ಕೊರಟಗೆರೆ: ಸಾವಿರಾರು ಮಕ್ಕಳು ಭಾಗವಹಿಸಿದ್ದ ಕ್ರೀಡಾಕೂಟದ ಕ್ರೀಡಾಂಗಣದಲ್ಲಿ ಎಕ್ಸ್ಪರಿ ಮ್ಯಾನುಫ್ಯಾಕ್ಚರಿ ಡೇಟ್ ಇಲ್ಲದ ಐಸ್ ಕ್ರೀಮ್ ನ್ನು ಮಕ್ಕಳಿಗೆ ಮಾರಾಟ ಮಾಡಿರುವ ಘಟನೆ ಕೊರಟಗೆರೆ ಜೂನಿಯರ್ ಕಾಲೇಜ್ ಆವರಣದಲ್ಲಿ ನಡೆದಿದೆ.
ಕೆಲವು ಖಾಸಗಿ ಐಸ್ ಕ್ರೀಮ್ ಕಂಪನಿಗಳು ಕಳಪೆ ಗುಣಮಟ್ಟದ ಐಸ್ ಕ್ರೀಮ್ ನ್ನು ಮಕ್ಕಳಿಗೆ ಮಾರಾಟ ಮಾಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರು ಹಾಗೂ ಆರೋಗ್ಯಾಧಿಕಾರಿಗಳ ಬೇಜವಾಬ್ದಾರಿಗೆ ಈ ಘಟನೆ ಸಾಕ್ಷಿಯಾಗಿದೆ.
ಬೆಂಗಳೂರು ತುಮಕೂರು ಕೊರಟಗೆರೆಯಿಂದ ಬಂದಿದ್ದ ಐಸ್ ಕ್ರೀಮ್ ಅಂಗಡಿಗಳಲ್ಲಿ ಎಕ್ಸ್ಪರಿ ಮ್ಯಾನುಫ್ಯಾಕ್ಚರಿ ಡೇಟ್ ಇಲ್ಲದ ಐಸ್ ಕ್ರೀಮ್ ನ್ನು ಮಕ್ಕಳಿಗೆ ಮಾರಾಟ ಮಾಡಲಾಗ್ತಿತ್ತು. ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದಾಗ ಮಾಧ್ಯಮದವರ ಮುಂದೆ ತಬ್ಬಿಬಾದ ಐಸ್ ಕ್ರೀಮ್ ಅಂಗಡಿ ಮಾಲೀಕರು ತಮ್ಮ ಐಸ್ ಕ್ರೀಮ್ ಅಂಗಡಿಗಳನ್ನು ಮುಚ್ಚಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಅವರಿಗೆ ಪತ್ರಕರ್ತರು ಕರೆ ಮಾಡಿ ಘಟನೆಯ ಮಾಹಿತಿ ನೀಡಿದರೂ ಅವರು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಹಬ್ಬಗಳು, ಜಾತ್ರೆಗಳಲ್ಲಿ ಇಂತಹ ಐಸ್ ಕ್ರೀಮ್ ಅಂಗಡಿಗಳು ಬಹುತೇಕ ಕಾಣುತ್ತವೆ. ಸಾರ್ವಜನಿಕರ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಈ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.
ಇಂತಹ ಐಸ್ ಕ್ರೀಮ್ ಅಂಗಡಿಗಳು ಗಲ್ಲಿ ಗಲ್ಲಿಯಲ್ಲಿ ತಲೆಯೆತ್ತಿವೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಇದ್ದ ಗಮನ ಹರಿಸುತ್ತಿಲ್ಲ ಯಾಕೆ..? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q