ಈ ಸಲದ ಲೋಕಸಭಾ ಚುನಾವಣಾ ಸಮೀಕ್ಷೆಗಳ ಮಾದರಿಯಲ್ಲಿಯೇ ಕಳೆದೆರಡು ಲೋಕಸಭಾ ಚುನಾವಣೆಗಳ ಸಮೀಕ್ಷೆಗಳು ಜನರಲ್ಲಿ ಕುತೂಹಲವನ್ನು ಉಂಟು ಮಾಡಿದ್ದವು. ಸಮೀಕ್ಷೆಗಳು ಎಷ್ಟರಮಟ್ಟಿಗೆ ಸತ್ಯವಾಗುತ್ತವೆ ಮತ್ತು ಯಾರ ಸಮೀಕ್ಷೆ ಪ್ರಕಾರ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತದೆ ಎನ್ನುವ ಆಸಕ್ತಿ ಜನರಲ್ಲಿ ಮೂಡಿಸಿತ್ತು.
2019ರ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎಗೆ ಸುಮಾರು 285 ಸ್ಥಾನಗಳು ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಬಿಜೆಪಿ ನೇತೃತ್ವದ ಮೈತ್ರಿಕೂಟವು 353 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಿತ್ತು. ಆಗ ಬಿಜೆಪಿ ಪಕ್ಷವು 303 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ಪಕ್ಷವು 52 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಒಟ್ಟು ಯುಪಿಎ ಒಕ್ಕೂಟ 91 ಸ್ಥಾನಗಳನ್ನು ಗಳಿಸಿತ್ತು.
2014ರ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಸುಮಾರು 257-340 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಎನ್‌ಡಿಎ 336 ಸ್ಥಾನಗಳನ್ನು ಭರ್ಜರಿ ಗೆಲುವು ಸಾಧಿಸಿತ್ತು. 2014ರಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 44 ಸೀಟುಗಳನ್ನು ಪಡೆದು ಹೀನಾಯ ಸ್ಥಿತಿ ತಲುಪಿತ್ತು. ಆಶ್ಚರ್ಯವೆಂದರೆ ಜಯಲಲಿತ ನೇತೃತ್ವದ ಎಐಡಿಎಂಕೆ ಪಕ್ಷವು 37 ಸೀಟುಗಳನ್ನು ಪಡೆದು ರಾಷ್ಟ್ರದಲ್ಲಿಯೇ ಮೂರನೆಯ ಅತಿ ಹೆಚ್ಚು ಸೀಟು ಗೆದ್ದ ಪಕ್ಷವಾಗಿ ಹೊರಹೊಮ್ಮಿತ್ತು. ಪಶ್ಚಿಮ ಬಂಗಾಳದ ಅಧಿನಾಯಕಿ ಮಮತಾ ಬ್ಯಾನರ್ಜಿಯವರ ಆಲ್ ಇಂಡಿಯಾ ಮೂಲಕ ಕಾಂಗ್ರೆಸ್ ಪಕ್ಷವು 34 ಸೀಟುಗಳನ್ನು ಬಾಚಿಕೊಂಡಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


