nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ನೀಡಿದ್ದ ಬೆನ್ನಲ್ಲೇ ಬೆಂಗಳೂರಿನ ಮಹಿಳೆ ನಾಪತ್ತೆ!

    April 8, 2026

    ಸಿದ್ದೇಶ್ವರ ಜಾತ್ರೆ: ಶತ್ರುಗಳ ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ, ಎಂಟು ಮಂದಿ ಬಂಧನ

    April 8, 2026

    ದ್ವಿತೀಯ ಪಿಯುಸಿ ಫಲಿತಾಂಶ 2026: ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

    April 8, 2026
    Facebook Twitter Instagram
    ಟ್ರೆಂಡಿಂಗ್
    • ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ನೀಡಿದ್ದ ಬೆನ್ನಲ್ಲೇ ಬೆಂಗಳೂರಿನ ಮಹಿಳೆ ನಾಪತ್ತೆ!
    • ಸಿದ್ದೇಶ್ವರ ಜಾತ್ರೆ: ಶತ್ರುಗಳ ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ, ಎಂಟು ಮಂದಿ ಬಂಧನ
    • ದ್ವಿತೀಯ ಪಿಯುಸಿ ಫಲಿತಾಂಶ 2026: ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
    • ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆ ವಿರುದ್ಧ ಕೇಸ್
    • ಹೈನುಗಾರರ ಸೇವೆಗೆ ಮರಳಿರುವುದು ಸಂತಸ ತಂದಿದೆ: ತುಮುಲ್ ಕಚೇರಿಯಲ್ಲಿ ಕೊಂಡವಾಡಿ ಚಂದ್ರಶೇಖರ್
    • ಜನಗಣತಿ ತರಬೇತಿ ವೇಳೆ ಶಿಕ್ಷಕಿ ಅಸ್ವಸ್ಥ: ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ತಹಶೀಲ್ದಾರ್
    • ತುಮಕೂರು: ಇಂದು ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಜನತಾದರ್ಶನ: ವಿವಿಧ ಇಲಾಖಾವಾರು ಪ್ರತ್ಯೇಕ 10 ಕೌಂಟರ್‌ ಗಳು
    • ಮಂಡ್ಯ: ಮಾಜಿ ಶಾಸಕ ಡಾ.ಅನ್ನದಾನಿ ವಿರುದ್ಧ ಅಕ್ರಮ ಸಂಬಂಧದ ಗಂಭೀರ ಆರೋಪ; ಕುಮಾರಸ್ವಾಮಿ ಕಾಲಿಗೆ ಬಿದ್ದು ಪತಿಯ ಗೋಳಾಟ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ಅರಣ್ಯ ಇಲಾಖೆ ನಿದ್ರಾವಸ್ಥೆಗೆ ಜಾರಿದೆ: ಅಧಿಕಾರಿಗಳಿಗೆ ಉಪಲೋಕಾಯುಕ್ತರಿಂದ ತರಾಟೆ
    ತುಮಕೂರು November 16, 2025

    ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ಅರಣ್ಯ ಇಲಾಖೆ ನಿದ್ರಾವಸ್ಥೆಗೆ ಜಾರಿದೆ: ಅಧಿಕಾರಿಗಳಿಗೆ ಉಪಲೋಕಾಯುಕ್ತರಿಂದ ತರಾಟೆ

    By adminNovember 16, 2025No Comments2 Mins Read

    ತುಮಕೂರು: ನಗರ ಹೊರವಲಯದಲ್ಲಿ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಅರಣ್ಯ ಇಲಾಖೆ ನಿದ್ರಾವಸ್ಥೆಗೆ ಜಾರಿದೆ. ನೀವು ಪ್ರತಿ ತಿಂಗಳು ಸಂಬಳ ಎಣಿಸಿಕೊಂಡು ಮನೆಗೆ ಹೋಗಿ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ತಾಲ್ಲೂಕಿನ ಅಮಲಾಪುರ, ಅಜ್ಜಪ್ಪನಹಳ್ಳಿ ಬಳಿಯ ಕ್ರಷರ್‌ ಗಣಿಗಾರಿಕೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂತು. ಅಧಿಕಾರಿಗಳು ಅರಣ್ಯ ಜಾಗದಲ್ಲಿ ಗಣಿಗಾರಿಕೆ ನಡೆಸಲು ಬಿಟ್ಟು, ಕೆರೆಯಲ್ಲಿ ಗಿಡ ಬೆಳೆಸುತ್ತಿದ್ದಾರೆ. ಕಂದಾಯ ಇಲಾಖೆಯವರಿಗೆ ಇದು ಗೊತ್ತೇ ಇಲ್ಲ ಎಂದರು.


    Provided by
    Provided by

    ಕ್ರಷರ್ ಮಾಲಿಕರು ತಮಗಿಷ್ಟ ಬಂದಂತೆ ಗುಡ್ಡ ಕೊರೆದಿದ್ದಾರೆ. ಯಾವುದೇ ಗಡಿ ಗುರುತಿಸಿಲ್ಲ. ಬೆಂಚ್ ಮಾರ್ಕ್, ಬಫರ್ ರೋವ್ ಸಹ ಇಲ್ಲ. ಎಲ್ಲ ಹೊಡೆದುಕೊಂಡು ಹೋಗಿದ್ದಾರೆ. ಗಡಿಯಿಂದ ಮೂರು ಕಡೆ 7 ಮೀಟರ್ ಬಫರ್ ರೋಪ್ ಬಿಡಬೇಕು. ಎಲ್ಲಿ ಬಿಟ್ಟಿದ್ದಾರೆ ತೋರಿಸಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ. ಅವರ ಪಾಡಿಗೆ ಅವರು ಕೆಲಸ ಮಾಡುತ್ತಿದ್ದಾರೆ. ಕ್ವಾರಿ, ಕ್ರಷರ್ ಮಾಲೀಕರು ಭೂಮಿಯಲ್ಲಿ ಸಿಕ್ಕಿದ್ದವೆಲ್ಲಾ ಕೊರೆಯುತ್ತಾರೆ. ಮುಂದೊಂದು ದಿನ ಭೂಮಿಯನ್ನು ಅಸ್ಥಿಪಂಜರದಂತೆ ನೋಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

