ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ನಿಂದ ರಕ್ಷಿಸುವುದಕ್ಕಾಗಿ ಶ್ರೀರಾಮ ಸೇನೆ ಆರಂಭಿಸಿರುವ ಸಹಾಯವಾಣಿಗೆ 4 ದಿನದಲ್ಲಿ 17 ಬೆದರಿಕೆ ಕರೆಗಳು ಬಂದಿವೆ.
ಮೇ29ರಂದು ಹಿಂದೂ ಯುವತಿಯರ ರಕ್ಷಣೆಗಾಗಿ ಶ್ರೀರಾಮ ಸೇನೆ ಸಹಾಯವಾಣಿಯನ್ನು ತೆರೆದಿತ್ತು. ಕೇವಲ ನಾಲ್ಕು ದಿನಗಳಲ್ಲಿ 400ಕ್ಕೂ ಹೆಚ್ಚು ಅಧಿಕ ಕರೆಗಳು ಸಹಾಯವಾಣಿಗೆ ಬಂದಿದೆ. ಈ ಬಗ್ಗೆ ಮಾತನಾಡಿರುವ ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಗಂಗಾಧರ ಕುಲಕರ್ಣಿ, ಸಹಾಯವಾಣಿಗೆ 37 ಕರೆಗಳು ಬಂದಿವೆ. 42 ಪ್ರೋತ್ಸಾಹಕ ಕರೆಗಳಾಗಿವೆ. 52 ಲವ್ ಜಿಹಾದ್ ಸಂತ್ರಸ್ತರ ಕರೆಗಳಾಗಿವೆ. ಇವುಗಳಲ್ಲಿ ಹೊರ ರಾಜ್ಯದ ಸಂತ್ರಸ್ತರಿಂದಲೂ ಕರೆ ಬಂದಿದೆ. ಈ ನಡುವೆ ಬೆದರಿಕೆ ಕರೆಗಳು ಕೂಡ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಫೇಸ್ ಬುಕ್ ಮತ್ತು ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣದಲ್ಲೂ ಸಹಾಯವಾಣಿ ಬ್ಲಾಕ್ ಮಾಡಿಸಲಾಗಿದೆ. ನಮ್ಮ ಸಹಾಯವಾಣಿ ಸರಿಯಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ವಿರೋಧಿಗಳಿಗೆ ಬೆಂಕಿ ಬಿದ್ದಿದೆ ಎಂದು ಕಿಡಿಕಾರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


