ಬಾಲಿವುಡ್ ನಟಿ ಸನ್ನಿ ಲಿಯೋನ್ ಕರ್ನಾಟಕದ ಹಾಸನಕ್ಕೆ ಆಗಮಿಸಿದ್ದಾರೆ. ತಮಿಳು ಸಿನಿಮಾವೊಂದರ ಚಿತ್ರೀಕರಣಕ್ಕೆ ಹಾಸನದ ಚೆನ್ನರಾಯಪಟ್ಟಣದ ಕಬ್ಬಳ್ಳಿ ಗ್ರಾಮಕ್ಕೆ ಬಂದಿದ್ದು, ಈ ವೇಳೆ ಸ್ಥಳೀಯ ಸರ್ಕಾರಿ ಶಾಲಾ ಮಕ್ಕಳ ಜೊತೆ ಸನ್ನಿ ಲಿಯೋನ್ (Sunny Leone) ಕಾಲ ಕಳೆದಿದ್ದಾರೆ ಎಂದು ವರದಿ ತಿಳಿಸಿದೆ.
ಸನ್ನಿ ಲಿಯೋನ್ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಜೊತೆ ಆಟ ಆಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಮುಂಬರುವ ತಮಿಳು ಚಿತ್ರ ‘ಕೊಟೇಶನ್ ಗ್ಯಾಂಗ್ ನ’ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು. ಇದನ್ನು ವಿವೇಕ್ ಕೆ. ಕಣ್ಣನ್ ಬರೆದು ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ಜಾಕಿ ಶ್ರಾಫ್, ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಕೊಟೇಶನ್ ಗ್ಯಾಂಗ್ ನ ಫಸ್ಟ್ ಲುಕ್ ನಲ್ಲಿ ಸನ್ನಿ ಲಿಯೋನ್ ಗ್ರಾಮೀಣ ಮಾಫಿಯಾ ಗ್ಯಾಂಗ್ ನ ಸದಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


