ಚಂದನ್ ಶೆಟ್ಟಿ – ನಿವೇದಿತಾ ಗೌಡ ದಿಢೀರ್ ಅಂತ ವಿಚ್ಛೇದನ ಪಡೆದಿಲ್ಲ. ಒಂದು ವರ್ಷದ ಹಿಂದೆಯೇ ತೀರ್ಮಾನ ಆಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನ ಲಾಯರ್ ಅನಿತಾ ಬಿಚ್ಚಿಟ್ಟಿದ್ದಾರೆ.
‘’ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಂದು ವರ್ಷದ ಹಿಂದೆಯೇ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಮಾತುಕತೆ ನಡೆಯುತ್ತಿತ್ತು. ಕುಟುಂಬದ ಹಿರಿಯರು ಮಾತನಾಡಿ ಸಂಧಾನಕ್ಕೆ ಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಇಬ್ಬರಲ್ಲೂ ಅವರದ್ದೇ ಆದ ವೃತ್ತಿಜೀವನದ ಕನಸುಗಳಿವೆ. ಹೀಗಾಗಿ, ವರ್ಷದ ಹಿಂದೆಯೇ ಡಿವೋರ್ಸ್ ತೀರ್ಮಾನ ಮಾಡಿಕೊಂಡಿದ್ದರು’’ ಎಂದು ಲಾಯರ್ ಅನಿತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇಬ್ಬರ ಪೋಷಕರೂ ತುಂಬಾ ಪ್ರಯತ್ನ ಪಟ್ಟಿದ್ದಾರೆ. ಆದರೆ, ಒಂದು ಮಾಡಲು ಸಾಧ್ಯವಾಗಿಲ್ಲ. ಒಂದು ವರ್ಷದಿಂದ ವಿಚ್ಛೇದನದ ನಿರ್ಧಾರ ಮಾಡಿದ್ದರು. ಹೀಗಾಗಿ, 6 ತಿಂಗಳು ವೇಯ್ಟಿಂಗ್ ಪೀರಿಯಡ್ ನೀಡದೆ ಕಾನೂನಾತ್ಮಕವಾಗಿ ವಿಚ್ಛೇದನ ನೀಡಲಾಗಿದೆ’’ ಎಂದು ವಕೀಲೆ ಅನಿತಾ ತಿಳಿಸಿದ್ದಾರೆ.
ಇಬ್ಬರಿಗೂ ಅವರದ್ದೇ ಆದ ಥಿಂಕಿಂಗ್ ಇದೆ. ಆದರೂ ಇಬ್ಬರೂ ಒಬ್ಬರನೊಬ್ಬರು ಗೌರವಿಸುತ್ತಾರೆ. ಯಾರೋ ಮೂರನೇ ವ್ಯಕ್ತಿಯಿಂದ ಸಮಸ್ಯೆ ಆಗಿಲ್ಲ. ಇಬ್ಬರೂ ಕೂತು ನಿರ್ಧಾರ ಮಾಡಿದ್ದಾರೆ. ಭಿನ್ನಾಭಿಪ್ರಾಯಗಳಿಂದ ತುಂಬಾ ಕ್ಲ್ಯಾಶ್ ಆಗಬಾರದು ಅಂತ ವಿಚ್ಛೇದನಕ್ಕೆ ಮುಂದಾಗಿದ್ದಾರೆ’’ ಎಂದಿದ್ದಾರೆ ವಕೀಲರಾದ ಅನಿತಾ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


