ರಾಜ್ಯದ ಉಪ–ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಿ.ಕೆ. ಶಿವಕುಮಾರ್ ಮಗಳು ಐಶ್ವರ್ಯಾ ಅವರು ತಮ್ಮ ಕಾಲೇಜಿನ ದಿನಗಳಲ್ಲಿ ನಡೆದ ಕಥೆಯನ್ನು ಹೇಳಿಕೊಂಡಿದ್ದಾರೆ.
ಐಶ್ವರ್ಯಾ ಕಾಲೇಜು ಓದುವಾಗ ಅವರ ತಂದೆ ಕಾಲೇಜಿನ ಚೇರ್ ಮನ್ ಆಗಿದ್ದರಂತೆ.ಆದರೆ, ಶುರುವಿನಲ್ಲಿ ಆ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಆಗ ಸಹಜವಾಗಿಯೇ ಸಾಕಷ್ಟು ಜನರು ಫ್ರೆಂಡ್ಸ್ ಆಗಿದ್ದಾರೆ. ಆದರೆ, ಯಾವಾಗ ಐಶ್ವರ್ಯಾ ಅವರು ಚೇರ್‌ಮನ್ ಮಗಳು ಅಂತ ಗೊತ್ತಾಯ್ತೋ, ಆಗ ಹಲವರು ಅವರಿಂದ ಅಂತರ ಕಾಯ್ದುಕೊಳ್ಳಲು ಶುರುಮಾಡಿದ್ದರಂತೆ.
ಜತೆಗೆ, ನಾನು ಚೆನ್ನಾಗಿ ಓದುತ್ತಿದ್ದರೂ, ಎಷ್ಟೇ ಮಾರ್ಕ್ಸ್ ತೆಗೆದುಕೊಂಡರೂ ‘ಅವ್ಳು ಚೇರ್‌ಮನ್ ಮಗ್ಳು ಅಲ್ವಾ?’ ಮಾರ್ಕ್ಸ್ ಕೊಡ್ತಾರೆ ಅವ್ಳಿಗೆ ಅಂತಾನೇ ಹೇಳೋರು. ಅದು ತಪ್ಪು ಅಂತ ನಾನು ಹೇಳಲ್ಲ. ನಿಜವಾಗಿ ಹೇಳಬೇಕೆಂದರೆ ನಾನು ಕಾಲೇಜಿಗೆ ಫಸ್ಟ್ ಡೇ ಹೋದಾಗ್ಲೇ ಗಾಡಿನ ಎಲ್ಲೋ ನಿಲ್ಸಿ ಎಲ್ಲರ ತರ ಕಾಲೇಜಿಗೆ ನಡ್ಕೊಂಡೇ ಹೋಗಿದ್ದೆ. ಆದ್ರೆ ಹೋಗ್ತಾ ಹೋಗ್ತಾ ಗೊತ್ತಾಗೋಯ್ತು ನಾನು ಚೇರ್ ಮನ್ ಮಗಳು ಅಂತ. ಆಮೇಲೆ ಕಾಲೇಜಲ್ಲಿ ನನ್ನ ನೋಡೋ ರೀತಿನೇ ಬದಲಾಗಿ ಹೋಯ್ತು’ ಎಂದಿದ್ದಾರೆ ಡಿಕೆ ಶಿವಕುಮಾರ್ ಅವರ ಮಗಳು (Aishwarya Shivakumar) ಐಶ್ವರ್ಯಾ ಡಿಕೆಎಸ್..
ಖಾಸಗಿ ಯೂಟ್ಯೂಬ್ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತ ಐಶ್ವರ್ಯಾ ಅವರು ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಕಾಫೀ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹೆಗಡೆ ಅವರ ಪುತ್ರ ಅಮಾರ್ತ್ಯ ಹೆಗಡೆ ಅವರನ್ನು ಮದುವೆಯಾಗಿರುವ ಐಶ್ವರ್ಯಾ ಅವರು, ಸಾಕಷ್ಟು ಸಭೆ–ಸಮಾರಂಭಗಳಲ್ಲಿ ಭಾಗಿಯಾಗುತ್ತಾರೆ. ಸೆಲೆಬ್ರೆಟಿಗಳ ಜೊತೆ ಮಾತನಾಡುತ್ತಾರೆ, ಅವರೂ ಕೂಡ ಸೆಲೆಬ್ರೆಟಿಯೇ ಆಗಿಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಐಶ್ವರ್ಯಾ ಅವರು ತುಂಬಾ ಆಕ್ವಿವ್ ಆಗಿರುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


