nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಟ್ಟೆ ಅಂಗಡಿಯ ಫ್ರಾಂಚೈಸಿ ಆಮಿಷ; ಉದ್ಯಮಿಗೆ ₹8.75 ಲಕ್ಷ ವಂಚನೆ

    February 3, 2026

    ನಕಲಿ ಗಾಂಧಿಗಳಿಂದ ‘ಗಾಂಧಿ’ ಹೆಸರು ಹೈಜಾಕ್: ವಿಧಾನಸಭೆಯಲ್ಲಿ 454 ಯೋಜನೆಗಳ ಪಟ್ಟಿ ಬಿಡುಗಡೆ ಮಾಡಿದ ಆರ್‌.ಅಶೋಕ್

    February 3, 2026

    ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಅಪರಾಧ ಪ್ರಮಾಣ ಇಳಿಕೆ: ವಿಪಕ್ಷಗಳ ಟೀಕೆಗೆ ಸಚಿವ ಪರಮೇಶ್ವರ್ ಉತ್ತರ

    February 3, 2026
    Facebook Twitter Instagram
    ಟ್ರೆಂಡಿಂಗ್
    • ಬಟ್ಟೆ ಅಂಗಡಿಯ ಫ್ರಾಂಚೈಸಿ ಆಮಿಷ; ಉದ್ಯಮಿಗೆ ₹8.75 ಲಕ್ಷ ವಂಚನೆ
    • ನಕಲಿ ಗಾಂಧಿಗಳಿಂದ ‘ಗಾಂಧಿ’ ಹೆಸರು ಹೈಜಾಕ್: ವಿಧಾನಸಭೆಯಲ್ಲಿ 454 ಯೋಜನೆಗಳ ಪಟ್ಟಿ ಬಿಡುಗಡೆ ಮಾಡಿದ ಆರ್‌.ಅಶೋಕ್
    • ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಅಪರಾಧ ಪ್ರಮಾಣ ಇಳಿಕೆ: ವಿಪಕ್ಷಗಳ ಟೀಕೆಗೆ ಸಚಿವ ಪರಮೇಶ್ವರ್ ಉತ್ತರ
    • ದ್ವೇಷ ಭಾಷಣ ಮಸೂದೆ ಜಾರಿಯಾಗದಂತೆ ತಡೆಯಲು ರಾಜ್ಯಪಾಲರ ಯತ್ನ: ಗೃಹ ಸಚಿವ ಜಿ. ಪರಮೇಶ್ವರ್ ಗಂಭೀರ ಆರೋಪ
    • ರಾಜ್ಯದಲ್ಲಿ ಆಡಳಿತ ‘ಕೋಮಾ’ ಸ್ಥಿತಿಗೆ ತಲುಪಿದೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
    • ‘ದ್ವೇಷ ಭಾಷಣ ಮಸೂದೆ’: 29 ಕಾರಣ ನೀಡಿ ಅಂಕಿತ ನಿರಾಕರಿಸಿದ ರಾಜ್ಯಪಾಲರು
    • ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು: ವಿ.ವಿಜಯ ಕುಮಾರ್ ನಾಗನಾಳ
    • ಹಿಂದೂ ಸಂಸ್ಕೃತಿ ಬಿಟ್ಟು ವಿದೇಶ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ: ಹಿಂದೂ ಸಮಾಜೋತ್ಸವದಲ್ಲಿ ಸುಧಾ ಮೃತ್ಯುಂಜಪ್ಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಕಲಿ ಗಾಂಧಿಗಳಿಂದ ‘ಗಾಂಧಿ’ ಹೆಸರು ಹೈಜಾಕ್: ವಿಧಾನಸಭೆಯಲ್ಲಿ 454 ಯೋಜನೆಗಳ ಪಟ್ಟಿ ಬಿಡುಗಡೆ ಮಾಡಿದ ಆರ್‌.ಅಶೋಕ್
    ರಾಜ್ಯ ಸುದ್ದಿ February 3, 2026

    ನಕಲಿ ಗಾಂಧಿಗಳಿಂದ ‘ಗಾಂಧಿ’ ಹೆಸರು ಹೈಜಾಕ್: ವಿಧಾನಸಭೆಯಲ್ಲಿ 454 ಯೋಜನೆಗಳ ಪಟ್ಟಿ ಬಿಡುಗಡೆ ಮಾಡಿದ ಆರ್‌.ಅಶೋಕ್

    By adminFebruary 3, 2026No Comments2 Mins Read
    r ashok

    ಬೆಂಗಳೂರು: ನರೇಗಾ (MNREGA) ಯೋಜನೆಯ ಹೆಸರಿನಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಕೈಬಿಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಅವರು ಮಂಗಳವಾರ ಸದನದಲ್ಲಿ ಅಂಕಿಅಂಶಗಳ ಸಮೇತ ತಿರುಗೇಟು ನೀಡಿದರು.

    454 ಯೋಜನೆಗಳ ಸುದೀರ್ಘ ಪಟ್ಟಿ: ಕಾಂಗ್ರೆಸ್ ಅವಧಿಯಲ್ಲಿ ಕೇವಲ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹೆಸರಿಡಲಾದ ಸುಮಾರು 454 ಯೋಜನೆಗಳು, ರಸ್ತೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಕಟ್ಟಡಗಳ ಪಟ್ಟಿಯನ್ನು ಅಶೋಕ್ ಸದನದಲ್ಲಿ ಪ್ರದರ್ಶಿಸಿದರು. ಅಂದಾಜು ಎರಡು ಮೀಟರ್ ಉದ್ದದ ಈ ಪಟ್ಟಿಯನ್ನು ಓದುವ ಮೂಲಕ ಅವರು ಸರ್ಕಾರದ ಗಮನ ಸೆಳೆದರು.


    Provided by
    Provided by

    ‘ನಕಲಿ ಗಾಂಧಿ’ಗಳ ವಾಗ್ದಾಳಿ: “ಮಹಾತ್ಮ ಗಾಂಧಿಯವರ ಪೂರ್ಣ ಹೆಸರು ಮೋಹನದಾಸ ಕರಮಚಂದ ಗಾಂಧಿ. ಆದರೆ ಕಾಂಗ್ರೆಸ್ ನಾಯಕರು ಮೊದಲ ಎರಡು ಹೆಸರುಗಳನ್ನು ಬಿಟ್ಟು ಕೇವಲ ‘ಗಾಂಧಿ’ ಹೆಸರನ್ನು ಮಾತ್ರ ಬಳಸಿಕೊಂಡು ರಾಜಕೀಯ ಅಸ್ತಿತ್ವಕ್ಕಾಗಿ ಅದನ್ನು ಹೈಜಾಕ್ ಮಾಡಿದ್ದಾರೆ. ಇವರೆಲ್ಲರೂ ನಕಲಿ ಗಾಂಧಿಗಳು” ಎಂದು ಅಶೋಕ್ ಟೀಕಿಸಿದರು.

    ಕಾಂಗ್ರೆಸ್‌ಗೆ ಪ್ರಶ್ನೆ: “ನಿಮ್ಮ ಅವಧಿಯಲ್ಲಿ ಎಷ್ಟು ಯೋಜನೆಗಳಿಗೆ ಮಹಾತ್ಮ ಗಾಂಧಿಯವರ ಹೆಸರನ್ನು ಇಟ್ಟಿದ್ದೀರಿ? ನಾಗರಹೊಳೆ ಮೀಸಲು ಅರಣ್ಯಕ್ಕೆ ರಾಜೀವ್ ಗಾಂಧಿ ಅವರ ಹೆಸರನ್ನು ಏತಕ್ಕಾಗಿ ಇಡಬೇಕಿತ್ತು?” ಎಂದು ಅವರು ಪ್ರಶ್ನಿಸಿದರು.

    ರಾಮನ ಹೆಸರು ಹಾಗೂ ದ್ವೇಷ: ಕಾಂಗ್ರೆಸ್ ನಾಯಕರಿಗೆ ‘ರಾಮ’ ಎಂಬ ಹೆಸರೆಂದರೆ ಆಗುವುದಿಲ್ಲ. ಮೊದಲು ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿದರು, ಈಗ ಕೇಂದ್ರದ ಯೋಜನೆಗಳ ಹೆಸರಿನ ಬಗ್ಗೆ ಆಕ್ಷೇಪ ಎತ್ತುತ್ತಿದ್ದಾರೆ. ಗಾಂಧೀಜಿಯವರೇ ‘ರಘುಪತಿ ರಾಘವ ರಾಜಾರಾಂ’ ಎಂದು ಭಜಿಸುತ್ತಿದ್ದರು, ಆದರೆ ಕಾಂಗ್ರೆಸ್ ರಾಮನನ್ನು ದ್ವೇಷಿಸುತ್ತಿದೆ ಎಂದು ಅಶೋಕ್ ಆರೋಪಿಸಿದರು.

