ತಿಪಟೂರು: ತಾಲೂಕಿನ ನೊಣವಿನಕೆರೆಪ್ರಾಥಮಿಕ ಆರೋಗ್ಯ ಕೇಂದ್ರ ಸ್ವಚ್ಛತೆ ಕಾರ್ಯವೈಖರಿಯನ್ನು ಗುರುತಿಸಿ ನ್ಯಾಷನಲಿ ಹೆಲ್ತ್ ಮಿಷನ್ ಸರ್ವೆಯಲ್ಲಿ ನೊಣವಿನಕೆರೆ ಸಾರ್ವಜನಿಕ ಆರೋಗ್ಯ ಕೇಂದ್ರ ರಾಷ್ಟ್ರಮಟ್ಟದ ಮನ್ನಣೆ ಆಯ್ಕೆಯಾಗಿದೆ ಎಂದು ಡಾಕ್ಟರ್ ಚನ್ನಕೇಶವ ಮಾಹಿತಿ ನೀಡಿದರು.
ಈ ಆರೋಗ್ಯ ಕೇಂದ್ರದಲ್ಲಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ವರ್ಷದ 365 ದಿನವೂ ಕಾರ್ಯನಿರ್ವಹಿಸುತ್ತೇನೆ. ಪ್ರತಿದಿನ 250ರಿಂದ 300 ಜನ ಹೊರರೋಗಿಗಳಿಗೆ ಚಿಕಿತ್ಸೆನೀಡಲಾಗುತ್ತಿದ್ದು, ಪ್ರತಿ ತಿಂಗಳ ಆರು ಸಾವಿರ ರೋಗಿಗಳು ಬರುತ್ತಿದ್ದಾರೆ. ಸರ್ಕಾರದಿಂದ ಔಷಧ ಮಾತ್ರೆ ದೊರೆಯದ ಕಾರಣ, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ರೋಗಿಗಳ ಆಧಾರ್ ಮತ್ತು ಪಡಿತರ ಚೀಟಿ ನಮೂದಿಸಿದರೆ ಪ್ರತಿ ರೋಗಿಗೆ ಒಂದು ದಿನಕ್ಕೆ 300 ಹಣ ಬರುತ್ತದೆ. ಈ ಹಣದಿಂದಸರ್ಕಾರದಿಂದ ದೊರೆಯದ ಔಷಧಗಳನ್ನು ಖರೀದಿಸಿ ಬರುವ ಯಾವುದೇ ರೋಗಿಗೆ ಔಷಧಿ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.
ಇಲ್ಲಿ ಖಾಲಿ ಹುದ್ದೆಗಳು ಇದ್ದು ಇದಕ್ಕೆ ಭರ್ತಿ ಮಾಡಲು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA