ಮದುವೆಯಾಗಿ ಒಂದು ಮಗುವಿದ್ದರೂ ಇನ್ನೊಂದು ಮಗು ಬೇಕು ಎಂದು ಕೇಳಿದ ಪತಿಗೆ ಇಬ್ಬರು ಪತ್ನಿಯರು ಸೇರಿ ಮತ್ತೊಂದು ಮದುವೆ ಮಾಡಲು ಮುಂದಾಗಿರುವ ಅಚ್ಚರಿಯ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೆದ್ದಬಯಲು ಗ್ರಾಮದಲ್ಲಿ ನಡೆದಿದೆ.
ಪಂಡನ್ನ ಎಂಬ ವ್ಯಕ್ತಿಯೇ ಮೂರನೇ ಮದುವೆಗೆ ಸಜ್ಜಾಗಿರುವ ವ್ಯಕ್ತಿಯಾಗಿದ್ದಾನೆ. ಈ ಮೊದಲು ಮೊದಲ ಹೆಂಡತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಮೊದಲ ಹೆಂಡತಿಯೇ ಮುಂದೆ ನಿಂತು ಗಂಡನಿಗೆ ಎರಡನೇ ಮದುವೆಯನ್ನು 2007ರಲ್ಲಿ ಮಾಡಿಸಿದ್ದಳು. ಅವರಿಗೆ ಒಬ್ಬ ಗಂಡು ಮಗ ಕೂಡಾ ಇದ್ದಾನೆ. ಆದರೂ ಪಂಡನ್ನ ಇನ್ನು ಒಂದು ಮಗು ಬೇಕು ಅಂತ ತನ್ನ ಇಬ್ಬರೂ ಪತ್ನಿಯರನ್ನ ಕೇಳಿದ್ದಾನೆ. ಆಗ ಇಬ್ಬರೂ ಪತ್ನಿಯರು ತನ್ನ ಗಂಡನಿಗೆ ಮೂರನೇ ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ.
ಪಂಡನ್ನಾ ಪತ್ನಿಯರಾದ ಪಾರ್ವತಮ್ಮ ಮತ್ತು ಅಪ್ಪಲಮ್ಮ ಮೂರನೇ ಮದುವೆಗೆ ಭರ್ಜರಿ ತಯಾರಿಯನ್ನು ನಡೆಸಿ ಪೆದ್ದಬಯಲು ಗ್ರಾಮದಲ್ಲಿ ಬ್ಯಾನರ್ ಗಳನ್ನು ಕಟ್ಟಿಸಿ ಅದ್ದೂರಿ ಮದುವೆ ಮಾಡಿಸಲಾಗಿದೆ.
ಇದೇ ತಿಂಗಳ 25 ರಂದು ಪಂಡನ್ನ ಮದುವೆ ವಿಜೃಂಭಣೆಯಿಂದ ನೆರವೇರಿತು. ಈ ಮದುವೆಯ ಮೂಲಕ ಪಂಡನ್ನಾಗೆ ಪಾರ್ವತಮ್ಮ, ಅಪ್ಪಲಮ್ಮ ಮತ್ತು ಲಕ್ಷ್ಮಿ ಎಂಬ ಮೂವರು ಪತ್ನಿಯರು ಸಿಕ್ಕಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA