nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ: ಬಾಲಕಿಯರಿಗೆ ಸುರಕ್ಷಿತ ವಸತಿ ನಿಲಯ ಆರಂಭಕ್ಕೆ ಕ್ರಮ: ಅಪೂರ್ವ ಸಿ. ಅನಂತರಾಮು

    May 26, 2026

    ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ

    May 26, 2026

    ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ

    May 26, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ: ಬಾಲಕಿಯರಿಗೆ ಸುರಕ್ಷಿತ ವಸತಿ ನಿಲಯ ಆರಂಭಕ್ಕೆ ಕ್ರಮ: ಅಪೂರ್ವ ಸಿ. ಅನಂತರಾಮು
    • ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ
    • ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ
    • ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್
    • ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್
    • ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
    • ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
    • ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 10 ರಾಷ್ಟ್ರೀಯ ಪ್ರಶಸ್ತಿ ವಿಜೇತ ಟಿ.ಎಸ್. ನಾಗಾಭರಣ ಅವರ ಸಿನಿಮಾ ಜರ್ನಿ..!!
    ರಾಜ್ಯ ಸುದ್ದಿ January 23, 2022

    10 ರಾಷ್ಟ್ರೀಯ ಪ್ರಶಸ್ತಿ ವಿಜೇತ ಟಿ.ಎಸ್. ನಾಗಾಭರಣ ಅವರ ಸಿನಿಮಾ ಜರ್ನಿ..!!

    By adminJanuary 23, 2022No Comments2 Mins Read
    ts nagabharana

    ಚಂದನವನದ ಸ್ಟಾರ್ ನಿರ್ದೇಶಕ ಕಂಟೆಂಟ್ ಸಿನಿಮಾಗಳ ಮಾಸ್ಟರ್ ಮೈಂಡ್ ಟಿ. ಎಸ್. ನಾಗಾಭರಣ ಅವರಿಗೆ ಹುಟ್ಟುಹಬ್ಬದ ಸಂಭ್ರಮ.. 69 ವರ್ಷದ ನಟ ಹಾಗೂ ನಿರ್ದೇಶಕರಾದ ನಾಗಾಭರಣ ಅವರಿಗೆ ಗಣ್ಯರು , ಸಿನಿಮಾ ತಾರೆಯರು, ಆಪ್ತರು , ನೆಟ್ಟಿಗರು ಶುಭಾಷಯಗಳ ಮಹಾಪೂರ ಹರಿಸುತ್ತಿದ್ದಾರೆ.

    ಸುಮಾರು 36 ಸಿನಿಮಾಗಳನ್ನ ಮಾಡಿರುವ ನಾಗಾಭರಣ ಅವರು 10 ರಾಷ್ಟ್ರೀಯ ಪ್ರಶಸ್ತಿ , 23 ರಾಜ್ಯ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ..ಇವರ ಸಾರಥ್ಯದ 8 ಸಿನಿಮಾಗಳು ಪನೋರೋಮಾ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವಕ್ಕೆ ಪ್ರವೇಶ ಪಡೆದಿದ್ದವು.ಅಂದ್ಹಾಗೆ ಟಿ. ಎನ್ ನಾಗಾಭಾರಣ ಅಂದ್ರೆ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು ನಿರ್ದೇಶನದ ಜೊತೆಗೆ ನಟನೆ , ರಚನೆ ,ನಿರ್ಮಾಣ,  ರಂಗಮಂದಿರದಲ್ಲೂ ಗುರುತಿಸಿಕೊಂಡಿದ್ದಾರೆ. ಹಲವು ಧಾರಾವಾಹಿಗಳನ್ನ ನಾಗಾಭರಣ ಅವರು ನಿರ್ಮಿಸಿದ್ದಾರೆ. ದೂರದರ್ಶನ ವಾಹಿನಿಯಲ್ಲಿನ ಅನೇಕ ಕಾರ್ಯಕ್ರಮಳಿಗೂ ಬಂಡವಾಳ ಹೂಡಿದ್ದಾರೆ.


    Provided by
    Provided by

    ಇವರ ಜನುಮದ ಜೋಡಿ ಸಿನಿಮಾ ಅಂತು ಸೂಪರ್ ಹಿಟ್ ಆಗಿದ್ದು ಸುಮಾರು 1 ವರ್ಷ ಥಿಯೇಟರ್ ಯಶಸ್ವಿ ಪ್ರದರ್ಶನ ಕಂಡಿತ್ತು. ಅವರು ನಿರ್ದೇಶಿಸಿರುವ ಒಟ್ಟಾರೆ 36 ಸಿನಿಮಾಗಳ ಪೈಕಿ 18 ಸಿನಿಮಾಗಳಿಗೆ ಪ್ರತಿಷ್ಠಿತ  ಪ್ರಶಸ್ತಿಗಳು ಲಭಿಸಿವೆ. 4 ಮಕ್ಕಳ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ. 7 ಬಾರಿ ಫಿಲ್ಮ್  ಫೇರ್ ಅವಾರ್ಡ್ ಗಳನ್ನ ಪಡೆದಿದ್ದಾರೆ. ಚಿನ್ನಾರಿ ಮುತ್ತ ಸಿನಿಮಾ ಕೂಡ ಇವರ ಸಿನಿಮಾಗಳ ಪೈಕಿ ದೊಡ್ಡ ಯಶಸ್ಸು ತಂದುಕೊಟ್ಟ , ಅವಾರ್ಡ್ ವಿನ್ನಿಂಗ್ ಸಿನಿಮಾಗಳ ಪೈಕಿ ಒಂದು..

    ಮೈಸೂರು ಮಲ್ಲಿಗೆ , ಚಿಗುರಿದ ಕನಸು , ನಾಗಮಂಡಲ, ಕಲ್ಲರಳಿ ಹೂವಾಗಿ ಅಂತಹ ಸಿನಿಮಾಗಳಿಗೆ ಜನರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.  ಅಷ್ಟೇ ಅಲ್ಲ ಇವರ ಈ ಸಿನಿಮಾಗಳು ಬಾಲಿವುಡ್ ನಲ್ಲಿ ಬಂದ 1942 ಲವ್ ಸ್ಟೋರಿ , ಸ್ವದೇಶ್ , ಪಹೇಲಿ, ಭಜರಂಗಿ ಭಾಯ್ ಜನ್ ನಂತಹ ಸೂಪರ್ ಹಿಟ್ ಸಿನಿಮಾಗಳ ಸ್ಟೋರಿ ಲೈನ್ ಗೆ ಇನ್ಸಪಿರೇಷನ್ ಎನ್ನಲಾಗಿದೆ.

    ಸುಮಾರು 4 ದಶಕಗಳಿಂದ ನಾಗಾಭರಣ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ಧಾರೆ. ಪ್ರಸ್ತುತ ಇವರು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.ಮೊದಲಿಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ನಾಗಾಭರಣ ಅವರು ಅನೇಕ ನಾಕಕಗಳನ್ನ ನಿರ್ದೇಶಿಸಿದ್ದಾರೆ, ನಟಿಸಿದ್ದಾರೆ.  ಸಂಗ್ಯಾ ಬಾಲ್ಯ, ಕಥಾಲೇ ಬೆಳಕು, ಶಕರಣ ಸಾರೋಟು, ಜೋಕುಮಾರಸ್ವಾಮಿಯಂತಹ ನಾಟಕಗಳಿಗೆ ಹೆಸರುವಾಸಿ.

    ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡ್ ನಿರ್ದೇಶನದ ಕಾಡು ಚಿತ್ರದ್ದಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಚೋಮನ ದುಡಿ ಚಿತ್ರಕ್ಕೆ ಬಿ ವಿ ಕಾರಂತರ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    ವಿದ್ಯಾರ್ಥಿಯಾಗಿ ಅವರು ತಮ್ಮ ಮೊದಲ ಚಲನಚಿತ್ರವನ್ನು ನಿರ್ದೇಶಿಸಿದರು, ಇದು 1979 ರ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿ, ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನೂ ಸಹ ನಾಗಾಭರಣ ಪಡೆದಿದ್ದಾರೆ.

    ನಾಗಾಭರಣ ಅವರು ತೆರೆಮರೆಯಲ್ಲಿಯೂ ಕೆಲಸ ಮಾಡಿದ್ದಾರೆ, ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬಿ.ವಿ.ಕಾರಂತ್, ಚಂದ್ರಶೇಖರ ಕಂಬಾರ ಮತ್ತು ಗಿರೀಶ್ ಕಾರ್ನಾಡರಂತಹ ಪ್ರಮುಖ ರಂಗಕರ್ಮಿಗಳೊಂದಿಗೆ ನಾಗಾಭರಣ ಅವರು ಒಡನಾಟವನ್ನು ಹೊಂದಿದ್ದರು.ರಂಗಭೂಮಿಯಲ್ಲಿನ ಅವರ ಸಾಧನೆಗಾಗಿ ಅವರು ಭಾರತ ಸರ್ಕಾರದಿಂದ ಚಿನ್ನದ ಪದಕವನ್ನು ಪಡೆದಿದ್ದಾರೆ. ಅವರು ಬೆನಕ ಎಂಬ ನಾಟಕ ಸಂಸ್ಥೆಯ ಸ್ಥಾಪಕರು ಆಗಿದ್ದಾರೆ.

    ಧಾರಾವಾಹಿಗಳು

    ಆನ್ ಇಂಡಿಯನ್ ಇನ್  ಅಮೆರಿಕಾ, ಸಹಸ್ರಪಾನ್, ತೆನಾಲಿ ರಾಮ ,  ಓ ನನ್ನ ಬೆಳಕೇ , ಗಾನಯೋಗಿ ಪಂಚಾಕ್ಷರಿ ನಂತಹ ಧಾರಾವಾಹಿಗಳನ್ನ ಮಾಡಿದ್ದಾರೆ.

    ಸಿನಿಮಾಗಳು

    ಗ್ರಹಣ , ಬಂಗಾರದ ಜಿಂಕೆ , ಅನ್ವೇಷಣೆ, ಪ್ರಾಯ ಪ್ರಾಯ ಪ್ರಾಯ , ಬ್ಯಾಂಕರ್ ಮರ್ ಗಯಾ, ಸೇಡಿನ ಸಂಚು , ಆಸ್ಫೋಟ , ಸಂತ ಶಿಶುನಾಳ ಶರೀಫ , ಪ್ರೇಮಯೋಗಿ , ಆಕಸ್ಮಿಕ ಇನ್ನೂ ಹೀಗೆ ಒಟ್ಟು 36 ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ.

     

    ನಟನೆ

    ಇನ್ನೂ ಆಕ್ಸಿಡೆಂಟ್ , ನೀಲ , ಮಿ. ಗರಗಸ, ಕಿರಾತಕ , ಕೆಜಿಎಫ್ , ಆದಿ ಶಂಕರಾಚಾರ್ಯ , ಉಪ್ಪಿನ ಕಾಗದ ,  ಜೈಲಲಿತಾ, ಕಂಸಾಲೆ ಕೈಸಾಲೆ, ವಸುಂಧರಾ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ವರದಿ: ಆಂಟೋನಿ ಬೇಗೂರು

     

    admin
    • Website

    Related Posts

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್

    May 25, 2026

    ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ

    May 25, 2026

    Leave A Reply Cancel Reply

    Our Picks

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ: ಬಾಲಕಿಯರಿಗೆ ಸುರಕ್ಷಿತ ವಸತಿ ನಿಲಯ ಆರಂಭಕ್ಕೆ ಕ್ರಮ: ಅಪೂರ್ವ ಸಿ. ಅನಂತರಾಮು

    May 26, 2026

    ಕೊರಟಗೆರೆ: ತಾಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ 2026–27ನೆ ಸಾಲಿನ ಕಸ್ತೂರ್ಬಾ ಗಾಂಧಿ ಬಾಲಕಿಯರ ವಸತಿ ನಿಲಯ ಆರಂಭಿಸುವ ಸಂಬಂಧ…

    ಬಕ್ರೀದ್: ಶಾಂತಿಗೆ ಭಂಗ ತಂದರೆ, ಪ್ರಚೋದನೆ ನೀಡಿದ್ರೆ ಕ್ರಮ: ಕೆ.ವಿ.ಅಶೋಕ್ ಎಚ್ಚರಿಕೆ

    May 26, 2026

    ವಿಶ್ವ ಕಾರ್ಮಿಕ ದಿನಾಚರಣೆ: ನೂತನ ಕಾರ್ಮಿಕ ಕಚೇರಿ ಉದ್ಘಾಟನೆ, ಹಿರಿಯ ಕಾರ್ಮಿಕರಿಗೆ ಸನ್ಮಾನ

    May 26, 2026

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.