nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 10, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

    March 10, 2026
    Facebook Twitter Instagram
    ಟ್ರೆಂಡಿಂಗ್
    • ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ
    • LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!
    • ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ
    • ನೇಮಕಾತಿಯಲ್ಲಿ ಶೇ.7ರಷ್ಟು ಮೀಸಲಾತಿಗೆ ವಾಲ್ಮೀಕಿ ಸಮುದಾಯ ಒತ್ತಾಯ: ಮಾರ್ಚ್ 11ರಂದು ಪ್ರತಿಭಟನೆ
    • ಹಂಪಲಾಪುರ: ಭೂಮಿ ಹಕ್ಕಿಗಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ
    • ಗುಬ್ಬಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬೆಸ್ಕಾಂ ಕಚೇರಿ ಮುಂದೆ ರೈತರಿಂದ ಪ್ರತಿಭಟನೆ
    • ಒಳ ಮೀಸಲಾತಿ ಜಾರಿಗೆ ಆಗ್ರಹ: ಮಾದರ ಮಹಾಸಭಾವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
    • ಔರಾದ್: ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಭೀಮಸೇನರಾವ್ ಸಿಂದೆ ₹2.50 ಲಕ್ಷ ಆರ್ಥಿಕ ನೆರವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಲಂಬಾಣಿ ಸಮುದಾಯದಿಂದ ವಿಶಿಷ್ಟವಾಗಿ ದೀಪಾವಳಿ ಹಬ್ಬ ಆಚರಣೆ
    ಪಾವಗಡ November 5, 2024

    ಲಂಬಾಣಿ ಸಮುದಾಯದಿಂದ ವಿಶಿಷ್ಟವಾಗಿ ದೀಪಾವಳಿ ಹಬ್ಬ ಆಚರಣೆ

    By adminNovember 5, 2024No Comments2 Mins Read
    dipawali

    ಪಾವಗಡ: ಲಂಬಾಣಿ ಸಮುದಾಯದಲ್ಲಿ ಪ್ರಧಾನ ಹಬ್ಬವಾಗಿ ಹಾಸುಹೊಕ್ಕಾಗಿರುವ ದೀಪಾವಳಿ ಹಬ್ಬವನ್ನು ಪಾವಗಡ ತಾಲ್ಲೂಕಿನ ವಿವಿಧ ತಾಂಡಗಳಲ್ಲಿ ಅಮಾವಾಸ್ಯೆಯ ಶುಕ್ರವಾರ ಮತ್ತು ಪಾಡ್ಯ ಶನಿವಾರಗಳಂದು ವಿಶಿಷ್ಟವಾಗಿ ಆಚರಿಸಲಾಗಿದೆ.

    ತಾಲ್ಲೂಕಿನ ಮೇಗಳಪಾಳ್ಯ, ಕೆ.ಸೇವಾಲಾಲ್ ಪುರ, ಹೊಸಹಳ್ಳಿ, ನಾಗೇನಹಳ್ಳಿ, ಭೂಪೂರು, ಜಾಜೂರಾಯನಹಳ್ಳಿ, ಉಪ್ಪಾರಹಳ್ಳಿ, ಪಳವಳ್ಳಿ, ಬಾಲಮ್ಮನಹಳ್ಳಿ ತಾಂಡಾಗಳಲ್ಲಿ ಲಂಬಾಣಿ ಸೊಗಡಿನ ದೀಪಾವಳಿ ಕಳೆಕಟ್ಟಿತ್ತು.


    Provided by
    Provided by

    ಪ್ರತಿವರ್ಷದಂತೆ ದೀಪಾವಳಿಯ ಅಮಾವಾಸ್ಯೆ ಮತ್ತು ಪಾಡ್ಯದ ದಿನಗಳಲ್ಲಿ ನೆರವೇರಿದ ಸಡಗರ ಸಂಭ್ರಮದ ಸಾಂಪ್ರದಾಯಿಕ ಲಂಬಾಣಿ ಹಬ್ಬದಲ್ಲಿ ಹಿರಿಯ ಕಿರಿಯಾದಿಯಾಗಿ ಎಲ್ಲರೂ ಭಾಗವಹಿಸಿ ಜ್ಞಾನದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಪರಂಪರೆಗೆ ಬೆಳಗನ್ನು ತಂದರು.

    ಈ ಹಬ್ಬವು ಸಮುದಾಯಕ್ಕೆ ದೊಡ್ಡ ಹಬ್ಬವಾಗಿದ್ದು, ಜೀವನೋಪಾಯ ನಿಮಿತ್ತ ವಿವಿಧ ಪ್ರದೇಶಗಳಿಗೆ ವಲಸೆ ಹೋಗಿರುವವರು, ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ತಪ್ಪದೆ ಸ್ವಗ್ರಾಮ ತಾಂಡಗಳಿಗೆ ಆಗಮಿಸಿ ಒಂದುಗೂಡಿ ಸಾಮೂಹಿಕ ಹಬ್ಬ ಆಚರಣೆ ಮಾಡುತ್ತಿದ್ದುದ್ದು ಕಂಡುಬಂದಿತು.

    ಹಬ್ಬ ಆಚರಣೆಯ ದಿರುಸು:

    ಆಧುನಿಕತೆಯ ವ್ಯಾಮೋಹದ ನಡುವೆಯೂ ಲಂಬಾಣಿ ದಿರುಸುಗಳು ಯುವತಿಯರನ್ನು ಆಕರ್ಷಿಸುತ್ತವೆ.

    ತಾಂಡಾದಲ್ಲಿನ ಹಿರಿಯ ಮಹಿಳೆಯರು ಹಬ್ಬಕ್ಕೆ ಹಲವಾರು ಹಲವಾರು ತಿಂಗಳು ಮುಂಚೆಯಿಂದಲೇ ತಮ್ಮದೇ ಶೈಲಿಯ ಸಾಂಪ್ರದಾಯಿಕ ಬಟ್ಟೆ ಕಸೂತಿ ಕೆಲಸವನ್ನು ಪ್ರಾರಂಭಿಸಿ ತಯಾರಿಸಿ ಕಿರಿಯರಿಗೆ ಅವುಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಜೊತೆಗೆ ಒಂದು ತಿಂಗಳ ಮುಂಚಿತವಾಗಿಯೇ ಯುವಕ ಯುವತಿಯರಿಗೆ ನೃತ್ಯ ಹಾಡುಗಳ ತರಬೇತಿ ನೀಡುತ್ತಾರೆ.

    ದೀಪಾವಳಿ ಆರಂಭಕ್ಕೂ 9 ದಿನಗಳ ಮುಂಚೆಯೇ ಪ್ರತಿದಿನ ಸಂಜೆ ದೇವಸ್ಥಾನದ ಬಳಿ ಲಂಬಾಣಿ ಯುವತಿಯರು ನೃತ್ಯ ಮಾಡುತ್ತಾರೆ. ಆದಾಗಿ ಹಬ್ಬದಲ್ಲಿ ಯುವತಿಯರು ನೂತನ ಸಂಪ್ರದಾಯಿಕ ಉಡುಪಗಳನ್ನು ತೊಟ್ಟು ಹಾಡು ನೃತ್ಯಗಳೊಂದಿಗೆ ಸಂಭ್ರಮಿಸಿದರು. ಪ್ರತಿ ತಾಂಡದ ಸೇವಾಲಾಲ್‌ ದೇವಾಲಯಗಳ ಬಳಿ ಮಹಿಳೆಯರ ಹಬ್ಬದ ಹಾಡುಗಾರಿಕೆ, ನೃತ್ಯ ಝಲಕ್ ಕಂಡುಬಂದಿತು.

    ಸೊಳೋಯ್ ನೊಂದಿಗೆ ಹಬ್ಬ ಆರಂಭ:

    ಅಮಾವಾಸ್ಯೆಯ ಬೆಳಿಗ್ಗೆ ಗ್ರಾಮದ ಪ್ರಮುಖರಿಂದ ಸೊಳೋಯ್ ಪ್ರಸಾದವನ್ನು ತಯಾರಿಸಿ ಹಂಚುವ ಮೂಲಕ ಲಂಬಾಣಿಗರ ದೀಪಾವಳಿ ಹಬ್ಬ ಆರಂಭಗೊಂಡಿತು.

    ಮನೆ ಮನೆ ಬೆಳಗು:

    ಸಂಜೆ ಯುವತಿಯರು ನೂತನ ಹಣತೆಗಳನ್ನು ಮತ್ತು ನವದಾನ್ಯಗಳ ಮೊಳಕೆಯ ಬುಟ್ಟಿಯ ತೀಸ್ ನ್ನು ಹಿಡಿದು ಸೇವಾಲಾಲ್ ದೇವರ ಮುಂದೆ ಬೆಳಗಿದರು. ನಂತರ ಗ್ರಾಮದ ಪ್ರತಿ ಮನೆಗೆ ಹೋಗಿ ಎಲ್ಲರಿಗೂ ಸುಖ ಸಂತೋಷ ಸಂಪತ್ತು ಸಿಗಲಿ ಎಂಬ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ ಶುಭಕೋರಿ ಹಿರಿಯರಿಂದ ಆಶೀರ್ವಾದ ಪಡೆದು ಬಂದರು. ಈ ಸಂದರ್ಭದಲ್ಲಿ ಹಿರಿಯರು ಯುವತಿಯರಿಗೆ ಕಾಣಿಕೆಗಳನ್ನು ನೀಡಿದರು. ದೀಪಾವಳಿಯ ದಿನದಂದು ಪ್ರತಿ ಮನೆಗಳಿಗೆ ತೆರಳಿ ದೀಪ ಹಚ್ಚುವುದು ಹಬ್ಬದ ಒಂದು ಸಂಪ್ರದಾಯವಾಗಿ ಕಂಡುಬಂತು.

    ಪಾಡ್ಯದ ಆಚರಣೆ:

    ಪಾಡ್ಯದ ಬೆಳಿಗ್ಗೆ ಯುವತಿಯರು ಬೆಟ್ಟ ಗುಡ್ಡ ಬಯಲು ಪ್ರದೇಶಕ್ಕೆ ಹೋಗಿ ಲಕ್ಷ್ಮಿ ಸ್ವರೂಪವಾದ ತಂಗಡೆ ಗಿಡದ ಹೂವುಗಳನ್ನು ಕಿತ್ತುತಂದು ಪ್ರತಿಮನೆಗೆ ಹೋಗಿ ಬಾಗಿಲು ಮತ್ತು ರಂಗೋಲಿಗೆ ಹೂವುಗಳನ್ನು ಹಾಕುವ ಮೂಲಕ ಶುಭಕೋರಿದರು. ಈ ವೇಳೆ ಮಹಿಳೆಯರು ಯುವತಿಯರಿಗೆ ಅಕ್ಕಿಬೆಲ್ಲ ನೀಡಿ ಗೌರವಿಸಿದರು.

    ನಂತರ  ಗ್ರಾಮದಲ್ಲಿ ವಾಸಿಸುವ ಪ್ರತಿ ಕುಲದ ಕುಟುಂಬಗಳ ಸದಸ್ಯರು ಒಂದೊಂದು ಕಡೆ ಸೇರಿ ಬೆಂಕಿಯ ಕೆಂಡಗಳನ್ನು ತಯಾರಿಸಿ, ಈಗಾಗಲೇ ತಯಾರಿಸಿಟ್ಟ ತಂಬಿಟ್ಟಿನ ಒಂದೊಂದು ಚೂರನ್ನು ತೆಗೆದುಕೊಂಡು ಕುಲದಲ್ಲಿ ಮರಣಿಸಿದವರ ಹೆಸರನ್ನು ಹೇಳುತ್ತಾ ತುಪ್ಪದೊಂದಿಗೆ ಬೆಂಕಿಯ ಕೆಂಡದಲ್ಲಿ ಹಾಕುತ್ತ ಅವರ ಆತ್ಮ ಶಾಂತಿಸಲಿ ಎಂದು ಕೋರಿದರು. ಹಾಗೂ ಕುಲದೇವರ ಆರಾಧನೆ ನೆರವೇರಿತು.

    ಎರಡು ದಿನಗಳ ಸಂಜೆ ಮತ್ತು ರಾತ್ರಿ ವೇಳೆ ಯುವಕ ಯುವತಿಯರು ಮತ್ತು ಹಿರಿಯರು ಸಾಂಪ್ರದಾಯಿಕ ಉಡುಪುಗಳೊಂದಿಗೆ ನೃತ್ಯ ಗಾಯನದೊಂದಿಗೆ ಸಂಭ್ರಮಿಸಿದರು. ಕೊನೆಗೆ ತೀಜ್ ಗಳನ್ನು ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಮರ್ಜನ ಮಾಡಿ ಪ್ರಸಾದವನ್ನು ಸ್ವೀಕರಿಸುವ ಮೂಲಕ ಹಬ್ಬವನ್ನು ಕೊನೆಗೊಳಿಸಿದರು.

    ವರದಿ: ನಂದೀಶ್ ನಾಯ್ಕ ಪಿ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಪಾವಗಡ: ಸಾಧಕರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನ

    March 6, 2026

    ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು

    February 8, 2026

    ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ  ದೇಶ—ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಬರಗೂರು ರಾಮಚಂದ್ರಪ್ಪ

    February 5, 2026

    Comments are closed.

    Our Picks

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 10, 2026

    ಬೆಂಗಳೂರು: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ (LPG) ಸಿಲಿಂಡರ್‌ಗಳ ತೀವ್ರ ಕೊರತೆ ಮತ್ತು ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರ…

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

    March 10, 2026

    ನೇಮಕಾತಿಯಲ್ಲಿ ಶೇ.7ರಷ್ಟು ಮೀಸಲಾತಿಗೆ ವಾಲ್ಮೀಕಿ ಸಮುದಾಯ ಒತ್ತಾಯ: ಮಾರ್ಚ್ 11ರಂದು ಪ್ರತಿಭಟನೆ

    March 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.