ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನವಾಗಿದ್ದ 500 ವರ್ಷಗಳಷ್ಟು ಹಳೆಯದಾದ ಸಂತ ತಿರುಮಂಕೈ ಆಳ್ವರ ಕಂಚಿನ ವಿಗ್ರಹವನ್ನು ಭಾರತಕ್ಕೆ ಹಿಂದಿರುಗಿಸಲು ಬ್ರಿಟನ್ ನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಒಪ್ಪಿಕೊಂಡಿದೆ ಎಂದು ವರದಿ ತಿಳಿಸಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಕೌನ್ಸಿಲ್ ಅಶ್ಮೋಲಿಯನ್ ಮ್ಯೂಸಿಯಂನಿಂದ 15 ನೇ ಶತಮಾನದ ಸಂತ ತಿರುಮಂಕೈ ಆಳ್ವಾರ ಕಂಚಿನ ಶಿಲ್ಪವನ್ನು ಹಿಂದಿರುಗಿಸಲು ಭಾರತೀಯ ಹೈಕಮಿಷನ್ ನ ಮನವಿಯನ್ನು ವಿಶ್ವವಿದ್ಯಾಲಯವು ಒಪ್ಪಿಕೊಂಡಿದೆ. 60 ಸೆಂ.ಮೀ ಎತ್ತರದ ಸಂತ ತಿರುಮಂಕೈ ಆಳ್ವರ ಪ್ರತಿಮೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಅಶ್ಮೋಲಿಯನ್ ಮ್ಯೂಸಿಯಂ 1967 ರಲ್ಲಿ ಡಾ ಜೆ ಆರ್ ಬೆಲ್ಮಾಂಟ್ (1886-1981) ಎಂಬ ಸಂಗ್ರಾಹಕನ ಸಂಗ್ರಹದಿಂದ ಹರಾಜಿನಲ್ಲಿ ಆಕ್ಸ್ ಫರ್ಡ್ ಪಡೆದುಕೊಂಡಿತ್ತು. ಪ್ರಪಂಚದ ಅತ್ಯಂತ ಪ್ರಸಿದ್ಧವಾದ ಕೆಲವು ಕಲೆ ಮತ್ತು ಪುರಾತತ್ತ್ವ ಶಾಸ್ತ್ರದ ಕಲಾಕೃತಿಗಳನ್ನು ಹೊಂದಿರುವ ವಸ್ತುಸಂಗ್ರಹಾಲಯವು, 1967 ರಲ್ಲಿ ಈ ವಿಗ್ರಹವನ್ನು ಸದುದ್ದೇಶದಿಂದ ಇಲ್ಲಿ ಇರಿಸಿಕೊಂಡಿತ್ತು ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


