ನೀವು ಒಳ್ಳೆ ಕಥೆ ಬರೀತಿರಾ? ಎಲ್ಲಿ ಪಬ್ಲಿಷ್ ಮಾಡ್ಬೇಕು ಅಂತ ಗೊತ್ತಿಲ್ವಾ? ಹಾಗಾದ್ರೆ ಚಿಂತೆಬೇಡಿ. ‘ಕಾಂಗರೂ’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಆರೋಹ ಪ್ರೊಡಕ್ಷನ್ಸ್ ಹೊಸ ಚಿತ್ರದ ಕಥೆ ಬರೆಯಲು ಪ್ರತಿಭಾವಂತ ಬರಹಗಾರರಿಗೆ ಆಹ್ವಾನ ನೀಡಿದೆ. ಒಳ್ಳೆ ಕಥೆ ಬರೆದವವರಿಗೆ ಸೂಪರ್ ಬಹುಮಾನ ಗೆಲ್ಲವ ಅವಕಾಶ ಕೂಡ ಇದೆ.
ಮೊದಲನೇ ಬಹುಮಾನ ₹1 ಲಕ್ಷ ಮತ್ತು ಎರಡನೇ ಬಹುಮಾನವಾಗಿ ₹50,000 ನೀಡಲಾಗುವುದು. ಟಾಪ್ 10 ಉತ್ತಮ ಕಥೆಗಳಿಗೆ ತಲಾ ₹25,000 ಬಹುಮಾನ ಕೊಡಲಾಗುವುದು. ಸಿನಿಮಾ ಒಂದಕ್ಕೆ ಈ ಕಥೆಯನ್ನು ಬಳಸಿಕೊಳ್ಳಲಾಗುತ್ತದೆ.
ನಿಮ್ಮ ಶಾಲೆ ಅಥವಾ ಕಾಲೇಜಿನ ಅನುಭವದ ಮೇಲೆ ಕಥೆಯನ್ನು ಬರೆಯಬೇಕು. ಈ ಕಥೆ ಮೂರು ಪುಟಗಳ ಒಳಗೆ ಇರಬೇಕು. ನೀವು ಬರೆದ ಕಥೆಯನ್ನು ಇಮೈಲ್(E-Mail) ಅಥವಾ ವಾಟ್ಸ್ ಅಪ್(WhatsApp) ಮೂಲಕ ಕಳುಹಿಸಬಹುದು. ಸೆಲೆಕ್ಟ್ ಆದ ಕಥೆ ಬಹುಮಾನ ಪಡೆಯಲಿದೆ.
ಬೆಸ್ಟ್ ಕಥೆ ಬರೆಯುವ ಬರಹಗಾರರು ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಕೂಡ ಗಿಟ್ಟಿಸಿಕೊಳ್ಳಲಿದ್ದಾರೆ. ನಿಮ್ಮ ಲೇಖನವನ್ನ ಕಳುಹಿಸಬೇಕಾದ ನಂ. 9844460128 ಅಥವಾ ಈ kishore.megalamane@gmail.com ಇಮೈಲ್ ಗೆ ಕಳುಹಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


