nammatumakuru

    Subscribe to Updates

    Get the latest creative news from FooBar about art, design and business.

    What's Hot

    ರೈತರು ತಮ್ಮ ಜಮೀನು ಮಾರಾಟ ಮಾಡಬೇಡಿ: ಶಾಸಕ ಬಿ.ಸುರೇಶ್ ಗೌಡ ಕಿವಿಮಾತು

    February 10, 2026

    ಜಾತಿ ಮುಖ್ಯವಲ್ಲ ಸಮಾಜ ಸೇವೆ ಮುಖ್ಯ: ಶಾಸಕ ಎಂ.ಟಿ.ಕೃಷ್ಣಪ್ಪ

    February 10, 2026

    ನವಜಾತ ಶಿಶುಗಳ ಆರೈಕೆ ಬಲಪಡಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸ್ಸು

    February 10, 2026
    Facebook Twitter Instagram
    ಟ್ರೆಂಡಿಂಗ್
    • ರೈತರು ತಮ್ಮ ಜಮೀನು ಮಾರಾಟ ಮಾಡಬೇಡಿ: ಶಾಸಕ ಬಿ.ಸುರೇಶ್ ಗೌಡ ಕಿವಿಮಾತು
    • ಜಾತಿ ಮುಖ್ಯವಲ್ಲ ಸಮಾಜ ಸೇವೆ ಮುಖ್ಯ: ಶಾಸಕ ಎಂ.ಟಿ.ಕೃಷ್ಣಪ್ಪ
    • ನವಜಾತ ಶಿಶುಗಳ ಆರೈಕೆ ಬಲಪಡಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸ್ಸು
    • ಪಕ್ಷ ನಿಷ್ಠೆ ಇಲ್ಲದವರನ್ನು  ಜೊತೆಯಲ್ಲಿಟ್ಟುಕೊಳ್ಳಬಾರದು ಎಚ್.ಡಿ.ಕುಮಾರಸ್ವಾಮಿ ಖಡಕ್ ಮಾತು
    • ವೇಶ್ಯಾವಾಟಿಕೆಗೆ ಅತ್ತೆ–ಮಾವನ ಒತ್ತಾಯ: ಮನನೊಂದ ವಿವಾಹಿತೆ ಆತ್ಮಹತ್ಯೆ
    • ಕೆನಡಾದಲ್ಲಿ ಬೆಂಗಳೂರು ಮೂಲದ ಯುವಕ ಗುಂಡೇಟಿಗೆ ಬಲಿ
    • ತುಮಕೂರು: ಬಾಣಾವರ ಗೇಟ್ ಬಳಿ ಭೀಕರ ಸರಣಿ ಅಪಘಾತ; ಮಾಜಿ ತಾಪಂ ಸದಸ್ಯ ಸೇರಿ ಇಬ್ಬರು ಸಾವು
    • ಮಧುಗಿರಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿ ವಶ, ಮೂವರ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು ದಸರಾ | ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ
    ತುಮಕೂರು October 1, 2025

    ತುಮಕೂರು ದಸರಾ | ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ

    By adminOctober 1, 2025No Comments1 Min Read
    tumakuru dasara

    ತುಮಕೂರು: ನವರಾತ್ರಿ ಆಚರಣೆಯು ಅಂತಿಮ ಘಟ್ಟ ತಲುಪಿದ್ದು, ಜಂಬೂ ಸವಾರಿಗೆ ನಗರ ಸಜ್ಜಾಗಿ ನಿಂತಿದೆ. ದಸರಾದ ಕೊನೆಯ ದಿನವಾದ ಗುರುವಾರ ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.

    ಕಳೆದ ವರ್ಷದಿಂದ ಜಿಲ್ಲಾ ಆಡಳಿತ ದಸರಾ ಆಚರಣೆ ಮಾಡುತ್ತಾ ಬಂದಿದ್ದು, ಈ ವರ್ಷದ ಆಚರಣೆ ಹಾಗೂ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಿದೆ. ಹಿಂದಿನ ವರ್ಷಗಳಲ್ಲಿ ಬನ್ನಿ ಕಡಿದು, ದೇವರ ಮೆರವಣಿಗೆ ಮಾಡಲಾಗುತಿತ್ತು. ಆದರೆ ಈ ಬಾರಿ ಜಂಬೂ ಸವಾರಿ ಮೆರವಣಿಗೆಯನ್ನು ಅದ್ದೂರಿಯಾಗಿ ಏರ್ಪಡಿಸಲಾಗಿದೆ.


    Provided by
    Provided by

    ಮೈಸೂರು ದಸರಾ ಮಾದರಿಯನ್ನು ಜಿಲ್ಲಾ ಆಡಳಿತ ಸಹ ಅನುಕರಣೆ ಮಾಡುತ್ತಿದ್ದು, ಮೆರವಣಿಗೆಗೆ ಆನೆಗಳನ್ನು ಕರೆ ತರಲಾಗಿದೆ. ಮೈಸೂರಿನ ಜಂಬೂ ಸವಾರಿ ಮಾದರಿಯಲ್ಲೇ ನಗರದಲ್ಲೂ ಮೆರವಣಿಗೆ ಆಯೋಜನೆ ಮಾಡಲಾಗಿದೆ. ಆನೆಗಳ ಜತೆಗೆ ನಗರ ಹಾಗೂ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಗ್ರಾಮ ದೇವತೆಗಳು ಭಾಗವಹಿಸಲಿವೆ.

    ವೈಭವಯುತ ಅಂಬಾರಿ ಮೆರವಣಿಗೆಯಲ್ಲಿ ಕಳಸ ಹೊತ್ತ 150 ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಲಿದ್ದು, ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ.

    ಜೂನಿಯರ್ ಕಾಲೇಜು ಮೈದಾನದಲ್ಲಿ ವಿಜಯದಶಮಿ ಧಾರ್ಮಿಕ ಪೂಜೆ, ಶಮಿ ಪೂಜೆ ನೆರವೇರಲಿದೆ. ಬಿಜಿಎಸ್ ವೃತ್ತದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಸಚಿವ ಜಿ.ಪರಮೇಶ್ವರ ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಬಿಜಿಎಸ್‌ ವೃತ್ತದಿಂದ (ಟೌನ್‌ ಹಾಲ್‌) ಆರಂಭವಾಗಿ ಅಶೋಕ ರಸ್ತೆ, ಜಿಲ್ಲಾಧಿಕಾರಿ ಕಚೇರಿ ವೃತ್ತ, ಅಮಾನಿಕೆರೆ ರಸ್ತೆ, ಕೆಇಬಿ ರಸ್ತೆ, ಕೋತಿತೋಪು, ಎಸ್.ಎಸ್.ವೃತ್ತದ ಮೂಲಕ ಕಾಲೇಜು ಮೈದಾನಕ್ಕೆ ಬಂದು ತಲುಪಲಿದೆ.

    ಗುರುವಾರ ಸಂಜೆ ಕಾಲೇಜು ಆವರಣದಲ್ಲಿ ದಶಾವತಾರ ರೂಪಕ, ಜಾನಪದ ನೃತ್ಯ ಗಮನ ಸೆಳೆಯಲಿದೆ. ಅರ್ಜನ್ ಜನ್ಯ ನೇತೃತ್ವದಲ್ಲಿ ಸಂಗೀತ ರಸಸಂಜೆ ಮೂಡಿಬರಲಿದೆ. ರಾತ್ರಿ 10.30 ಗಂಟೆಗೆ ಹಸಿರು ಸಿಡಿಮದ್ದುಗಳಿಂದ ಬಾಣ ಬಿರುಸು ಪ್ರದರ್ಶನದ ಮೂಲಕ ದಸರಾ ಆಚರಣೆಗೆ ತೆರೆ ಬೀಳಲಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ರೈತರು ತಮ್ಮ ಜಮೀನು ಮಾರಾಟ ಮಾಡಬೇಡಿ: ಶಾಸಕ ಬಿ.ಸುರೇಶ್ ಗೌಡ ಕಿವಿಮಾತು

    February 10, 2026

    ನವಜಾತ ಶಿಶುಗಳ ಆರೈಕೆ ಬಲಪಡಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸ್ಸು

    February 10, 2026

    ತುಮಕೂರು: ಬಾಣಾವರ ಗೇಟ್ ಬಳಿ ಭೀಕರ ಸರಣಿ ಅಪಘಾತ; ಮಾಜಿ ತಾಪಂ ಸದಸ್ಯ ಸೇರಿ ಇಬ್ಬರು ಸಾವು

    February 9, 2026

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ರೈತರು ತಮ್ಮ ಜಮೀನು ಮಾರಾಟ ಮಾಡಬೇಡಿ: ಶಾಸಕ ಬಿ.ಸುರೇಶ್ ಗೌಡ ಕಿವಿಮಾತು

    February 10, 2026

    ತುಮಕೂರು: ಈಗ ಭೂಮಿಯ ಬೆಲೆ ಚಿನ್ನದ ಬೆಲೆಯಾಗಿದೆ. ರೈತರು ತಮ್ಮ ಜಮೀನು ಮಾರಾಟ ಮಾಡಿಕೊಳ್ಳಬೇಡಿ, ಮಕ್ಕಳ ಮದುವೆ ಅಥವಾ ಸಂಸಾರದ…

    ಜಾತಿ ಮುಖ್ಯವಲ್ಲ ಸಮಾಜ ಸೇವೆ ಮುಖ್ಯ: ಶಾಸಕ ಎಂ.ಟಿ.ಕೃಷ್ಣಪ್ಪ

    February 10, 2026

    ನವಜಾತ ಶಿಶುಗಳ ಆರೈಕೆ ಬಲಪಡಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸ್ಸು

    February 10, 2026

    ಪಕ್ಷ ನಿಷ್ಠೆ ಇಲ್ಲದವರನ್ನು  ಜೊತೆಯಲ್ಲಿಟ್ಟುಕೊಳ್ಳಬಾರದು ಎಚ್.ಡಿ.ಕುಮಾರಸ್ವಾಮಿ ಖಡಕ್ ಮಾತು

    February 9, 2026
    ont-size:32px!important;box-shadow:none;display:inline-block;vertical-align:middle">

    ಜಾತಿ ಮುಖ್ಯವಲ್ಲ ಸಮಾಜ ಸೇವೆ ಮುಖ್ಯ: ಶಾಸಕ ಎಂ.ಟಿ.ಕೃಷ್ಣಪ್ಪ

    February 10, 2026

    ನವಜಾತ ಶಿಶುಗಳ ಆರೈಕೆ ಬಲಪಡಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸ್ಸು

    February 10, 2026

    ಪಕ್ಷ ನಿಷ್ಠೆ ಇಲ್ಲದವರನ್ನು  ಜೊತೆಯಲ್ಲಿಟ್ಟುಕೊಳ್ಳಬಾರದು ಎಚ್.ಡಿ.ಕುಮಾರಸ್ವಾಮಿ ಖಡಕ್ ಮಾತು

    February 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.