ಪಿಯುಸಿ (PUC) ನಂತರದಲ್ಲಿ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಒಂದು ದೊಡ್ಡ ತಲೆ ನೋವಾಗಿರುತ್ತದೆ. ಪಿಯುಸಿ ಮುಗಿಸಿದ ನಂತರ ಅವರಲ್ಲಿರುವ ಆಸಕ್ತಿಗನುಗುಣವಾಗಿ ಅವರು ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ನೋಡಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಪಿಯುಸಿ ನಂತರ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಉದ್ಯೋಗ ಬೇಗನೆ ಸಿಗುತ್ತದೆ ಎಂದು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ, ಕೆಲವು ಕೋರ್ಸ್ಗಳ ವಿವರವನ್ನು ನೀಡಲಾಗಿದೆ.
ಈಗಂತೂ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ, ಅದರಲ್ಲಿ ತಂತ್ರಜ್ಞಾನದ ಬಗ್ಗೆ ಅರಿವಿರುವುದು ತುಂಬಾನೇ ಮುಖ್ಯವಾಗಿರುತ್ತದೆ. ನೀವು ಸಹ ಅಂತಹ ವೃತ್ತಿಜೀವನವನ್ನು ಹುಡುಕುತ್ತಿದ್ದರೆ, ಇಲ್ಲಿವೆ ನೋಡಿ ಕೆಲವು ವೃತ್ತಿ ಆಯ್ಕೆಗಳು.
ಚಾರ್ಟೆಡ್ ಅಕೌಂಟೆನ್ಸಿ (CA): ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆಂಟ್ ಆಗುವತ್ತ ಗಮನಹರಿಸಬಹುದು . ಈ ಹುದ್ದೆಯಲ್ಲಿ ಹೆಚ್ಚಿನ ಸಂಬಳ ಪಡೆಯುವ ಅವಕಾಶವಿರುತ್ತದೆ. ಆದರೆ ಪರಿಶ್ರಮ ಕೂಡ ಇದಕ್ಕೆ ಅಗತ್ಯವಿದೆ. ಈ ಕೋರ್ಸ್ ಮಾಡಲು ಮೂರು ಹಂತದ ಕಠಿಣ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.
ಬ್ಯಾಚುಲರ್ ಆಫ್ ಲಾ( ವಕೀಲ ವೃತ್ತಿ): ವಕೀಲ ವೃತ್ತಿ ತುಂಬಾನೆ ಕಷ್ಟದ ಕೆಲಸ. ಒಂದು ಕೇಸ್ ಗೆದ್ದರೆ ಒಳ್ಳೆಯ ಸಂಬಳ ಸಿಗುತ್ತದೆ. ಆದರೆ ಆ ಕೇಸ್ ಗೆಲ್ಲುವುದು ಅಷ್ಟು ಸುಲಭವಲ್ಲ. ನೀವು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರಿದ್ದರೆ ಎಲ್ಎಲ್ಬಿ ಪದವಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಡಿಯಲ್ಲಿ ಬರುವ ಸಂಸ್ಥೆಯಲ್ಲಿ ಮಾಡಬೇಕು ಮತ್ತು ಅಭ್ಯರ್ಥಿಗಳು ಆಲ್ ಇಂಡಿಯಾ ಬಾರ್ ಎಕ್ಸಾಮಿನೇಷನ್ (ಎಐಬಿಇ) ಪರೀಕ್ಷೆಯಲ್ಲಿ ಪಾಸ್ ಆಗಬೇಕು.
ಫ್ಯಾಷನ್ ಡಿಸೈನಿಂಗ್: ತಾಂತ್ರಿಕ ಕೆಲಸಗಳ ಬದಲು ಕಲಾತ್ಮಕ ಕೆಲಸಗಳನ್ನು ಮಾಡುವ ಬಯಕೆ ಇದ್ದರೆ ನೀವು ಈ ಕೋರ್ಸ್ ಮಾಡಬಹುದು. ಫ್ಯಾಷನ್ ಡಿಸೈನಿಂಗ್ನಲ್ಲಿ ಡಿಪ್ಲೊಮೊ ಮಾಡಬಹುದು. ಇದರ ಜೊತೆ ಆಭರಣಗಳ ಡಿಸೈನಿಂಗ್ ಸಹ ಕಲಿಯಲು ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ ಜನರು ಡಿಸೈನರ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಿರುವುದರಿಂದ ಒಳ್ಳೆಯ ಕೆಲಸದ ಜೊತೆ ಸಂಬಳವೂ ಸಿಗುತ್ತದೆ.
ಟೂರಿಸಮ್: ಇತ್ತೀಚೆಗೆ ಬಹಳ ದೊಡ್ದ ಪ್ರಮಾಣದಲ್ಲಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮವೂ ಒಂದು. ಪ್ರವಾಸ ಒಂದು ಉದ್ಯಮವಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ಉದ್ಯೋಗ ಬೇಡಿಕೆಯೂ ಗಣನೀಯವಾಗಿ ಹೆಚ್ಚಾಗಿದೆ.
ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಅಂಡ್ ಶೀನ್ ಲರ್ನಿಂಗ್: ಎಐ ಅಂಡ್ ಎಂ ಎಲ್ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡಲಾಗುತ್ತಿರುವ ಈ ಪದವಿಯು ಇತ್ತೀಚೆಗೆ ವಿಪುಲವಾದ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿದೆ. ರೋಬೋಟ್ ತಂತ್ರಜ್ಞಾನದಿಂದ ಹಿಡಿದು ಕೃಷಿಯವರೆಗೆ ಇದರ ಉಪಯೋಗವಿದೆ.
ಕರ್ನಾಟಕದಲ್ಲಿ ಬರೋಬ್ಬರಿ 30 ಇಂಜಿನಿಯರಿಂಗ್ ವಿಭಾಗಗಳಿವೆ. ಹೌದು ಅವೆಲ್ಲದರ ಮಾಹಿತಿ ಇಲ್ಲಿದೆ.
1. ಏರೊನೊಟಿಕಲ್ ಇಂಜಿನಿಯರಿಂಗ್
2. ಏರೋಸ್ಪೇಸ್ ಇಂಜಿನಿಯರಿಂಗ್
3. ಆಟೋಮೊಬೈಲ್ ಇಂಜಿನಿಯರಿಂಗ್
4. ಬಯೋಮೆಡಿಕಲ್ ಇಂಜಿನಿಯರಿಂಗ್
5.ಬಯೋಟೆಕ್ನಾಲಜಿ ಇಂಜಿನಿಯರಿಂಗ್
6. ಸೆರಮಿಕ್ ಇಂಜಿನಿಯರಿಂಗ್
7. ಕೆಮಿಕಲ್ ಇಂಜಿನಿಯರಿಂಗ್
8. ಸಿವಿಲ್ ಇಂಜಿನಿಯರಿಂಗ್
9. ಕಮ್ಯುಮಿಕೇಶನ್ಸ್ ಇಂಜಿನಿಯರಿಂಗ್
10. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್
11. ಕಂಸ್ಟ್ರಕ್ಷನ್ ಇಂಜಿನಿಯರಿಂಗ್
12. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೆಶನ್ ಇಂಜಿನಿಯರಿಂಗ್
13. ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
14. ಎನ್ವಿರೊನ್ಮೆಂಟಲ್ ಇಂಜಿನಿಯರಿಂಗ್
15. ಇಂಡಸ್ಟ್ರಿಯಲ್ ಇಂಜಿನಿಯರಿಂಗ್
16. Marine ಇಂಜಿನಿಯರಿಂಗ್
17 ಮೆಕ್ಯಾನಿಕಲ್ ಇಂಜಿನಿಯರಿಂಗ್
18. Mechatronics ಇಂಜಿನಿಯರಿಂಗ್
19 Metallurgical ಇಂಜಿನಿಯರಿಂಗ್
20 Mining ಇಂಜಿನಿಯರಿಂಗ್
21. ಪೆಟ್ರೋಲಿಯಂ ಇಂಜಿನಿಯರಿಂಗ್
22. ಪವರ್ ಇಂಜಿನಿಯರಿಂಗ್
23. ಪ್ರೊಡಕ್ಷನ್ ಇಂಜಿನಿಯರಿಂಗ್
24. ರೊಬೋಟಿಕ್ಸ್ ಇಂಜಿನಿಯರಿಂಗ್
25. Structural ಇಂಜಿನಿಯರಿಂಗ್
26. ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್
27. ಟೆಕ್ಸ್ಟೈಲ್ ಇಂಜಿನಿಯರಿಂಗ್
28. ಟೂಲ್ ಇಂಜಿನಿಯರಿಂಗ್
29. ಟ್ರಾಂನ್ಸಪೋರ್ಟ್ ಇಂಜಿನಿಯರಿಂಗ್
30. ಎಲೆಕ್ಟ್ರಿಕಲ್ಸ್ ಇಂಜಿನಿಯರಿಂಗ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