    ಸದನದಲ್ಲಿ ಗದ್ದಲ: ಅಶೋಕ್ ಅವರ ಈ ವಾದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮತ್ತು ಇತರ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮಹಾತ್ಮ ಗಾಂಧಿ ಹೆಸರಿರುವ ಯೋಜನೆಗಳ ಪಟ್ಟಿಯನ್ನು ಓದಲು ಪ್ರಯತ್ನಿಸಿದಾಗ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

    ರಾಜ್ಯ ಸರ್ಕಾರವು ಕೇಂದ್ರದ ವಿರುದ್ಧ ಅನಗತ್ಯವಾಗಿ ನಿರ್ಣಯಗಳನ್ನು ಅಂಗೀಕರಿಸುವ ಬದಲು, ಅಭಿವೃದ್ಧಿಗಾಗಿ ಕೇಂದ್ರದೊಂದಿಗೆ ಕೈಜೋಡಿಸಬೇಕು ಎಂದು ಅಶೋಕ್ ಕಿವಿಮಾತು ಹೇಳಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಅಪರಾಧ ಪ್ರಮಾಣ ಇಳಿಕೆ: ವಿಪಕ್ಷಗಳ ಟೀಕೆಗೆ ಸಚಿವ ಪರಮೇಶ್ವರ್ ಉತ್ತರ

    February 3, 2026

    ದ್ವೇಷ ಭಾಷಣ ಮಸೂದೆ ಜಾರಿಯಾಗದಂತೆ ತಡೆಯಲು ರಾಜ್ಯಪಾಲರ ಯತ್ನ: ಗೃಹ ಸಚಿವ ಜಿ. ಪರಮೇಶ್ವರ್ ಗಂಭೀರ ಆರೋಪ

    February 2, 2026

    ರಾಜ್ಯದಲ್ಲಿ ಆಡಳಿತ ‘ಕೋಮಾ’ ಸ್ಥಿತಿಗೆ ತಲುಪಿದೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

    February 2, 2026

    Leave A Reply Cancel Reply

    Our Picks

    ಕೇಂದ್ರ ಬಜೆಟ್ 2026: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ನ ಪ್ರಮುಖ ಘೋಷಣೆಗಳು

    February 1, 2026

    ಆಂಬುಲೆನ್ಸ್ ಬಾಗಿಲು ಜಾಮ್; ಆಸ್ಪತ್ರೆಯ ಬಾಗಿಲುವರೆಗೆ ತಲುಪಿದರೂ, ರೋಗಿ ಸಾವು

    January 28, 2026

    ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ದುರ್ಮರಣ

    January 28, 2026

    77ನೇ ಗಣರಾಜ್ಯೋತ್ಸವ ಸಂಭ್ರಮ: ಗಮನಸೆಳೆದ ಭಾರತದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ ವೈಭವ

    January 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬಟ್ಟೆ ಅಂಗಡಿಯ ಫ್ರಾಂಚೈಸಿ ಆಮಿಷ; ಉದ್ಯಮಿಗೆ ₹8.75 ಲಕ್ಷ ವಂಚನೆ

    February 3, 2026

    ತುಮಕೂರು: ನಗರದ ಉದ್ಯಮಿಯೊಬ್ಬರಿಗೆ ಪ್ರಸಿದ್ಧ ಬಟ್ಟೆ ಬ್ರ್ಯಾಂಡ್ ‘ಸ್ನಿಚ್’ (Snitch) ಕಂಪನಿಯ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ಬರೋಬ್ಬರಿ 8.75 ಲಕ್ಷ…

    ನಕಲಿ ಗಾಂಧಿಗಳಿಂದ ‘ಗಾಂಧಿ’ ಹೆಸರು ಹೈಜಾಕ್: ವಿಧಾನಸಭೆಯಲ್ಲಿ 454 ಯೋಜನೆಗಳ ಪಟ್ಟಿ ಬಿಡುಗಡೆ ಮಾಡಿದ ಆರ್‌.ಅಶೋಕ್

    February 3, 2026

    ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಅಪರಾಧ ಪ್ರಮಾಣ ಇಳಿಕೆ: ವಿಪಕ್ಷಗಳ ಟೀಕೆಗೆ ಸಚಿವ ಪರಮೇಶ್ವರ್ ಉತ್ತರ

    February 3, 2026

    ದ್ವೇಷ ಭಾಷಣ ಮಸೂದೆ ಜಾರಿಯಾಗದಂತೆ ತಡೆಯಲು ರಾಜ್ಯಪಾಲರ ಯತ್ನ: ಗೃಹ ಸಚಿವ ಜಿ. ಪರಮೇಶ್ವರ್ ಗಂಭೀರ ಆರೋಪ

    February 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.