾರದು? ಮದ್ವೆಯಾಗ್ಬಾರದು ಎಂದೆಲ್ಲಾ ಕೇಳುವುದು ಇದೆ. ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮರ ಎಂಗೇಜ್ ಮೆಂಟ್‌ಗೆ ಭರ್ಜರಿ ಸೆಟ್ಟಿಂಗ್ ಮಾಡಲಾಗಿದೆ. ರಿಯಲ್ ರೀತಿಯಲ್ಲಿಯೇ ಕಾಣುವಂತೆ ಆಮಂತ್ರಣ ಪತ್ರಿಕೆಯನ್ನೂ ರೆಡಿ ಮಾಡಲಾಗಿದೆ. ಆದ್ದರಿಂದ ಈ ಎಂಗೇಜ್ ಮೆಂಟ್ ನೋಡಿದವರು ನಿಜವಾಗಿಯೂ ಇವರಿಬ್ಬರು ಮದ್ವೆ ಆಗ್ತಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.
ತಾಂಬೂಲ ಬದಲಾಯಿಸುವ ವೇಳೆ ಭಾರ್ಗವಿ ಸೀತಾಗೆ ವಜ್ರದ ಬಳೆಗಳನ್ನು ನೀಡಿದ್ದಾಳೆ. ತುಂಬ ಒತ್ತಾಯ ಮಾಡಿದ್ದಕ್ಕೆ ಸೀತಾ ಈ ಬಳೆ ಹಾಕಿಕೊಂಡಳು. ಇನ್ನೊಂದು ಕಡೆ ವಾಣಿ ಆಭರಣ ಎಲ್ಲವೂ ಸೀತಾಗೆ ಸೇರಬೇಕು ಅಂತ ಶ್ರೀರಾಮ್ ತಾತ ಹೇಳಿದ್ದಾನೆ. ಆದರೆ ಸೀತಾಗೆ ಒಡವೆ ಕೊಡಲು ಭಾರ್ಗವಿ ರೆಡಿ ಇಲ್ಲ. ಸೀತಾ ತನ್ನ ಸೊಸೆ ಆದಮೇಲೆ ಅವಳ ಹಳೇ ಕಥೆಯನ್ನು ತೆಗೆದು, ಮನೆಯಿಂದ ಹೊರಗಡೆ ಹಾಕಬೇಕು ಅಂತ ಭಾರ್ಗವಿ ಪ್ಲ್ಯಾನ್ ಮಾಡಿದ್ದಾಳೆ.
ನಿಶ್ಚಿತಾರ್ಥದ ದಿನ ಸೀತಾ ಗೌನ್ ಹಾಕಬೇಕು, ತನ್ನ ಮನೆಯ ಪ್ರತಿಷ್ಠೆಗೆ ತಕ್ಕಂತೆ ಗೌನ್ ಹಾಕಬೇಕು ಅಂತ ಭಾರ್ಗವಿ ನಿರ್ಧಾರ ಮಾಡಿದ್ದಾಳೆ. ಇದಿನ್ನೂ ಸೀತಾ ಕಿವಿಗೆ ಬಿದ್ದಿಲ್ಲ. ಯಾವಾಗಲೂ ಚೂಡಿದಾರ್, ಸೀರೆ ಧರಿಸುವ ಸೀತಾ ಮಾಡರ್ನ್ ಸ್ಟೈಲ್ನ ಗೌನ್ ಹಾಕ್ತಾಳಾ? ಇಲ್ಲವಾ? ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


