ತುಮಕೂರು: ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ತುಮಕೂರು, ಶ್ರೀಮತಿ ನಾಗರತ್ನಮ್ಮ ಅ.ನಾ.ಶೆಟ್ಟಿ ದತ್ತಿ ಕಥಾ ಸ್ಪರ್ಧೆ, ಲಕ್ಷ್ಮಿದೇವಮ್ಮ ಗೋವಿಂದಯ್ಯ ದತ್ತಿ ಕವನ ಸ್ಪರ್ಧೆ ಏರ್ಪಡಿಸಿದ್ದು, ಕಥೆ, ಕವನಗಳನ್ನು ಆಹ್ವಾನಿಸಿರುತ್ತದೆ.
ಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆ ಕವನಗಳಿಗೆ ಮೊದಲ ಬಹುಮಾನ ರೂ. 2,000, ಎರಡನೇ ಬಹುಮಾನ ರೂ. 1,500, ಮೂರನೇ ಬಹುಮಾನ ರೂ. 1000 ನಗದು ಬಹುಮಾನ ಇರುತ್ತದೆ.
ಕಥೆ ಆರು ಪುಟ, ಕವನ ಎರಡು ಪುಟ ಮೀರದಂತಿರಲಿ. ಹಾಳೆಯ ಒಂದೇ ಮಗ್ಗುಲಲ್ಲಿ ಬರೆದಿರಬೇಕು/ ಟೈಪ್ ಮಾಡಿರಬೇಕು. ಹೆಸರು, ವಿಳಾಸ, ಫೋನ್ ನಂಬರ್ ಪ್ರತ್ಯೇಕ ಪುಟದಲ್ಲಿ ಬರೆದು ಲಗತ್ತಿಸಿರಬೇಕು. ಸ್ಪರ್ಧೆಯು ತುಮಕೂರು ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ.
ಸ್ಪರ್ಧೆಗೆ ಕಳಿಸುವ ಕಥೆ, ಕವನಗಳು ಈ ಮೊದಲು, ಸಾಮಾಜಿಕ ಜಾಲತಾಣ, ಪತ್ರಿಕೆಗಳನ್ನೂ ಸೇರಿದಂತೆ ಎಲ್ಲಿಯೂ ಪ್ರಕಟವಾಗಿರಬಾರದು. ತೀರ್ಪು ಗಾರರ ತೀರ್ಪು ಅಂತಿಮ. ಬಹುಮಾನಿತ ಕಥೆ ಕವನಗಳನ್ನು ಯಾವಾಗ ಬೇಕಾದರೂ, ಸ್ವರೂಪದಲ್ಲಾದರೂ ಪ್ರಕಟಿಸುವ ಹಕ್ಕು ಲೇಖಕಿಯರ ಸಂಘಕ್ಕೆ ಇರುತ್ತದೆ.
ಕವನಗಳ ಕಳಿಸಲು ಕೊನೆಯ ದಿನಾಂಕ 12–01–2026 ಆಗಿರುತ್ತದೆ. ಕಥೆ, ಕವನಗಳನ್ನು ಮಲ್ಲಿಕಾ ಬಸವರಾಜು, ಚರಕ ಆಸ್ಪತ್ರೆ, ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಸಮೀಪ, ತುಮಕೂರು-2 ಈ ವಿಳಾಸಕ್ಕೆ ಕಳಿಸಲು ಕೋರಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


