ಮಹಿಳೆಯ ಮೈಮಾಟ ನೋಡಿ ಸಾಲ ನೀಡಿದ ಬ್ಯಾಂಕ್ ಸಿಇಒ ಇದೀಗ ಬೀದಿಗೆ ಬಿದ್ದಿದ್ದು, ಅಂತಿಮವಾಗಿ 4 ಕೋಟಿ ರೂಪಾಯಿಗಳನ್ನು ಕಳೆದುಕೊಂಡು ವಿಧಿ ಇಲ್ಲದೆ ಈಗ ಪೊಲೀಸರ ಮೊರೆ ಹೋಗಿದ್ದಾನೆ.
ಮಹಾರಾಷ್ಟ್ರದ ಥಾಣೆಯ ಕೋ ಆಪರೇಟಿವ್ ಬ್ಯಾಂಕ್‌ನ ವಡಾಲಾ ಬ್ರಾಂಚ್‌ಗೆ 2016ರಲ್ಲಿ ಮಹಿಳೆಯೊಬ್ಬರು ಲೋನ್‌ಗಾಗಿ ಭೇಟಿ ನೀಡಿದ್ದಳು.. ಈ ವೇಳೆ ಆಕೆ ಕೊಟ್ಟ ಮನೆಯ ದಾಖಲೆಗಳ ಬಗ್ಗೆ ಸಿಬ್ಬಂದಿಗೆ ಅನುಮಾನ ಬಂದಿತ್ತು.. ಹೀಗಾಗಿ ಥಾಣೆಯ ಕೊಪ್ರಿ ಬಳಿ ಇರುವ ಆನಂದ್ ನಗರ ಪ್ರದೇಶದಲ್ಲಿರುವ ಮಹಿಳೆಯ ಮನೆಯ ಸಮೀಕ್ಷೆ ಮಾಡಲು ನಿರ್ಧರಿಸಲಾಗಿತ್ತು.. ಅದಕ್ಕಾಗಿ ಸಿಇಒ ಆಕೆಯ ಮನೆಗೆ ಹೋಗಿದ್ದರು.
2017ರ ಫೆಬ್ರವರಿಯಲ್ಲಿ ಕೊ ಆಪರೇಟಿವ್ ಬ್ಯಾಂಕ್ ನ ಸಿಇಒ, ಮಹಿಳೆಯ ಮನೆಗೆ ಹೋಗಿದ್ದು, ಪರಿಶೀಲನೆ ಮಾಡಿದ್ದಾರೆ.. ಈ ವೇಳೆ ದಾಖಲೆ ಸರಿ ಇಲ್ಲ ಅನ್ನೋದು ಗೊತ್ತಾಗಿದೆ.. ಆದ್ರೆ ಈ ವೇಳೆ ಆಕೆ ಮೈಮಾಟ ಪ್ರದರ್ಶನ ಮಾಡಿದ್ದಾಳೆ. ಸಿಇಒನನ್ನು ಮಂಚಕ್ಕೆ ಕರೆದಿದ್ದಾಳೆ. ಆಕೆಯ ಮೋಹಕ್ಕೆ ಬಿದ್ದ ಸಿಇಒ 3 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಿ, ತಿಂಗಳಿಗೆ 7,300 ರೂಪಾಯಿ ಇಎಂಐ ಕಟ್ಟುವಂತೆ ಸೂಚಿಲಾಗಿತ್ತು.. ಆದ್ರೆ ಸಾಲದ ಪಡೆದ ಒಂದು ತಿಂಗಳ ನಂತರ ಆ ಮಹಿಳೆ ಸಿಇಒನನ್ನು ಬ್ಲ್ಯಾಕ್ ಮೇಲ್ ಮಾಡೋದಕ್ಕೆ ಶುರು ಮಾಡಿದ್ದಾಳೆ.. ಸಲುಗೆ ಹೆಚ್ಚಿದ್ದ ಕಾರಣದಿಂದ ಆಕೆಯ ವಾಟ್ಸ್ ಆಪ್ ಗೆ ಸಿಇಒ ಬೆತ್ತಲೆ ಫೋಟೋಗಳನ್ನು ಸೆಂಡ್ ಮಾಡಿದ್ದ.. ಈ ಫೋಟೋಗಳನ್ನು ನಿಮ್ಮ ಕುಟುಂಬದವರಿಗೆ ಹಾಗೂ ಸಹೋದ್ಯೋಗಿಗಳಿಗೆ ಕಳುಹಿಸುವುದಾಗಿ ಆಕೆ ಬ್ಲಾಕ್ ಮೇಲ್ ಮಾಡಿದ್ದಾಳೆ.. ಸಾಲದು ಎಂಬಂತೆ 8 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ.
ಆಕೆ ಫೋಟೋಗಳನ್ನು ಎಲ್ಲರಿಗೂ ಕಳುಹಿಸಿ ಮಾನ ತೆಗೆಯುತ್ತಾಳೆಂದು ಹೆದರಿ ಆ ಬ್ಯಾಂಕ್ ಸಿಇಒ ಹಂತ ಹಂತವಾಗಿ ಒಟ್ಟು ನಾಲ್ಕು ಕೋಟಿ ರೂಪಾಯಿ ಕೊಟ್ಟಿದ್ದಾನೆ.. ಇದಕ್ಕಾಗಿ ಆತ ತಮ್ಮ ಮನೆ, ಫ್ಲ್ಯಾಟ್ ಮಾರಿದ್ದಾರೆ.. ಅದೂ ಸಾಲಲಿಲ್ಲ ಅಂತ ಪಿಎಫ್ ಹಣವನ್ನೂ ತೆಗೆದು ಕೊಟ್ಟಿದ್ದಾನೆ.. ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾನೆ, ಕೈಸಾಲ ಕೂಡಾ ಮಾಡಿಕೊಂಡಿದ್ದಾನೆ.. ಅಲ್ಲಿಗೂ ತೃಪ್ತಳಾಗದ ಆಕೆ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ವಿಧಿಯಿಲ್ಲದೆ ಈಗ ಸಿಇಒ ಪೊಲೀಸರ ಮೊರೆ ಹೋಗಿದ್ದಾರೆ.. ಈಗ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


