ನರೇಗಾ ಕೆಲಸಕ್ಕೆಂದು ಬಂದ ಮಹಿಳೆಯನ್ನು ದೆವ್ವವೊಂದು ಆವರಿಸಿಕೊಂಡಿದ್ದು, ಏನು ಬೇಕು ಎಂದು ಕೇಳಿದಾಗ ನನಗೆ ವಿಮಲ್, ಗುಟ್ಕಾ ಬೇಕೆಂದು ಕೇಳಿದ ವಿಚಿತ್ರ ಹಾಗೂ ಹಾಸ್ಯದ ಪ್ರಸಂಗವೊಂದು ಬೆಳಕಿಗೆ ಬಂದಿದೆ.
ಕೊಪ್ಪಳದ ಕೆರೆಹಳ್ಳಿ ಗ್ರಾಮದಲ್ಲಿ ನರೇಗಾ ಕಾಮಗಾರಿಯಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯನ್ನು ದೆವ್ವವೊಂದು ಆವರಿಸಿಕೊಂಡು ಆಕೆ ವಿಚಿತ್ರವಾಗಿ ವರ್ತಿಸಿದ್ದಾಳೆ. ಪಕ್ಕದಲ್ಲಿದ್ದವರೆಲ್ಲಾ ತಕ್ಷಣ ಗಾಬರಿಗೊಂಡು ಬಂಡಿಹರ್ಲಾಪುರಾ ಗ್ರಾಮದಲ್ಲಿ ದೆವ್ವ ಬಿಡಿಸುವ ಖಾಜಾ ಸಾಹೇಬ್ ಯಡಿಯಪೂರ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ.
ಖಾಜಾ ಸಾಹೇಬ್ ಅವರು ಏನಾಯಿತು, ಯಾಕೆ ಬಂದೆ ಎಂದು ಕೇಳಿದಾಗ ನನಗೆ ವಿಮಲ್ ಕೊಟ್ರೆ ಹೋಗ್ತಿನಿ ಎಂದು ಮಹಿಳೆಗೆ ಆವರಿಸಿಕೊಂಡಿದ್ದ ದೆವ್ವ ವಿಮಲ್ ಗುಟ್ಕಾ ಕೇಳಿದೆ. ಈ ವೇಳೆ ತಲೆ ಮೇಲೆ ಕಲ್ಲೊರಿಸಿ ಖಾಜಾ ಸಾಹೇಬ್ ದೆವ್ವ ಬಿಡಿಸಿದ್ದಾನೆ. ಖಾಜಾ ಸಾಹೇಬ್ ಪೂಜೆ ಶುರು ಮಾಡುತ್ತಿದ್ದಂತೆ ನಾನು ಹೋಗ್ತಿನಿ ಬಿಟ್ಟು ಬಿಡು ಎಂದು ದೆವ್ವ ಕಣ್ಣೀರು ಹಾಕಿದೆ.
ವಿಮಲ್ ಗುಟ್ಕಾ ಪ್ರೇಮಿ ದೆವ್ವದ ವರ್ತನೆಗೆ ಜನ ಎದ್ದು ಬಿದ್ದು ನಕ್ಕಿದ್ದಾರೆ. ಕೊನೆಗೆ ದೆವ್ವ ಖಾಜಾ ಸಾಹೇಬನಿಗೆ ಹೆದರಿ ಕೆಲಸದ ಹೆಂಗಸಿನ ಮೈಯಿಂದ ಎಗರಿ ಮಾಯವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


