ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಮೈಸೂರಿನ ಶ್ವಾನವೊಂದು ಭವಿಷ್ಯ ನುಡಿದಿದೆ. ಮೈಸೂರಿನಲ್ಲಿ ಈ ವಿಶೇಷವಾದ ದೇವರ ನಾಯಿ ಮೋದಿ ಮತ್ತೊಂದು ಬಾರಿ ಪ್ರಧಾನಿಯಾಗುತ್ತಾರೆ ಎಂದಿದೆ.
ಮೋದಿ ಹಾಗೂ ರಾಹುಲ್ ಗಾಂಧಿ ಫೋಟೋವನ್ನ ಕಾಲಭೈರವೇಶ್ವರ ದೇವರ ಮುಂದೆ ದೇವಾಲಯದ ಅರ್ಚಕ ಇಟ್ಟಿದ್ದಾರೆ. ಈ ಬಾರಿ ಯಾರು ಪ್ರಧಾನಿಯಾಗುತ್ತಾರೆ ಎಂಬುದನ್ನ ನಮ್ಮ ಭೈರವ ತಿಳಿಸ್ತಾನೆ ಎಂದು ಹೇಳಿ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ನಂತರ ಅಲ್ಲಿದ್ದ ಫೋಟೊವನ್ನು ಅದಲು ಬದಲು ಮಾಡಿಟ್ಟಿದ್ದಾರೆ. ತಕ್ಷಣ ಭೈರವೇಶ್ವರ ಶ್ವಾನವು ಮೋದಿ ಫೋಟೋವನ್ನು ಹುಡುಕಿ ತೆಗೆದು ಬಾಯಿಯಿಂದ ಕಚ್ಚಿಕೊಂಡು ಬಂದಿದೆ. ಆ ಮೂಲಕ ಶ್ವಾನ ಮೋದಿ ಪ್ರಧಾನಿಯಾಗುತ್ತಾರೆ ಎಂದಿದೆ ಎಂದು ಕಾಲಭೈರವೇಶ್ವರನ ಅರ್ಚಕರು ತಿಳಿಸಿದ್ದಾರೆ. ಈ ಸಂಬಂಧಿ ಇನ್ಸ್ಟಾಗ್ರಾಮ್ ಪೋಸ್ಟ್ ಇದೀಗ ವೈರಲ್ ಆಗಿದೆ.
ಇದೇ ಸಂದರ್ಭದಲ್ಲಿ ಮೈಸೂರಿನ ರಾಜ ಮನೆತನದ ಯದುವೀರ್ ಫೋಟೋ ಸೆಲೆಕ್ಟ್ ಮಾಡಿರುವ ಭೈರವೇಶ್ವರ ಶ್ವಾನವು ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲ್ಲುತ್ತಾರೆಂದು ಕೂಡ ಭವಿಷ್ಯ ಹೇಳಿದೆ. ಭೈರವೇಶ್ವರ ಶ್ವಾನ ಭವಿಷ್ಯ ನುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


