ಸೌಂದರ್ಯವನ್ನು ಹೆಚ್ಚಿಸುವಲ್ಲಿ ತಲೆಕೂದಲು ಪ್ರಮುಖ ಪಾತ್ರವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ತಪ್ಪು ಅಭ್ಯಾಸಗಳಿಂದಾಗಿ ಅನೇಕರು ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ರಾತ್ರಿ ಹೊತ್ತು ಸ್ನಾನ ಮಾಡಿ, ಕೂದಲನ್ನು ಒಣಗಿಸದೇ ಹಾಗೆಯೇ ಒದ್ದೆ ಕೂದಲಿನಲ್ಲಿ ಮಲಗುವುದು ಕೂದಲಿನ ಆರೋಗ್ಯಕ್ಕೆ ಮಾರಕ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಎದುರಾಗುವ ಸಮಸ್ಯೆಗಳೇನು?
1. ಕೂದಲು ತುಂಡಾಗುವಿಕೆ: ಒದ್ದೆಯಾದ ಕೂದಲು ಒಣ ಕೂದಲಿಗಿಂತ ಹೆಚ್ಚು ದುರ್ಬಲವಾಗಿರುತ್ತದೆ. ಒದ್ದೆ ಕೂದಲಿನೊಂದಿಗೆ ಮಲಗಿದಾಗ, ರಾತ್ರಿಯಿಡೀ ಹೊರಳಾಡುವ ವೇಳೆ ಉಂಟಾಗುವ ಘರ್ಷಣೆಯಿಂದ ಕೂದಲು ಸುಲಭವಾಗಿ ಒಡೆಯುತ್ತದೆ.
2. ಕೂದಲ ತುದಿ ಸೀಳುವುದು (Split Ends): ಕೂದಲು ಒದ್ದೆಯಾಗಿದ್ದಾಗ ಹೆಚ್ಚು ಎಲಾಸ್ಟಿಕ್ ಗುಣ ಹೊಂದಿರುತ್ತದೆ. ಈ ವೇಳೆ ಅದು ಎಳೆದಂತಾಗಿ ಹೊರಪದರ ಹಾನಿಗೊಳಗಾಗುತ್ತದೆ, ಇದರಿಂದ ಕೂದಲಿನ ತುದಿ ಸೀಳಲು ಆರಂಭವಾಗುತ್ತದೆ.
3. ಸೋಂಕು ಮತ್ತು ತಲೆಹೊಟ್ಟು: ತೇವಾಂಶವಿರುವ ನೆತ್ತಿ ಮತ್ತು ದಿಂಬು ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳ (Fungus) ಬೆಳವಣಿಗೆಗೆ ಹೇಳಿ ಮಾಡಿಸಿದ ಜಾಗ. ಇದು ತಲೆಹೊಟ್ಟು ಮತ್ತು ‘ಮಲಾಸೆಜಿಯಾ’ ಎಂಬ ಶಿಲೀಂಧ್ರದ ಸೋಂಕಿಗೆ ಕಾರಣವಾಗಬಹುದು.
ಹಾನಿ ತಪ್ಪಿಸಲು ಈ ಸಲಹೆ ಪಾಲಿಸಿ: ಒಂದು ವೇಳೆ ರಾತ್ರಿ ಸ್ನಾನ ಮಾಡುವುದು ಅನಿವಾರ್ಯವಾದರೆ, ಮಲಗುವ ಮುನ್ನ ಈ ಕ್ರಮಗಳನ್ನು ಅನುಸರಿಸಿ:
-
ಭಾಗಶಃ ಒಣಗಿಸಿ: ಮಲಗುವ ಮುನ್ನ ಕನಿಷ್ಠ ಶೇ. ೭೦ರಷ್ಟು ಕೂದಲನ್ನು ಹೇರ್ ಡ್ರೈಯರ್ ಅಥವಾ ಟವೆಲ್ ಬಳಸಿ ಒಣಗಿಸಿ.
-
ಮೈಕ್ರೋಫೈಬರ್ ಟವೆಲ್ ಬಳಸಿ: ಸಾಮಾನ್ಯ ಹತ್ತಿ ಟವೆಲ್ ಬದಲು ಮೈಕ್ರೋಫೈಬರ್ ಟವೆಲ್ ಬಳಸುವುದು ಕೂದಲಿನ ಹಾನಿಯನ್ನು ತಡೆಯುತ್ತದೆ.
-
ಸಿಲ್ಕ್ ದಿಂಬುಕವಚ: ಹತ್ತಿಯ ದಿಂಬಿನ ಕವಚಗಳಿಗಿಂತ ಸಿಲ್ಕ್ ಅಥವಾ ಸ್ಯಾಟಿನ್ ಕವಚಗಳು ಕೂದಲಿನ ಘರ್ಷಣೆಯನ್ನು ಕಡಿಮೆ ಮಾಡುತ್ತವೆ.
-
ಸಡಿಲವಾದ ಕೇಶವಿನ್ಯಾಸ: ಬಿಗಿಯಾದ ಪೋನಿಟೇಲ್ ಬದಲು ಸಡಿಲವಾದ ಜಡೆ ಅಥವಾ ಬನ್ ಹಾಕಿ ಮಲಗುವುದು ಉತ್ತಮ.
ಒಟ್ಟಾರೆಯಾಗಿ, ಸುಂದರ ಮತ್ತು ಆರೋಗ್ಯಕರ ಕೂದಲು ನಿಮ್ಮದಾಗಬೇಕೆಂದರೆ ಒದ್ದೆ ಕೂದಲಿನಲ್ಲಿ ಮಲಗುವ ಹವ್ಯಾಸಕ್ಕೆ ಇಂದೇ ಗುಡ್ ಬೈ ಹೇಳಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


