ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದ ಬಳಿ ದುಷ್ಕರ್ಮಿಗಳಿಂದ ವಾಮಾಚಾರ ನಡೆದಿದೆ. ಮರದ ಪೊದೆಯಲ್ಲಿ ಎರಡು ಮೊಟ್ಟೆಗಳನ್ನು ಇಟ್ಟು ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ.
ಚುನಾವಣೆಯ ಫಲಿತಾಂಶದಲ್ಲಿ ಗೆಲವು ಸಾಧಿಸಲು ಯಾರಾದರೂ ಹೀಗೆ ಮಾಡಿದ್ದರಾ ಎಂಬ ಅನುಮಾನ ಮೂಡಿದೆ. ಮೊಟ್ಟೆಯನ್ನು ತಂದಿಟ್ಟವರು ಯಾರು? ನಿಜಕ್ಕೂ ಅಲ್ಲಿ ವಾಮಾಚಾರ ನಡೆದಿದ್ಯಾ ಅಥವಾ ಮರದಡಿ ಕುಳಿತಾಗ ಮರೆತು ಬಿಟ್ಟು ಹೋಗಿದ್ದರಾ ಎಂಬುದು ತಿಳಿದು ಬಂದಿಲ್ಲ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಲ್ಹಾದ್ ಜೋಶಿ ಗೆಲುವು ಸಾಧಿಸಿದ್ದಾರೆ. ಐದನೆಯ ಬಾರಿಯೂ ಮತದಾರರು ಪ್ರಲ್ಹಾದ್ ಜೋಶಿ ಅವರನ್ನು ಗೆಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ 6,82,400 ಮತ ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ 5,87,397 ಮತ ಪಡೆದು, 95,003 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


