nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರಧಾನಿ ಮೋದಿ ಜೊತೆಗಿನ ‘ರಹಸ್ಯ’ ಮಾತುಕತೆ ಏನಿತ್ತು? ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

    April 20, 2026

    50 ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್; ಖತರ್ನಾಕ್ ಉದ್ಯಮಿ ಕೃಪಲಾನಿ ಅರೆಸ್ಟ್!

    April 20, 2026

    ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧಿಸಿಲ್ಲ, ಬಿಜೆಪಿ ಸುಳ್ಳು ಹೇಳುತ್ತಿದೆ: ಸಿಎಂ ಸಿದ್ದರಾಮಯ್ಯ ಕಿಡಿ

    April 20, 2026
    Facebook Twitter Instagram
    ಟ್ರೆಂಡಿಂಗ್
    • ಪ್ರಧಾನಿ ಮೋದಿ ಜೊತೆಗಿನ ‘ರಹಸ್ಯ’ ಮಾತುಕತೆ ಏನಿತ್ತು? ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ
    • 50 ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್; ಖತರ್ನಾಕ್ ಉದ್ಯಮಿ ಕೃಪಲಾನಿ ಅರೆಸ್ಟ್!
    • ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧಿಸಿಲ್ಲ, ಬಿಜೆಪಿ ಸುಳ್ಳು ಹೇಳುತ್ತಿದೆ: ಸಿಎಂ ಸಿದ್ದರಾಮಯ್ಯ ಕಿಡಿ
    • ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ 1.25 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರು ಖರೀದಿಗೆ ಸರ್ಕಾರ ಅಸ್ತು
    • ತಿಪಟೂರು:  ಚಿನ್ನ ಕದ್ದು, ಮನೆಗೆ ಬೆಂಕಿ ಹಚ್ಚಿದ್ದ ಆರೋಪಿಗೆ ನ್ಯಾಯಾಂಗ ಬಂಧನ
    • ಜಯಂತಿ ಗ್ರಾಮದ ಬಳಿ ಸರ್ವೀಸ್ ರಸ್ತೆಗೆ ಆಗ್ರಹ: ತಿಪಟೂರು ಉಪ ವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ
    • ಮೇವು ಲಭ್ಯತೆ ಪರಿಶೀಲಿಸಿ: ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಅಭಿಯಾನ ಕುರಿತು ಚರ್ಚೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್
    • ತಿಪಟೂರು: ಸಿಲಿಂಡರ್ ಸ್ಫೋಟಗೊಂಡು ಎರಡು ಮನೆಗಳು ಭಸ್ಮ; ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ಕಾರದಿಂದ ಕಥಾ ಕೀರ್ತನ ಕ್ಷೇತ್ರ ಕಡೆಗಣನೆ: ನರಸಿಂಹದಾಸ್
    ತುಮಕೂರು December 4, 2024

    ಸರ್ಕಾರದಿಂದ ಕಥಾ ಕೀರ್ತನ ಕ್ಷೇತ್ರ ಕಡೆಗಣನೆ: ನರಸಿಂಹದಾಸ್

    By adminDecember 4, 2024No Comments2 Mins Read
    katha samkirthana

    ತುಮಕೂರು: ರಾಜ್ಯ ಸರ್ಕಾರ ಕಥಾ ಕೀರ್ತನ ಕ್ಷೇತ್ರವನ್ನು ನಿರ್ಲಕ್ಷಿಸಿದೆ. ಸುಮಾರು 9 ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕೀರ್ತನ ಕ್ಷೇತ್ರವನ್ನೇ ಮರೆತಿದೆ ಎಂದು ಹರಿಕಥಾ ವಿದ್ವಾನ್ ಕಲಾಶ್ರೀ ನರಸಿಂಹದಾಸ್ ಅಸಮಾಧಾನ ವ್ಯಕ್ತಪಡಿಸಿದರು.

    ನಗರದ ಎಸ್.ಎಸ್.ಪುರಂನಲ್ಲಿ ಕೀರ್ತನ ರಂಗ ಬಳಗ (ರಿ.), ತುಮಕೂರು, ಶ್ರೀ ಸೀತಾರಾಮ ದೇವಸ್ಥಾನ ವಿಶ್ವಸ್ಥ ಸಮಿತಿ, ಎಸ್.ಎಸ್. ಪುರಂ, ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಥಾ ಕೀರ್ತನ ಸಂಭ್ರಮ 2024 ರ ಅಂಗವಾಗಿ ಹಮ್ಮಿಕೊಂಡಿದ್ದ ಕಥಾಕೀರ್ತನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


    Provided by
    Provided by

    ಸಂಗೀತ, ನೃತ್ಯ ಅಕಾಡೆಮಿಯಿಂದ ಕಥಾ ಕೀರ್ತನ ಕ್ಷೇತ್ರವನ್ನು ಬೇರ್ಪಡಿಸಿ ಕಥಾ ಕೀರ್ತನ ಅಕಾಡೆಮಿಯನ್ನು ಸ್ಥಾಪಿಸುವಂತೆ ಹಾಗೂ ಕೀರ್ತನ ಕ್ಷೇತ್ರದ ಸಾಧಕರಾದ ವಸಂತಲಕ್ಷ್ಮೀ÷್ಮ ಮತ್ತು ಕು. ಮಾಲಿನಿಯವರನ್ನು ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಲಕ್ಷಿಸಿರುವುದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

    ಜಿಲ್ಲಾ ಮಟ್ಟದಲ್ಲಿ ಕೀರ್ತನಕಾರರನ್ನು ಕಡೆಗಣಿಸಿರುವ ವಿಚಾರ ಮತ್ತು ಹರಿಕಥೆ ಎಂದರೆ ಏನು ಎಂಬುದಾಗಿ ಇಲಾಖೆಯ ಸಚಿವರು ಸಂಶಯಪಟ್ಟಿರುವುದನ್ನು ಖಂಡಿಸಿದರು.

    ಸಂಭಾವನೆಗೆ ಆಗ್ರಹ:

    ತುಮಕೂರು ಜಿಲ್ಲಾಡಳಿತದ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ತುಮಕೂರು ದಸರಾ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ ಜಿಲ್ಲೆಯ ಕಲಾವಿದರಿಗೆ ಸಂಭಾವನೆ ನೀಡದೆ ಕಡೆಗಣಿಸುತ್ತಾ ಮೀನಾಮೇಷ ಎಣಿಸಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ತಮಟೆ ವಾದ್ಯ, ನಗಾರಿ ಸಮೇತ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹತ್ತಿರ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಂಭಾವನೆ ನೀಡುವಲ್ಲಿ ಜಿಲ್ಲೆಯ ಕಲಾವಿದರನ್ನು ನಿರ್ಲಕ್ಷಿಸಲಾಗಿದೆ. ಆದರೆ ಹೊರಗಿನ ಕಲಾವಿದರಿಗೆ ವಿಳಂಬ ಇಲ್ಲದೆ ಅವರು ಕೇಳಿದಷ್ಟು ಅಂದರೆ 10–20 ಲಕ್ಷ ಸಂಭಾವನೆ ಕೊಡಲಾಗಿದೆ ಎಂದ ಅವರು, ಊರಿನ ಸ್ಥಳೀಯ ಕಲಾವಿದರಿಗೆ ಕುಡಿಯಲು ನೀರನ್ನು ಸಹ ನೀಡದೆ, ಕೂಲಿ ಮಾಡಿದ ಹಣವನ್ನು ಕೊಡದೆ ನೋಯಿಸುತ್ತಿರುವುದು ಎಷ್ಟು ಸರಿ ಎಂದು ಜಿಲ್ಲಾಡಳಿತವನ್ನು ಅವರು ಪ್ರಶ್ನಿಸಿ, ಸ್ಥಳೀಯ ಕಲಾವಿದರ ಬಗ್ಗೆ ಜಿಲ್ಲಾಡಳಿತ ತಾಳಿರುವ ಧೋರಣೆ ಖಂಡನೀಯ ಎಂದರು.

    ದಸರಾ ಉತ್ಸವದಲ್ಲಿ ಕಾರ್ಯಕ್ರಮದ ನೀಡಿದ ಸಂಭಾವನೆಯನ್ನು ಕೇಳಿದರೆ ಜಿಲ್ಲಾಧಿಕಾರಿಗಳನ್ನು ಕೇಳಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹೇಳುತ್ತಾರೆ. ಜಿಲ್ಲಾಧಿಕಾರಿಗಳನ್ನು ಕೇಳಿದರೆ ಕೊಟ್ಟಿದ್ದೇವೆ ಅಲ್ಲೇ ಕೇಳಿ ಎನ್ನುತ್ತಾರೆ ಎಂದು ದೂರಿದರು.

    ಮೇಲ್ವರ್ಗದ ಜನರ ಕಲಾ ಪ್ರದರ್ಶನಕ್ಕೆ ಹಣ ನೀಡಿ ದಲಿತರು, ಜಿಲ್ಲೆಯ ಕಲಾವಿದರನ್ನು ಜಿಲ್ಲಾಡಳಿತ ಅಧಿಕಾರಿಗಳು ಶೋಷಣೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾವು ಯಾರನ್ನು ಕೇಳಬೇಕು ಎಂದು ಅವರು ನೋವಿನಿಂದ ಹೇಳಿದರು.

    ಮುಂದಿನ ದಿನಗಳಲ್ಲಿ ಇಂತಹ ಸ್ಥಿತಿಗೆ ಸ್ಥಳೀಯ ಕಲಾವಿದರನ್ನು ದೂಡಬೇಡಿ. ಹಿಂದುಳಿದ ಸಮುದಾಯದ ಕಲಾವಿದರನ್ನು ನಿರ್ಲಕ್ಷಿಸಿದ್ದೇ ಆದರೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ತಂಡವನ್ನು ನೇಮಿಸುವುದಕ್ಕೂ ಮುನ್ನ ಇಲಾಖೆಯಿಂದ ಹಣ ನೀಡಬೇಕು. ಆ ನಂತರ ಕಾರ್ಯಕ್ರಮಕ್ಕೆ ನಿಯೋಜಿಸಬೇಕು ಎಂದು ಅವರು ರಾಜ್ಯ ಹೋರಾಟಗಾರರ ವೇದಿಕೆಯ ಕಲಾವಿದರ ಪರವಾಗಿ ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಶ್ರೀರಾಮ ಸೇವಾ ವಿಶ್ವಸ್ಥ ಸಮಿತಿ ಪದಾಧಿಕಾರಿಗಳಾದ ಗೋಪಾಲ್, ಪ್ರಕಾಶ್, ಸಿಮೆಂಟ್ ಮಂಜಣ್ಣ, ಮುರುಳೀಧರ್, ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಮೇವು ಲಭ್ಯತೆ ಪರಿಶೀಲಿಸಿ: ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಅಭಿಯಾನ ಕುರಿತು ಚರ್ಚೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್

    April 20, 2026

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪ್ರಧಾನಿ ಮೋದಿ ಜೊತೆಗಿನ ‘ರಹಸ್ಯ’ ಮಾತುಕತೆ ಏನಿತ್ತು? ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

    April 20, 2026

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಂಡ್ಯದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾಗ, ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ…

    50 ಮಹಿಳಾ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್; ಖತರ್ನಾಕ್ ಉದ್ಯಮಿ ಕೃಪಲಾನಿ ಅರೆಸ್ಟ್!

    April 20, 2026

    ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧಿಸಿಲ್ಲ, ಬಿಜೆಪಿ ಸುಳ್ಳು ಹೇಳುತ್ತಿದೆ: ಸಿಎಂ ಸಿದ್ದರಾಮಯ್ಯ ಕಿಡಿ

    April 20, 2026

    ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ 1.25 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರು ಖರೀದಿಗೆ ಸರ್ಕಾರ ಅಸ್ತು

    April 20, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.