ರೈತರು ತಮ್ಮ ದಿನನಿತ್ಯದ ಆರ್ಥಿಕತೆಯ ಹಿತದೃಷ್ಟಿಯಿಂದ ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ. ಬಿರು ಬೇಸಿಗೆಯಿಂದ ತರಕಾರಿ, ಸೊಪ್ಪು ಬೆಳೆ ಬಾರದೆ ತರಕಾರಿ ಬೆಲೆ ಗಗನ ಮುಟ್ಟಿದೆ. ಜತೆಗೆ ಕೊತ್ತಂಬರಿ ಸೊಪ್ಪಿನ ಇಳುವರಿಯೂ ಇಲ್ಲದೆ, ಬೆಲೆ ಕೈಗೆಟುಕದಾಗಿದೆ.
ಕೊತ್ತಂಬರಿ ಸೊಪ್ಪು ಹೆಚ್ಚು ಪೌಷ್ಟಿಕಾಂಶದ ಸಾರವನ್ನು ಹೊಂದಿದೆ. ಜತೆಗೆ ವಿಶಿಷ್ಟವಾದ ತಾಜಾತನ ಪರಿಮಳ ಹೊಂದಿದೆ. ಮಾಂಸದೂಟ ತಯಾರಿಕೆಯಲ್ಲಿ ಸಲಾಡ್ ಗಳು, ಪಾನೀಯಗಳಿಗೆ ಬಳಸಲಾಗುತ್ತದೆ. ಜತೆಗೆ ಆಯುರ್ವೇದ, ವೈದ್ಯಕೀಯ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ವಿಟಮಿನ್ ಎ, ಕೆ ಮತ್ತು ಸಿ ಹಾಗೂ ಖನಿಜಗಳನ್ನು ಹೊಂದಿದೆ.
ರೈತರು ತಮ್ಮ ದಿನನಿತ್ಯದ ಆರ್ಥಿಕತೆಯ ಹಿತದೃಷ್ಟಿಯಿಂದ ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ. ಬಿರು ಬೇಸಿಗೆಯಿಂದ ತರಕಾರಿ, ಸೊಪ್ಪು ಬೆಳೆ ಬಾರದೆ ತರಕಾರಿ ಬೆಲೆ ಗಗನ ಮುಟ್ಟಿದೆ. ಜತೆಗೆ ಕೊತ್ತಂಬರಿ ಸೊಪ್ಪಿನ ಇಳುವರಿಯೂ ಇಲ್ಲದೆ, ಬೆಲೆ ಕೈಗೆಟುಕದಾಗಿದೆ. ಒಂದು ಕಟ್ಟು ಸೊಪ್ಪಿಗೆ (ಸುಮಾರು ಒಂದು ಕೆ.ಜಿ.) 350ರಿಂದ 375 ರೂ. ದುಬಾರಿ ಬೆಲೆ ನೀಡಿ ಖರೀದಿಸುವಂತಾಗಿದೆ. ಆಹಾರದ ರುಚಿ ಹೆಚ್ಚಿಸಲು ಮತ್ತು ಪರಿಮಳ ಸೇರಿಸಲು ಕೊತ್ತಂಬರಿ ಸೊಪ್ಪನ್ನು ಬಳಸಲಾಗುತ್ತದೆ. ಆದರೆ ಅದನ್ನು ಖರೀದಿಸಲು ಬೆಲೆ ಕೇಳಿಯೇ ಗ್ರಾಹಕರು ಹುಬ್ಬೇರುವಂತಾಗಿದೆ.
ಕೊತ್ತಂಬರಿ ಸೊಪ್ಪು ಮಾಂಸಾಹಾರಿ ಮತ್ತು ಶಾಖಾರಿಗಳಿಗೂ ಅಡುಗೆ ತಯಾರಿಕೆಗೆ ಅತ್ಯಗತ್ಯವಾಗಿ ಬೇಕಿದೆ. ಆದರೆ ಅತಿಯಾದ ಬಿಸಿಲಿಗೆ ಸೊಪ್ಪು ಸಮರ್ಪಕವಾಗಿ ಬರಲಿಲ್ಲ. ಇದೀಗ ಮಳೆ ಹೆಚ್ಚಾಗಿ ಸೊಪ್ಪು ಕೊಳೆಯುತ್ತಿದೆ. ಇದರಿಂದ ಕೊತ್ತಂಬರಿ ಸೊಪ್ಪಿನ ಇಳುವರಿ ಕುಂಠಿತವಾಗಿದ್ದು, ಒಂದು ಕಟ್ಟು ಸೊಪ್ಪಿಗೆ ದಿಢೀರನೆ 350ರಿಂದ 375 ರೂ.ಗಳವರೆಗೆ ಏರಿಕೆಯಾಗಿದೆ. ಒಂದು ಕಾಲದಲ್ಲಿ5 ರೂ.ಗೆ ಒಂದು ಹಿಡಿ ಕೊತ್ತಂಬರಿ ಸೊಪ್ಪು ಕೊಡುತ್ತಿದ್ದೆವು. ಆದರೆ ಇದೀಗ ಕನಿಷ್ಠ 20 ರೂ.ಗೆ ಸೊಪ್ಪು ಕೊಡದಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


