ತುರುವೇಕೆರೆ: ಸರ್ಕಾರಿ ಶಾಲೆಯ ಉಳಿವಿಗಾಗಿ ದಾನಿಗಳು ಪ್ರೋತ್ಸಾಹಿಸಬೇಕು ಎಂದು ಬೆಂಗಳೂರು ಕ್ಲಿನಿಕ್ ಮಾಲಿಕರಾದ ಡಾ. ಶಶಿಧರ್ ಎಂ ಹೇಳಿದರು.
ತಾಲೂಕಿನ ಮಾಯಸಂದ್ರ ಹೋಬಳಿಯ ಡಿ.ಬಿ.ವಿ. ಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಉಚಿತ “ಟ್ರಾಕ್ ಸಮವಸ್ತ್ರ”ವನ್ನು ವಿತರಿಸಿ ಮಾತನಾಡಿದ ಅವರು, “ಗ್ರಾಮೀಣ ಪ್ರದೇಶಗಳತ್ತ ಸರ್ಕಾರಿ ಶಾಲೆಗಳು ಈಗಾಗಲೇ ಅಳಿವಿನಂಚಿನಲ್ಲಿದ್ದು, ಸರ್ಕಾರಿ ಶಾಲೆಯ ಉಳಿವಿಗಾಗಿ ದಾನಿಗಳು ಉದಾರ ಮನಸ್ಸಿನಿಂದ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಉಪಯುಕ್ತ ವಿಶೇಷ ವಸ್ತುಗಳನ್ನು, ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಪ್ರೋತ್ಸಾಹಿಸಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಬೇಕೆಂದು ಮನವಿ ಮಾಡಿದರು. ಅಲ್ಲದೇ ಸರ್ಕಾರಿ ಶಾಲೆಯ ಉಳಿವಿಗಾಗಿ ನಾವೆಲ್ಲರೂ ಕೈಜೋಡಿಸೋಣ” ಎಂದರು.
ಮುಖ್ಯ ಶಿಕ್ಷಕರಾದ ನಾಗರಾಜು ರವರು ಮಾತನಾಡಿ, “ಪ್ರತಿ ವರ್ಷವೂ ಸಹ ನಮ್ಮ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ದಾನಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ, ನಮ್ಮ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈ ವರ್ಷವೂ ಸಹ ಡಾ. ಶಶಿಧರ್ ಎಂ ರವರು ಉಚಿತ ಟ್ರಾಕ್ ಸಮವಸ್ತ್ರವನ್ನು ವಿತರಿಸಿದ್ದಾರೆ ಹಾಗೂ ಮಾಯಸಂದ್ರದ ಕೊಬ್ಬರಿ ವರ್ತಕರಾದ ಎಂ.ಬಿ. ಪ್ರಕಾಶ್ ರವರು ಉಚಿತವಾಗಿ ನೋಟ್ ಬುಕ್ ಗಳನ್ನು ನೀಡಿದ್ದಾರೆ”. ಸರ್ಕಾರಿ ಶಾಲಾ ಮಕ್ಕಳ ಕಾಳಜಿ ಇರುವ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ. ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ನಾಗಮ್ಮ, ಸದಸ್ಯರುಗಳಾದ ವೆಂಕಟೇಶ್, ಗಂಗಮ್ಮ, ಛಾಯಾಮಣಿ, ಪುಟ್ಟಮ್ಮ ಮುಂತಾದ ಸದಸ್ಯರು ಹಾಗೂ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕ ವರದರಾಜು ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


