ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು, ದೂರಾಗಲು ಚಿಕ್ಕದಾದ ಸಂಶಯ ಸಾಕು’ ಎಂದು ಚಂದನ್ ಕುರಿತಾಗಿ ಬರೆದುಕೊಂಡಿದ್ದರು. ಚಂದನ್ ಹಾಗೂ ನಿವೇದಿತಾ ಬಗ್ಗೆ ಯೂಟ್ಯೂಬ್ ಚಾನೆಲ್ ವೊಂದರ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಪ್ರಶಾಂತ್ ಸಂಬರಗಿ ಮಾತನಾಡಿ ʻʻನನಗೆ ಚಂದನ್ ಆತ್ಮೀಯ ಗೆಳೆಯ. ಚಂದನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಚಂದನ್ ನಾಯಕ. ನಾನು ಅದರಲ್ಲಿ ಪೊಲೀಸ್ ಪಾತ್ರ ಮಾಡಿದ್ದೇನೆ. 15 ದಿನಗಳ ಕಾಲ ಒಟ್ಟಿಗೆ ಶೂಟಿಂಗ್ ಮಾಡಿದ್ದೇವೆ. ಖುಷಿ ಪಟ್ಟಿದ್ದೇವೆ, ಹೊಡೆದಾಡಿಕೊಂಡಿದ್ದೇವೆ,, ಮಜಾ ಮಾಡಿದ್ದೇವೆ. ಚಂದನ್ ಹಾಗೂ ನಿವೇದಿತಾ ಸ್ಯಾಂಡಲ್‌ವುಡ್ ಪವರ್ ಕಪಲ್. ಆದರೆ ಏಕಾಏಕಿ ಅವರು ದೂರ ಆದರು. ಎಲ್ಲರೂ ಈ ವಿಷಯ ಕೇಳಿ ಶಾಕ್ ಆದರು. ಆದರೆ ನನಗೆ ಈ ವಿಚಾರ ಹೊಸದಲ್ಲ. ಒಂದು ವರ್ಷದ ಹಿಂದೆಯೇ ಗೊತ್ತಿತ್ತುʼʼ ಎಂದರು.
ʻʻಚಂದನ್ ದಸರಾದಲ್ಲಿ ಪ್ರಪೋಸ್ ಮಾಡಿರುವ ಬಗ್ಗೆ ನನ್ನ ಧಿಕ್ಕಾರ ಕೂಡ ಇತ್ತು. ಆದರೂ ಕೊನೆಗೆ ಅವೆಲ್ಲ ಕ್ಷಮಿಸಿ ಮುಂದೆ ಒಳ್ಳೆಯದಾಗಲಿ ಎಂದು ಹಾರೈಸಿದೆ. ಈ ತಿಂಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಪ್ರಮೋಷನ್ ಗೆ ಚಂದನ್ ಬರಲಿಲ್ಲ. ಹಲವು ಪ್ರಮೋಷನ್ ಗೆ ಬರಲಿಲ್ಲ. 6 ತಿಂಗಳ ಹಿಂದೆಯೇ ಚಂದನ್ ಬಗ್ಗೆ ಹಿಂಟ್ ಸಿಕ್ಕಿತ್ತು. ಚಂದನ್ ಮನಸ್ಥಿತಿ ಸರಿಯಿಲ್ಲ ಎಂದು. ಒಂದು ಪ್ರಪೋಷನ್ ಲಾಂಚ್ ಗೆ ಮನೆಯಲ್ಲಿ ಹಾಕಿರುವ ಡ್ರೆಸ್ ಹಾಕಿಕೊಂಡೇ ಚಂದನ್ ಬಂದಿದ್ದರು. ಇದಕ್ಕೆ ನಮ್ಮ ಭಿನ್ನಾಭಿಪ್ರಾಯ ಕೂಡ ಇತ್ತು. ನೀವು ಹೀರೊ ಆಗಿ ಹೀರೊ ತರಹ ಪ್ರೆಸೆಂಟ್ ಆಗಬೇಕು. ಈ ತರಹ ಅವತಾರದಲ್ಲಿ ಬರೋದು ಸರಿಯಲ್ಲ ಎಂದು ನಿರ್ದೇಶಕರು ಕೇಳಿದಾಗ, ಈ ವಿಚಾರ ಬಹಿರಂಗಪಡಿಸಿದ್ದರು. ನಂದು ಮತ್ತೆ ನಿವೇದಿತಾ ವಿಷನ್ ಮ್ಯಾಚ್ ಆಗ್ತಿಲ್ಲ. ಒಟ್ಟಿಗೆ ಬದುಕಲು ಆಗ್ತಿಲ್ಲ. ತುಂಬ ಸಮಸ್ಯೆಯಲ್ಲಿದ್ದೇನೆ. ಮುಂದೆ ಗೊತ್ತಾಗತ್ತೆ ಎಂದು ಚಂದನ್ ನಿರ್ದೇಶಕರ ಹತ್ತಿರ ಹೇಳಿಕೊಂಡಿದ್ದರು ʼ ಎಂದರು.
ʻʻದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಎಂದು ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆʼʼ ಎಂದಿದ್ದಾರೆ ಸಂಬರಗಿ. ʻʻನಿನ್ನೆ ನಗ್ತಾನೇ ಬಂದು ಹೋದರು. ಆದರೆ ಚಂದನ್‌ಗೆ ನೋವಾಗಿದೆ. ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರು ಬೇಕು ಅಂದರೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಬೆನ್ಜ್ ಹಿಂದೆ ಹೋಗಿರುವಂತವರು, ದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಅಂತ ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆ. ಚಂದನ್‌ಗೆ ನಮ್ಮ ಬ್ರದರ್ಲಿ ಸಪೋರ್ಟ್, ಎಮೋಷನಲ್ ಸಪೋರ್ಟ್ ಇದೆʼʼಎಂದರು ಪ್ರಶಾಂತ್ ಸಂಬರಗಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


