ಬಹು ದೊಡ್ಡ ದುರಂತವೊಂದು ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಲ್ಪದರಲ್ಲಿ ತಪ್ಪಿದೆ. ನಿನ್ನೆ ಶನಿವಾರ, ಜೂನ್ 8ರಂದು ಸಂಜೆ ಒಂದೇ ರನ್ ವೇಯಲ್ಲಿ ಏರ್ ಇಂಡಿಯಾ ವಿಮಾನ ಟೇಕಾಫ್ ಆದರೆ, ಇಂಡಿಗೋ ವಿಮಾನ ಲ್ಯಾಂಡಿಂಗ್ ಆಗಿದೆ.
ಮುಂಬೈನಲ್ಲಿ ಏರ್ ಇಂಡಿಯಾ ವಿಮಾನ ತಿರುವನಂತಪುರಂಗೆ ಟೇಕಾಫ್ ಆಗುತ್ತಿತ್ತು. ಸರಿಯಾಗಿ ಆ ಸಮಯದಲ್ಲಿ ಇಂದೋರ್‌ನಿಂದ ಇಂಡಿಗೋ ವಿಮಾನ ಆಗಮಿಸಿದೆ. ಇಂಡಿಗೋ ವಿಮಾನಕ್ಕೆ ಕೂಡ ಲ್ಯಾಂಡಿಂಗ್ ಆಗಲು ಅನುಮತಿ ಸಿಕ್ಕಿದೆ. ಅನುಮತಿ ಸಿಕ್ಕಿದ ಕಾರಣ ಪೈಲಟ್ ರನ್‌ವೇಯಲ್ಲಿ ಇಳಿಸಿ ಅದರ ಚಕ್ರಗಳು ಭೂ ಸ್ಪರ್ಶ ಆಗುತ್ತಿದ್ದಾಗ ಏರ್ ಇಂಡಿಯಾ ವಿಮಾನ ಆಗ ತಾನೇ ಜಸ್ಟ್ ಟೇಕಾಫ್ ಆಗಿತ್ತು. ಅದೇ ಒಂದು ವೇಳೆ ಏರ್ ಇಂಡಿಯಾ ಟೇಕಾಫ್ ಕೆಲ ಸೆಕೆಂಡ್ ವಿಳಂಬವಾಗಿದ್ದರೆ ದುರಂತ ನಡೆದು ಹೋಗಿರುತ್ತಿತ್ತು. ಕ್ಷಣಗಳ ಅಂತರ ಇಲ್ಲದೆ ಹೋಗಿದ್ದರೆ ಹಿಂದಿನಿಂದ ಏರ್ ಇಂಡಿಯಾ ವಿಮಾನ ಕ್ರಾಶ್ ಹೊಡೆಯುವ ಸಾಧ್ಯತೆ ಇತ್ತು.
ಇದೀಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ. ಇಂಡಿಗೋ ವಿಮಾನಕ್ಕೆ ಲ್ಯಾಂಡಿಂಗ್ ಮಾಡಲು ಅನುಮತಿ ನೀಡಿದ್ದ ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿಯನ್ನು(ATC) ಸಿಬ್ಬಂದಿಯನ್ನು ತನಿಖಾ ಕಾರ್ಯ ಮುಗಿಯುವವರೆಗೂ ಕೆಲಸದಿಂದ ಕಿತ್ತು ಹಾಕಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


