ಸುದ್ದಿಗೋಷ್ಠಿಯಲ್ಲಿ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, “ಸಿದ್ದರಬೆಟ್ಟದ ಕ್ಷೇತ್ರದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವರ್ಷದ ವಾರ್ಷಿಕೋತ್ಸವ, ಶ್ರೀಜಗದ್ಗುರು ರೇಣುಕಾಚಾರ್ಯರ, ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಹಾಗೂ 25ಕ್ಕೂ ಹೆಚ್ಚು ಸಾಮೂಹಿಕ ವಿವಾಹಗಳು, ಜನಾಜಾಗೃತಿ ಧರ್ಮ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ.

ಧಾರ್ಮಿಕ ಮತ್ತು ಸಮಾಜಿಕವಾಗಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ. ಮಠದ ಭಕ್ತರನ್ನು ವಿಶೇಷವಾಗಿ ಪ್ರೀತಿ ವಾತ್ಸಲ್ಯದಿಂದ ಕಾಣುವ ಉದ್ದೇಶಪೂರ್ವಕವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ದೇಶದ ಸಂಸ್ಕೃತಿ, ಜೂ.೮ ಪುಸ್ತಕದ ದಾಸೋಹ, ತಂತ್ರಜ್ಞಾನದ ಬಳಕೆಯಿಂದ ಪುಸ್ತಕದ ಕಡೆ ಗಮನ ಹರಿಸುವುದು ಈಗಿನ ಯುವ ಪೀಳಿಗೆಯಲ್ಲಿ ಕಡಿಮೆಯಾಗಿದೆ. ಪುಸ್ತಕದ ದಾಸೋಹವನ್ನು 3 ವರ್ಷದಿಂದಲೂ ನಡೆಸಿಕೊಂಡು ಬಂದಿದ್ದು, ಪ್ರತಿ ವರ್ಷ 10ಸಾವಿರಕ್ಕೂ ಅಧಿಕ ಪುಸ್ತಕವನ್ನು ವಿತರಣೆ ಮಾಡಲಾಗಿದೆ. ಇದರಿಂದ ಬಡಕುಟುಂಬದ ಉಜ್ವಲ ಭವಿಷ್ಯಕ್ಕೆ ಕಾರಣಾವಾಗುತ್ತದೆ. ಸಿದ್ದೇಶ್ವರ ಸ್ವಾಮಿಗೆ ಬಿಲ್ಪಾರ್ಚನೆ, ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ವಾರ್ಷಿಕೋತ್ಸವದ ಧಾರ್ಮಿಕ ಸಮಾರಂಭ ನಡೆಯುತ್ತದೆ.
ಸಾಮೂಹಿಕ ದೀಕ್ಷಾವನ್ನು ನೀಡಲಾಗುವುದು. ರಂಭಾಪುರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಇನ್ಪೋಸಿಸ್ ಸುಧಾಮೂರ್ತಿಯವರ ಸಹಕಾರದಿಂದ ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ. ಧರ್ಮಸ್ಥಳದ ವೀರೆಂದ್ರ ಹೆಗ್ಗಡೆಯವರು ಮಾಂಗಲ್ಯ, ಮೂಗುತಿಯಲ್ಲಿ ನೀಡುತ್ತಿದ್ದಾರೆ. ದಾನಿಗಳಿಂದ ದಾಸೋಹದ ವ್ಯವಸ್ಥೆ ಕೂಡ ಮಾಡಲಾಗಿದ್ದು, ಜಿಲ್ಲೆಯಿಂದ ವಧು-ವರರು ಆಗಮಿಸಿ ಉಚಿತವಾಗಿ ಸಮವಸ್ತ್ರ, ಮಾಂಗಲ್ಯ ಹೀಗೆ ವಿವಾಹದ ಖರ್ಚನ್ನು ಮಠವೇ ವಹಿಸಿಕೊಂಡು ಶುಭ ಲಗ್ನದಲ್ಲಿ ಈ ಕಾರ್ಯಕ್ರಮ ನಡೆಯುವುದು.
ಸಮಾರಂಭದ ಅಧ್ಯಕ್ಷತೆ ಸಚಿವ ಪರಮೇಶ್ವರ, ಉದ್ಘಾಟನೆಯನ್ನು ಸಚಿವ ಕೆ.ಎನ್. ರಾಜಣ್ಣ, ಮಾಜಿ ಸಂಸದ ಬಸವರಾಜು, ಮುದ್ದಹನುಮೇಗೌಡರು, ಜ್ಯೋತಿ ಗಣೇಸ್, ಸುರೇಶ್ ಗೌಡ, ರಾಜೇಂದ್ರ ರಾಜಣ್ಣ, ಜಿ.ಎಸ್ ಪಾಟೀಲ್, ಮಾಜಿ ಶಾಸಕ ಪಿಆರ್ ಸುಧಾಕರ್ ಲಾಲ್, ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಮಠದ ಸದ್ಭಕ್ತರು ಭಾಗವಹಿಸಲಿದ್ದಾರೆ” ಎಂದರು.
ಹೆಚ್. ಮಹದೇವರವರು ಮಠದ ಕಟ್ಟಡಕ್ಕೆ ಶ್ರಮಿಸಿದ್ದಾರೆ. ಸಿದ್ದಮಲ್ಲಪ್ಪ, ಶಿವಕುಮಾರ್, ಪವನ್ ಕುಮಾರ್, ಎ.ಡಿ ಬಲರಾಮಯ್ಯ, ಕಾಮರಾಜು, ಸದಾಶಿವಯ್ಯ, ಮಲ್ಲಣ್ಣ, ಸುರೇಶ್, ಜಗದೀಶ್, ಕುಸುಮ ಜಗನಾಥ್, ರಾಜಣ್ಣ, ಪರ್ವತಯ್ಯ, ಕಾಳಪ್ಪ, ನಟರಾಜು. ಮಂಜುನಾಥ್, ಭದ್ರಣ್,. ತುಂಬಾಡಿ ಲಕ್ಷ್ಮೀಶ್ ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


