ಮೂಗುತಿ ಹಿಂದೂ ಧರ್ಮೀಯ ಸ್ತ್ರೀಯರಿಗೆ ಮಹತ್ವದ್ದು ಹಾಗೂ ಪವಿತ್ರ. ಕೆಲವು ಕಡೆ ಮುಸ್ಲಿಮರು ಮತ್ತು ಕೆಲವು ಆಫ್ರಿಕನ್ ಸಂಸ್ಕೃತಿಗಳಲ್ಲಿಯೂ ಇದು ಇದೆ. ಭಾರತದಲ್ಲಿ ಮೂಗುತಿ ಧರಿಸುವುದಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಇಲ್ಲಿ ಮಹಿಳೆಯರು ಮೂಗು ಚುಚ್ಚಿಸಿಕೊಳ್ಳುವುದು ಸಂಸ್ಕಾರವೇ ಆಗಿದೆ.
ಮೂಗುತಿ ಧಾರಣೆಯು ಸುಮಾರು 6000 ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಒಳಗೊಂಡಿದೆ. ರಿಂಗ್ ಮೂಗುತಿ ವಿದೇಶದಿಂದ ಬಂದದ್ದು. ಹಿಪ್ಪಿಗಳು ಭಾರತಕ್ಕೆ ವಲಸೆ ಬಂದ ನಂತರ ಅವರ ಈ ಸಂಪ್ರದಾಯವನ್ನು ಕಂಡು ಭಾರತೀಯರು ಆಕರ್ಷಿತರಾದರು ಹಾಗೂ ಭಾರತದಲ್ಲೂ ಅದು ರೂಢಿಗೆ ಬರಲು ಆರಂಭವಾಯಿತು.
ಹಿಂದೂ ಧರ್ಮದಲ್ಲಿ ಕಿವಿ ಚುಚ್ಚುವಿಕೆಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿತ್ತೋ ಅಷ್ಟೇ ಪ್ರಾಮುಖ್ಯತೆಯನ್ನು ಮೂಗು ಚುಚ್ಚಿಸುವಿಕೆಗೂ ಕೂಡ ನೀಡಲಾಗಿತ್ತು. ತಜ್ಞರು ಮೂಗುತಿ ಧರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಕೂಡ ಎಂದು ಹೇಳುತ್ತಾರೆ.
ಆಯುರ್ವೇದ ಪದ್ಧತಿಯಲ್ಲಿ ಮೂಗುತಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆಯೆಂದು ಹೇಳಲಾಗಿದೆ. ಆದರೆ ಎಡಹೊಳ್ಳೆಗೇ ಮೂಗುತಿ ಧರಿಸುವುದಕ್ಕೂ ವೈದ್ಯಕೀಯ ಕಾರಣಗಳಿವೆ. ಎಡಹೊಳ್ಳೆಯ ಬಳಿ ಮೂಗುತಿ ಧರಿಸುವುದರಿಂದ ಮಹಿಳೆಯರಲ್ಲಿ ಕಂಡುಬರುವ ಮುಟ್ಟಿನ ನೋವು ಕಡಿಮೆಯಾಗುತ್ತದೆ. ಎಡ ಮೂಗಿನ ಹೊಳ್ಳೆಯಿಂದ ಹಾದುಹೋಗುವ ನಿರ್ದಿಷ್ಟ ನರಗಳು ಸ್ತ್ರೀ ಸಂತಾನೋತ್ಪತ್ತಿ ಅಂಗಗಳೊಂದಿಗೆ ಸಂಬಂಧವನ್ನು ಹೊಂದಿದ್ದು, ಇದು ಸ್ತ್ರೀಗೆ ಹೆರಿಗೆಗೆ ಸಹಕಾರಿ ಎನ್ನಲಾಗಿದೆ. ಇದು ಗರ್ಭಾಶಯವನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ ಅಂತ ಕೂಡ ನಂಬಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA