ಪಾವಗಡ: ಆಂಧ್ರದ ರೊದ್ದಂನಿಂದ ಪಾವಗಡ ತಾಲ್ಲೂಕಿನ ಟಿ.ಎನ್.ಪೇಟೆ ಕಡೆಗೆ ಬರುತ್ತಿದ್ದ ಬೈಕ್ ಮತ್ತು ಟಿ.ಎನ್.ಪೇಟೆ ಗ್ರಾಮದಿಂದ ಆಂಧ್ರದ ಕಡೆ ಹೋಗುತ್ತಿದ್ದ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ ಓರ್ವ ಮೃತಪಟ್ಟಿದ್ದರೆ, ಮತ್ತೊಬ್ಬ ಬೈಕ್ ಸವಾರರ ಸ್ಥಿತಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಮಂಗಳವಾರ ಸಂಜೆ 6 ಗಂಟೆಯ ಸಮಯದಲ್ಲಿ ಟಿ.ಎನ್.ಪೇಟೆ ಗ್ರಾಮದ ಸಮೀಪ ಜರುಗಿದೆ.
ಘಟನೆಯಲ್ಲಿ ರೊದ್ದಂ ಮಂಡಲದ ಕೊರಗ ಗ್ರಾಮಕ್ಕೆ ಸೇರಿದ 25 ವರ್ಷದ ರಾಜು ಎನ್ನುವ ಯುವಕ ಸಾವನ್ನಪ್ಪಿದ್ದು , ಮತ್ತೋರ್ವ ವ್ಯಕ್ತಿಯನ್ನು ರೊದ್ದಂ ಗ್ರಾಮದ ವಾಸಿ ಮಾರುತಿ ಪ್ರಸಾದ್( 29) ಎಂದು ಗುರುತಿಸಲಾಗಿದೆ.
ಮಾರುತಿ ಪ್ರಸಾದ್ ನ ತಲೆಗೆ ಗಂಭೀರವಾದ ಗಾಯವಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್, ಕ್ರೈಂ ಪಿಎಸ್ ಐ ಗುರುನಾಥ್, ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q