ಬ್ಯಾಂಕಾಕ್: ಬ್ಯಾಂಕಾಕ್ ನ ಪ್ರಸಿದ್ಧ ಸಾಕುಪ್ರಾಣಿ ಮಾರುಕಟ್ಟೆ ಚಟುಚಾಕ್ ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ದುರಂತದಲ್ಲಿ 100ಕ್ಕೂ ಅಧಿಕ ಅಂಗಡಿಗಳು ಸುಟ್ಟುಹೋಗಿದ್ದು ಪಂಜರದಲ್ಲಿ ಇರಿಸಲಾಗಿದ್ದ ನಾಯಿ, ಬೆಕ್ಕುಗಳು, ಪಕ್ಷಿಗಳು, ಹಾವುಗಳ ಸಹಿತ ನೂರಾರು ಪ್ರಾಣಿಗಳು ಸಾವನ್ನಪ್ಪಿವೆ ಎಂದು ಪೊಲೀಸರು ಹೇಳಿದ್ದಾರೆ.
ಚಟುಚಾಕ್ ಮಾರುಕಟ್ಟೆಯ ಆಲಂಕರಿಕ ಮೀನುಗಳ ವಿಭಾಗದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಿಪ್ರವಾಗಿ 14,000 ಚದರಡಿ ಪ್ರದೇಶದ 100ಕ್ಕೂ ಅಧಿಕ ಸ್ಟಾಲ್ ಗಳಿಗೆ ವ್ಯಾಪಿಸಿದೆ. ಮನುಷ್ಯರು ಸಾವನ್ನಪ್ಪಿದ ಅಥವಾ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ಆದರೆ ಪಂಜರದಲ್ಲಿಟ್ಟಿದ್ದ ಹಲವು ಸಾಕುಪ್ರಾಣಿಗಳು ಸಾವನ್ನಪ್ಪಿವೆ. ಸುಮಾರು 2 ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದ್ದು ದುರಂತದ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


