ಭಾರತದ ನ್ಯಾಶನಲ್ ರೈಫಲ್ ಅಸೋಸಿಯೇಶನ್ (NRAI) ಪ್ಯಾರಿಸ್ ಒಲಿಂಪಿಕ್ಸ್- 2024ಕ್ಕೆ 15 ಸದಸ್ಯರುಗಳನ್ನು ಒಳಗೊಂಡ ಭಾರತೀಯ ರೈಫಲ್ ಹಾಗೂ ಪಿಸ್ತೂಲ್ ತಂಡವನ್ನು ಮಂಗಳವಾರ ಪ್ರಕಟಿಸಿದೆ.
ಎರಡು ಬಾರಿಯ ಒಲಿಂಪಿಯನ್ ಮನು ಭಾಕರ್ ಮಾತ್ರ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಮನು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಹಾಗೂ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ತಂಡವು 8 ರೈಫಲ್ ಹಾಗೂ 7 ಪಿಸ್ತೂಲ್ ಶೂಟರ್ ಗಳನ್ನು ಒಳಗೊಂಡಿದೆ.
ವಿಶ್ವ ಚಾಂಪಿಯನ್ ರುದ್ರಾಂಕ್ಷ್ ಪಾಟೀಲ್ ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತೆ ಮೆಹುಲಿ ಘೋಷ್ ಹಾಗೂ ಕಂಚಿನ ಪದಕ ವಿಜೇತ ಅಖಿಲ್ ಸೆಹೊರನ್ ಸಹಿತ ಕೆಲವು ಪ್ರಮುಖ ಶೂಟರ್ಗಳು ಒಲಿಂಪಿಕ್ಸ್ನಿಂದ ವಂಚಿತರಾಗಿದ್ದಾರೆ. ತಿಲೋತ್ತಮ ಸೇನ್, ಶ್ರೀಯಾಂಕಾ ಸದಂಗಿ ಹಾಗೂ ವರುಣ್ ತೋಮರ್ ಒಲಿಂಪಿಕ್ಸ್ ಕೋಟಾ ಗೆದ್ದಿದ್ದಾರೆ.
ಭಾರತವು ಮುಂಬರುವ ಒಲಿಂಪಿಕ್ ಗೇಮ್ಸ್ ನಲ್ಲಿ ಶೂಟಿಂಗ್ನಲ್ಲಿ 21 ಕೋಟಾಗಳನ್ನು ಗಿಟ್ಟಿಸಿಕೊಂಡು ದಾಖಲೆ ಬರೆದಿದೆ.
► ಪ್ಯಾರಿಸ್ ಒಲಿಂಪಿಕ್ಸ್-2024ಕ್ಕೆ ಭಾರತದ ರೈಫಲ್ ಹಾಗೂ ಪಿಸ್ತೂಲ್ ಟೀಮ್
ರೈಫಲ್ ಟೀಮ್:
ಸಂದೀಪ್ ಸಿಂಗ್, ಅರ್ಜುನ್ ಬಬುಟಾ(10 ಮೀ. ಏರ್ ರೈಫಲ್ ಪುರುಷರ ವಿಭಾಗ)
ಎಲವೆನಿಲ್ ವಲರಿವನ್, ರಮಿಟಾ(10 ಮೀ. ಏರ್ ರೈಫಲ್, ಮಹಿಳೆಯರ ವಿಭಾಗ)
ಸಿಫ್ಟ್ ಕೌರ್ ಸಮ್ರಾ, ಅಂಜುಮ್ ಮೌದ್ಗಿಲ್(50 ಮೀ.ರೈಫಲ್ 3 ಪೊಸಿಶನ್,್ಸ ಮಹಿಳೆಯರ ವಿಭಾಗ)
ಐಶ್ವರ್ಯಾ ತೋಮರ್, ಸ್ವಪ್ನಿಲ್ ಕುಸಾಲೆ(50 ಮೀ. ರೈಫಲ್ 3 ಪೊಸಿಶನ್ಸ್, ಪುರುಷರ ವಿಭಾಗ)
ಪಿಸ್ತೂಲ್:
ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ(10 ಮೀ. ಏರ್ ಪಿಸ್ತೂಲ್ ಪುರುಷರ ವಿಭಾಗ)
ಮನು ಭಾಕರ್, ರಿಧಮ್ ಸಾಂಗ್ವಾನ್(10 ಮೀ. ಏರ್ ಪಿಸ್ತೂಲ್ ಮಹಿಳೆಯರ ವಿಭಾಗ)
ಅನಿಶ್ ಭಾನ್ವಾಲ್, ವಿಜಯವೀರ್ ಸಿಧು(25 ಮೀ. ಆರ್ಎಫ್ಪಿ ಪುರುಷರ ವಿಭಾಗ)
ಮನು ಭಾಕರ್, ಇಶಾ ಸಿಂಗ್(25 ಮೀ.ಪಿಸ್ತೂಲ್, ಮಹಿಳೆಯರ ವಿಭಾಗ)
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


