ಸರಗೂರು: ರಾಜ್ಯಾದ್ಯಂತ ಕಳೆದ ಒಂದೂವರೆ ತಿಂಗಳಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಪುನರಾಂಭಗೊಂಡಿದ್ದು, ರಜೆಯ ಖುಷಿಯಲ್ಲಿದ್ದ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಿದ್ದಾರೆಂದು ಮುಖ್ಯ ಶಿಕ್ಷಕ ಬಿ.ಕೆ. ನಂಜಯ್ಯ ಹೇಳಿದರು.
ತಾಲೂಕಿನ ವಾಲ್ಮೀಕಿ ಆಶ್ರಮ ಶಾಲೆ ಬಿ ಮಟಕೆರೆ, ಗಿರಿಜನ ಆಶ್ರಮ ಶಾಲೆ ಬಸವನಗಿರಿ ಹಾಡಿ, ವಾಲ್ಮೀಕಿ ಆಶ್ರಮ ಶಾಲೆ ಮೇಟಿಕುಪ್ಪೇ ಗ್ರಾಮದ ಸರ್ಕಾರಿ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡಿ, ಪುಸ್ತಕ ವಿತರಿಸಿ ಸಿಹಿ ಹಂಚಿ ಬರಮಾಡಿಕೊಂಡರು.

ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ಶಾಲೆಗೆ ಬರುವ ಮೊದಲ ದಿನ ಶಾಲೆಯಲ್ಲಿ ಬಿಸಿಯೂಟ ಸಿದ್ಧಪಡಿಸಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಬಿಸಿಯೂಟ ಬಡಿಸಲಾಯಿತು.
ಮಕ್ಕಳ ಪೋಷಕರೊಂದಿಗೆ ಸಂವಾದ ನಡೆಸಿ ನಿಮ್ಮ ಮಕ್ಕಳ ಹೆಸರನ್ನು ನೊಂದಾಯಿಸಿಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಬಿಕೆ ನಂಜಯ್ಯ, ಸಹ ಶಿಕ್ಷಕರುಗಳಾದ ನಂದಕುಮಾರ, ಉಮೇಶ್, ಶ್ವೇತಾ ಎನ್, ಸುಮಲತಾ, ಸದಾನಂದ, ಬಿ ಮಟ್ಟಕೆರೆ ಶಾಲೆಯ ಸಹ ಶಿಕ್ಷಕರಾದ ಬಸವರಾಜು ಸಣ್ಣ ಸ್ವಾಮಿ, ಪ್ರಮುಖ ವೀರಭದ್ರ, ರಾಮಚಂದ್ರ, ಶ್ರೀದೇವಿ, ಆಶ್ರಮ ಶಾಲೆ ಮೇಟಿಕುಪ್ಪೆ ಸಹ ಶಿಕ್ಷಕರುಗಳಾದ, ರವಿಕುಮಾರ್, ಕುಮಾರ್ ಎಚ್ಎಂ, ನಾಗರಾಜು ಎಚ್ ಎನ್, ಸಂಗೀತ, ಹರೀಶ್, ಅಡುಗೆ ಸಿಬ್ಬಂದಿಯವರು ಹಾಗೂ ಪೋಷಕರ ಕಮಿಟಿಯ ಸದಸ್ಯರಾದ ಸುರೇಂದ್ರ ಮತ್ತು ಕೃಷ್ಣ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


