ವಿಷಕಾರಿ ಹಾವು ಕಚ್ಚಿದ ಪರಿಣಾಮ ಸುಬ್ರಹ್ಮಣ್ಯ ಸಮೀಪದ ಹರಿಹರದಲ್ಲಿ ಮಹಿಳೆಯೊಬ್ಬರು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ದೇವಮ್ಮ (60 ವರ್ಷ) ಸಾವಿಗೀಡಾದ ಮಹಿಳೆಯಾಗಿದ್ದಾರೆ.
ಅವರು ಭಾನುವಾರ ಬೆಳಗ್ಗೆ 9.45 ರ ಹೊತ್ತಿಗೆ ಮನೆಯಲ್ಲಿದ್ದ ವೇಳೆ ಹಾವು ಕಚ್ಚಿದೆ. ಕೋಳಿ ಮೊಟ್ಟೆಯನ್ನು ತಿನ್ನುವುದಕ್ಕಾಗಿ ಕೋಳಿ ಕಾಪುವಿನ ಜಾಗಕ್ಕೆ ಹಾವು ಬಂದಿತ್ತು. ಈ ಹಾವು ಇರುವುದು ಮಹಿಳೆಯ ಗಮನಕ್ಕೆ ಬಂದಿರುವುದಿಲ್ಲ. ಅರಿವಿಲ್ಲದೆ ಕಾಪಿನತ್ತ ಹೋದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಮನೆಯವರಿಗೆ ವಿಷಯ ಗೊತ್ತಾಗಲಿಲ್ಲ ಎಂದು ತಿಳಿದು ಬಂದಿದೆ. ಮನೆಯವರಿಗೆ ವಿಷಯ ಗೊತ್ತಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸುಳ್ಯದ ಆಸ್ಪತ್ರೆಗೆ ತಲುಪಿದಾಗ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