    ಅರಣ್ಯ ಪ್ರದೇಶದ ಜಾಗ ದಾಟಿಕೊಂಡು ಗುಡ್ಡಕ್ಕೆ ಹೋಗಬೇಕು. ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟವರು ಯಾರು? ಅಭಿವೃದ್ಧಿ ಅಸಮಾತೋಲನವಾದರೆ ಯಾರೂ ಉಳಿಯುವುದಿಲ್ಲ. ನಿಯಮ ಉಲ್ಲಂಘಿಸಿ, ಅರಣ್ಯ ಜಾಗ ಕೊಳ್ಳೆ ಹೊಡೆದವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಗಣಿ ಇಲಾಖೆ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು.

    ಕ್ರಷರ್‌ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ನೋಂದಣಿಗೆ ಕ್ರಮ ವಹಿಸಬೇಕು. ಮಾಲೀಕರಿಂದ ಕಾರ್ಮಿಕರಿಗೆ ವಿಮೆ ಮಾಡಿಸಬೇಕು. ತುರ್ತಾಗಿ ಈ ಎಲ್ಲ ಕೆಲಸ ಆಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಹಕ್ಕಿಪಿಕ್ಕಿ ಹಂದಿಜೋಗಿ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಿ:

    ಅಮಲಾಪುರದ ಬಳಿ ವಾಸವಿರುವ ಹಕ್ಕಿಪಿಕ್ಕಿ ಹಂದಿಜೋಗಿ ಕುಟುಂಬಗಳಿಗೆ ಸೂರು ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಬಿ.ವೀರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. 2018ರಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಇದುವರೆಗೆ ಮೂಲಭೂತ ಸೌಕರ್ಯ ಕೊಟ್ಟಿಲ್ಲ. ಒಂದು ಜೋರಾದ ಮಳೆಯಾದರೆ ಮುಗಿಯಿತು. ಗಣಿಗಾರಿಕೆ ಕ್ವಾರಿಗಳಿಂದ ಕಲ್ಲು ಉರುಳಿ ಬಿದ್ದರೆ ಎಷ್ಟು ಜನ ಉಳಿಯುತ್ತಾರೆ ಎಂಬುವುದು ಗೊತ್ತಿಲ್ಲ. ತುಮಕೂರು ಪಕ್ಕದಲ್ಲಿಯೇ ಇಂತಹ ಸ್ಥಿತಿ ಇದೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕುಟುಕಿದರು.

    ಕೈ ಮುಗಿದು ಕೇಳುತ್ತೇನೆ ಕೆಲಸ ಮಾಡಿ.. ಅಮಲಾಪುರದ ಹಕ್ಕಿಪಿಕ್ಕಿ ಜನರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಕೆಲಸ ಮಾಡಿ ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಮತ್ತೆ ನಿಮಗೆ ನಮಸ್ಕಾರ ಮಾಡುವುದಿಲ್ಲ. ಆಗ ನನ್ನ ಪೆನ್ನು ಕೆಲಸ ಮಾಡುತ್ತದೆ ಎಂದು ಎಚ್ಚರಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆ ವಿರುದ್ಧ ಕೇಸ್

    April 8, 2026

    ತುಮಕೂರು: ಇಂದು ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಜನತಾದರ್ಶನ: ವಿವಿಧ ಇಲಾಖಾವಾರು ಪ್ರತ್ಯೇಕ 10 ಕೌಂಟರ್‌ ಗಳು

    April 8, 2026

    ಬಿಜೆಪಿ ಇತಿಹಾಸ, ಸಿದ್ಧಾಂತ ಜನರಿಗೆ ತಿಳಿಸಿ: ಕಾರ್ಯಕರ್ತರಿಗೆ ಶಾಸಕ ಜ್ಯೋತಿ ಗಣೇಶ್ ಕರೆ

    April 7, 2026

    Leave A Reply Cancel Reply

    Our Picks

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ನೀಡಿದ್ದ ಬೆನ್ನಲ್ಲೇ ಬೆಂಗಳೂರಿನ ಮಹಿಳೆ ನಾಪತ್ತೆ!

    April 8, 2026

    ಬೆಂಗಳೂರು/ವಿಜಯಪುರ: ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿ, ರಾಜ್ಯ ಮಹಿಳಾ…

    ಸಿದ್ದೇಶ್ವರ ಜಾತ್ರೆ: ಶತ್ರುಗಳ ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ, ಎಂಟು ಮಂದಿ ಬಂಧನ

    April 8, 2026

    ದ್ವಿತೀಯ ಪಿಯುಸಿ ಫಲಿತಾಂಶ 2026: ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

    April 8, 2026

    ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆ ವಿರುದ್ಧ ಕೇಸ್

    April 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.