ಈ ಆನ್ಲೈನ್ ಅನ್ನೋ ದೊಡ್ಡ ಜಾಲ, ಇಂದು ಕೂತಲ್ಲಿಗೇ ಎಲ್ಲವನ್ನೂ ತಂದಿರಿಸುತ್ತೆ. ಒಟ್ಟಿನಲ್ಲಿ ಎಲ್ಲವೂ ಆನ್ಲೈನ್ ಮಯ. ಅಂತೆಯೇ ಮಹಿಳೆಯೊಬ್ಬರು ಆನ್ಲೈನ್ ಅಲ್ಲಿ ಐಸ್ ಕ್ರೀಂ ಆರ್ಡರ್ ಮಾಡಿದ್ದು, ಅದು ಮನೆ ಬರುತ್ತಿದ್ದಂತೆ ಆಕೆಗೆ ಶಾಕ್ ಎದುರಾಗಿದೆ. ಯಾಕೆಂದರೆ ಅದರಲ್ಲಿ ಚೇಳು ಪತ್ತೆಯಾಗಿದೆ.
ಇದುವರೆಗೂ ಆನ್ಲೈನ್ ಅಲ್ಲಿ ತರಿಸಿದ ಬಿರಿಯಾನಿ, ಊಟದಲ್ಲಿ ಹುಳ, ಜಿರಳೆ, ಕೀಟ ಏನಾದರೂ ಒಂದು ಇರುವುದು ಸುದ್ದಿಯಾಗುತ್ತಿತ್ತು. ಮೊನ್ನೆ ಮೊನ್ನೆ ತಾನೆ ಮುಂಬೈ ನಲ್ಲಿ ಮಹಿಳೆಯೊಬ್ಬರು ಆರ್ಡರ್ ಮಾಡಿದ ಐಸ್ ಕ್ರೀಂ ನಲ್ಲಿ ಮಾನವನ ಬೆರಳು ಪತ್ತೆಯಾಗಿ ಭಾರಿ ಚರ್ಚೆಯಾಗಿತ್ತು. ಆದರೀಗ ಮತ್ತದೇ ಆನ್ಲೈನ್ ಐಸ್ ಕ್ರೀಂ ನಲ್ಲಿ ಇಂದು ಚೇಳು ಪತ್ತೆಯಾಗಿದೆ.
ನೋಯ್ಡಾ ಸೆಕ್ಟರ್ 12ರ ನಿವಾಸಿ ದೀಪಾ(Deepa) ಮಕ್ಕಳ ಆಸೆಯಂತೆ ಐಸ್ ಕ್ರೀಮ್ ಆರ್ಡರ್ ಮಾಡಿದ್ದಾರೆ. ಮಕ್ಕಳು ಮ್ಯಾಂಗೋ ಮಿಲ್ಕ್ ಶೇಕ್(Mango Milkshake) ಬೇಕು ಎಂದಿದ್ದಕ್ಕೆ ಅದನ್ನೇ ಮಾಡುವುದಾಗಿ ಭರವಸೆ ನೀಡಿದ್ದ ದೀಪಾ, ಅಮೂಲ್ ವೆನಿಲ್ಲಾ ಐಸ್ ಕ್ರೀಮ್(Amul Icecream) ಆರ್ಡರ್ ಮಾಡಿದ್ದಾರೆ.
ಆನ್ ಲೈನ್ ಬ್ಲಿಂಕಿಂಟ್ (Blinkit) ಮೂಲಕ ಐಸ್ ಕ್ರೀಮ್ ಆರ್ಡರ್ ಪ್ಲೇಸ್ ಮಾಡಲಾಗಿದೆ. ಕೆಲವೇ ಹೊತ್ತಲ್ಲಿ ಐಸ್ ಕ್ರೀಮ್ ದೀಪಾ ಮನೆ ಸೇರಿದೆ. ಐಸ್ ಕ್ರೀಮ್ ಪ್ಯಾಕ್ ತೆರೆದ ದೀಪಾಗೆ ಅಚ್ಚರಿಯಾಗಿದೆ. ಕಾರಣ ಐಸ್ ಕ್ರೀಮ್‌ನಲ್ಲಿ ಸತ್ತ ಚೇಳೊಂದು ಪತ್ತೆಯಾಗಿದೆ.
ಇದರಿಂದ ಭಯ ಹಾಗೂ ಆತಂಕಗೊಂಡ ದೀಪಾ, ಐಸ್ ಕ್ರೀಮ್ ನಲ್ಲಿ ಚೇಳು ಪತ್ತೆಯಾದ ಬೆನ್ನಲ್ಲೇ ವಿಡಿಯೋ ಹಾಗೂ ಫೋಟೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಎಲ್ಲೆಡೆ ಹರಿದಾಡಿದೆ. ಇದರಿಂದ ತಕ್ಷಣ ಎಚ್ಚೆತ್ತ ಬ್ಲಿಂಕಿಟ್ ಹಾಗೂ ಅಮೂಲ್ ಮ್ಯಾನೇಜರ್ ಮಹಿಳೆಯನ್ನು ಸಂಪರ್ಕಿಸಿ, ಹಣ ವಾಪಸ್ ನೀಡಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಇದು ಸುಳ್ಳು, ಯಾರೂ ಕೂಡ ಸಂಪರ್ಕಿಸಿಲ್ಲ ಎಂದು ದೀಪ ಸ್ಪಷ್ಟಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


