ಬೆಂಗಳೂರಿನ ನಮ್ಮ ಮೆಟ್ರೊ ಇದೀಗ ಮಾಸಿಕ 62,500 ರೂಪಾಯಿನಿಂದ 1,06,250 ರೂಪಾಯಿವರೆಗಿನ ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಬಿಎಂಆರ್ ಸಿಎಲ್ ಸಂಸ್ಥೆಯು ಸ್ವತ್ತು ಅಭಿವೃದ್ಧಿ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ (ಸಿವಿಲ್) 1 ಪೋಸ್ಟ್, ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್) 4, ಅಸಿಸ್ಟೆಂಟ್ ಇಂಜಿನಿಯರ್ (ಇ ಅಂಡ್ ಎಂ) 1, ಅಸಿಸ್ಟೆಂಟ್ ಮ್ಯಾನೇಜರ್ (ಮಾರ್ಕೆಟಿಂಗ್) 1 ಸೇರಿದಂತೆ ಒಟ್ಟು 7 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ಮಾಸಿಕ ವೇತನ 1,06,250 ರೂಪಾಯಿ, ಅಸಿಸ್ಟಂಟ್ ಇಂಜಿನಿಯರ್ ಹುದ್ದಗೆ 62,500,ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಮಾಸಿಕ ವೇತನ 62,500 ರೂಪಾಯಿ ನೀಡಲಾಗುತ್ತದೆ. ಈ ಹುದ್ದೆಗಳು ಆನ್ ಲೈನ್ ನಲ್ಲು ಅರ್ಜಿ ಹಾಕಲು ಕೊನೆಯ ದಿನಾಂಕ ಜುಲೈ, 2, 2024 ಆಗಿದ್ದು, ಅರ್ಜಿಯ ಸಹಿ ಮಾಡಿದ ಪ್ರಿಂಟ್ ಔಟ್ ಅನ್ನು ಜುಲೈ 5 ಸಂಜೆ 04ರೊಳಗೆ ಸಲ್ಲಿಸಬೇಕಾಗುತ್ತದೆ. ಆಯ್ಕೆಯಾದರಿಗೆ 3 ವರ್ಷ ಅಷ್ಟೇ ಹುದ್ದೆಯಲ್ಲಿರಬಹುದಾಗಿದೆ.
ಬಿಇ, ಬಿ.ಟೆಕ್, ಎಂಬಿಎ ಮುಗಿಸಿದವರಿಗೆ ಬೆಂಗಳೂರಿನಲ್ಲಿ ಉದ್ಯೋಗ ಹರಸುತ್ತಿದ್ದರೆ ಅಂತವರಿಗೆ ನಮ್ಮ ಮೆಟ್ರೋ ಉದ್ಯೋಗವಕಾಶಗಳನ್ನು ಕಲ್ಪಿಸಿದೆ. ಜೆನೆರಲ್ ಮ್ಯಾನೇಜರ್ (ಹೆಚ್ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು- 560027 ಅರ್ಜಿ ಸಲ್ಲಿಕೆಯ ವಿಳಾಸವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA