ಹಿರಿಯೂರು: ದಕ್ಷಿಣಕಾಶಿ ಎಂದೇ ಪ್ರಖ್ಯಾತವಾದ ಶ್ರೀ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮರಥೋತ್ಸವ ವೈಭವದಿಂದ ನೆರವೇರಿತು. ಈ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಕ್ತಿಯಿಂದ ಭಾಗವಹಿಸಿ ಸ್ವಾಮಿಯ ಕೃಪಾಶೀರ್ವಾದ ಪಡೆದರು.
ಜಾತ್ರೆಯಲ್ಲಿ ಮಾಜಿ ಸಚಿವರಾದ ಡಿ.ಸುಧಾಕರ್ ಅವರು ಭಾಗವಹಿಸಿ ಈ ವರ್ಷದ ಜಾತ್ರೋತ್ಸವದ ಮುಕ್ತಿಬಾವುಟವನ್ನು ಹರಾಜಿನಲ್ಲಿ 12 ಲಕ್ಷ ರೂ.ಗಳಿಗೆ ಪಡೆದು ಶ್ರೀ ತೇರುಮಲ್ಲೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರು.
ಸುಮಾರು 30 ಅಡಿ ಎತ್ತರದ ನಾಲ್ಕು ಕಲ್ಲಿನ ಚಕ್ರದ ರಥವನ್ನು ಭಕ್ತರು ಹರಹರ ಮಹಾದೇವ ಎಂಬ ಜಯಘೋಷದೊಂದಿಗೆ ದೇವಸ್ಥಾನದ ಮುಂಭಾಗದಿಂದ ಸುಮಾರು 500 ಮೀಟರ್ ದೂರವಿರುವ ಸಿದ್ದನಾಯಕ ಸರ್ಕಲ್ ವರೆಗೆ ಭಕ್ತಿಭಾವದಿಂದ ಎಳೆದರು. ರಥದಲ್ಲಿ ಕುಳ್ಳಿರಿಸಲಾದ ದೇವರಿಗೆ ದಾರಿಯುದ್ದಕ್ಕೂ ಭಕ್ತರು ಬಾಳೆಹಣ್ಣು, ಧವನಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.
ಇನ್ನೂ ರಥೋತ್ಸವ ಕಾರ್ಯಕ್ರಮದಲ್ಲಿ ಹಿರಿಯೂರು ತಾಲ್ಲೂಕಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ನಗರಸಭೆ ಪೌರಯುಕ್ತರಾದ ಡಿ ಉಮೇಶ್,ನಗರಸಭೆ ಅಧ್ಯಕ್ಷರಾದ ಶಂಶುದ್ ಉನ್ನಿಸಾ , ಉಪಾಧ್ಯಕ್ಷರಾದ ಬಿ ಎನ್ ಪ್ರಕಾಶ್ ಭಾಗವಹಿಸಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy