ತುಮಕೂರು: ಜಿಲ್ಲೆ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ತೀತಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೀತಾ ಗ್ರಾಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಕಾರ್ಯಕ್ರಮವನ್ನು ಕೊರಟಗೆರೆ ತಾಲೂಕು ದಂಡಾಧಿಕಾರಿಗಳಾದ ನಹಿದಾ ಜಮ್ ಜಮ್ ರವರು ಉದ್ಘಾಟನೆ ಮಾಡಿದರು
ಈ ಯೋಜನೆಯಲ್ಲಿ ಸರ್ಕಾರದ 790 ಹೆಚ್ಚು ಸೇವೆಗಳು ದೊರೆಯಲಿವೆ ಎಂದು ದಂಡಾಧಿಕಾರಿಗಳು, ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೋಳಾಲ ಉಪತಹಶೀಲ್ದಾರ್ ಮಧುಚಂದ್ರ, ಕೊರಟಗೆರೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕರವೇ ನಟರಾಜ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಯತಿಂದ್ರ ಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗದೀಶ್ ಟಿ.ಕೆ ಮತ್ತು ವಿ.ಎ.ಮಂಜುನಾಥ್ ಮತ್ತು ಗ್ರಾಮ ಒನ್ ಸೇವಾ ಕರ್ತರಾದ ಜಾನಕಿ ಟಿ.ಕೆ. ಮತ್ತು ನರಸಿಂಹಮೂರ್ತಿ ಹಾಜರಿದ್ದರು.
ವರದಿ : ಸಿದ್ದೇಶ್ ನೇಗಲಾಲ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy