ಕೆಲ ವಾರಗಳಿಂದ ತಟಸ್ಥವಾಗಿದ್ದ ಅಕ್ಕಿ ಬೆಲೆ ಈಗ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಗೋಧಿ ಸಹ ತುಸು ಏರಿಕೆಯತ್ತ ಸಾಗಿದೆ.ಸೊಪ್ಪಿನ ದರ ಇಳಿಕೆಯತ್ತ ಮುಖ ಮಾಡಿದ್ದರೆ, ಟೊಮೆಟೊ ಗಗನಮುಖಿಯಾಗಿದ್ದು, ಬೀನ್ಸ್ ಸೇರಿದಂತೆ ತರಕಾರಿ ಬೆಲೆ ಅಲ್ಪ ಇಳಿಕೆಯಾಗಿದೆ. ಅಕ್ಕಿ ಧಾರಣೆ ತುರು ಏರಿಕೆ ಕಂಡಿದ್ದು, ಕೋಳಿ ಮಾಂಸದ ಬೆಲೆಯಲ್ಲಿ ತುಂಬಾ ವ್ಯತ್ಯಾಸ ಕಂಡು ಬಂದಿಲ್ಲ.
ಮಸಾಲೆ ಪದಾರ್ಥಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಮೆಣಸು ಮತ್ತೆ ಕೆ.ಜಿಗೆ ₹40 ಏರಿಕೆಯಾಗಿದೆ. ಜೀರಿಗೆ, ಮೆಣಸಿನಕಾಯಿ, ಗೋಡಂಬಿ ದರ ಕೊಂಚ ಹೆಚ್ಚಳ ಕಂಡಿದೆ.
ಈ ವಾರ ಸೊಪ್ಪಿನ ಧಾರಣೆ ಅರ್ಧದಷ್ಟು ತಗ್ಗಿದೆ. ಹಿಂದಿನ ವಾರಗಳಲ್ಲಿ ಕೆ.ಜಿ ₹200 ಗಡಿ ದಾಟಿದ್ದರೆ, ಈಗ ₹100 ಸಮೀಪಕ್ಕೆ ಬಂದಿದೆ. ಆದರೆ ಮೆಂತ್ಯ ಸೊಪ್ಪಿನ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹100-120, ಸಬ್ಬಕ್ಕಿ ಕೆ.ಜಿ ₹100-120, ಮೆಂತ್ಯ ಸೊಪ್ಪು ಕೆ.ಜಿ ₹150-160, ಪಾಲಕ್ ಸೊಪ್ಪು (ಕಟ್ಟು) ₹70-80ಕ್ಕೆ ಇಳಿಕೆ ಕಂಡಿದೆ.
ಬೇಳೆ ಕಾಳು, ಧಾನ್ಯಗಳ ಧಾರಣೆ ಏರಿಳಿತ ಕಾಣುತ್ತಿದ್ದು, ಕಳೆದ ವಾರ ಅಲ್ಪ ಇಳಿಕೆಯಾಗಿದ್ದರೆ, ಈ ವಾರ ಕೊಂಚೆ ಏರುಮುಖಮಾಡಿವೆ. ತೊಗರಿ ಬೇಳೆ, ಕಡಲೆ ಬೇಳೆ ಸೇರಿದಂತೆ ಇತರೆ ಬೇಳೆಗಳು, ಕಡಲೆ ಕಾಳು, ಹೆಸರು ಕಾಳು ತುಸು ಹೆಚ್ಚಳವಾಗಿದೆ.
ಅಡುಗೆ ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹108-110, ಪಾಮಾಯಿಲ್ ಕೆ.ಜಿ ₹88-89, ಕಡಲೆಕಾಯಿ ಎಣ್ಣೆ ಕೆ.ಜಿ ₹160-165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


