ಪಾವಗಡ: ತಾಲ್ಲೂಕಿನ ಹೆಸರಾಂತ ಶಾಲೆಯಾದ ಜ್ಞಾನಭೋದಿನಿ ಆಂಗ್ಲ ಪ್ರೌಢಶಾಲೆಯಲ್ಲಿ ಜುಲೈ 6ರಂದು ಅಣಕು ಚುನಾವಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಾಲಾ ಸಂಸತ್ ಚುನಾವಣೆಯಲ್ಲಿ ಪ್ರಾಥಮಿಕ , ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಒಟ್ಟು 25 ವಿದ್ಯಾರ್ಥಿಗಳು ಚುನಾವಣಾ ಕಣದಲ್ಲಿ ಪ್ರತಿನಿಧಿಗಳಾಗಿ ಸ್ಪರ್ಧಿಸಿದ್ದರು.
ಇದರಲ್ಲಿ ಹದಿನೈದು ಜನ ಹೆಣ್ಣು ಮಕ್ಕಳು ಮತ್ತು 10 ಗಂಡು ಮಕ್ಕಳು ಚುನಾವಣಾ ಕಣದಲ್ಲಿದ್ದರು. ಈ ಶಾಲಾ ಸಂಸತ್ ಚುನಾವಣೆ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಜಿ, ಉಪಾಧ್ಯಕ್ಷರಾದ ಸುಬ್ಬ ನರಸಿಂಹ, ಕಾರ್ಯದರ್ಶಿಗಳಾದ ಕೆ.ಎಸ್ ಅನಿಲ್ ಕುಮಾರ್ ಸರ್, ಖಜಾಂಚಿಗಳಾದ ಮಹಾವೀರ ಜೈನ್, ಶಾಲಾ ಮುಖ್ಯೋಪಾಧ್ಯಾಯರಾದ ಮೈಲಾರರೆಡ್ಡಿ ಟಿ.ಕೆ. ಹಾಗೂ ಉಪಮುಖ್ಯೋಪಾಧ್ಯಾಯಿನಿ ಸಂಧ್ಯಾರಾಣಿ ಎ. ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶಾಲಾ ಸಂಸತ್ ಚುನಾವಣೆಯ ಫಲಿತಾಂಶವು ಸಹ ಈ ದಿನವೇ ಪ್ರಕಟಿಸಲಾಯಿತು. ಪ್ರೌಢಶಾಲಾ ವಿಭಾಗದಿಂದ ಹೆಡ್ ಬಾಯ್ (ಶಾಲಾ ಮುಖ್ಯ ವಿದ್ಯಾರ್ಥಿ) ಆಗಿ ಮಹಿಧರ್ (ಒಂಬತ್ತನೇ ತರಗತಿ) ಮತ್ತು ಹೆಡ್ ಗರ್ಲ್ (ಶಾಲಾ ಮುಖ್ಯ ವಿದ್ಯಾರ್ಥಿನಿ) ಆಗಿ ಭವ್ಯಶ್ರೀ ರವರು ಆಯ್ಕೆಯಾದರು.
ಅದೇ ರೀತಿಯಾಗಿ ಹಿರಿಯ ಪ್ರಾಥಮಿಕ ವಿಭಾಗದಿಂದ ಏಕೇಶ್ ಮತ್ತು ವರ್ಷ ರವರು ಹೆಡ್ ಬಾಯ್ ಮತ್ತು ಹೆಡ್ ಗರ್ಲ್ ಆಗಿ ಆಯ್ಕೆಯಾದರು. ಈ ಶಾಲಾಮಟ್ಟದ ಅಣಕು ಚುನಾವಣೆಯಲ್ಲಿ ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA