ತುಮಕೂರು : ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿ ಕೆ.ಎಸ್.ಆರ್.ಟಿ.ಸಿ./ಬಿ ಎಂ ಟಿ ಸಿ, ಬಿ.ಟಿ.ಎಸ್. ಬಸ್ಸುಗಳ ಮೇಲೆ ಇಂಗ್ಲಿಷ್ ಪೋಸ್ಟರ್ ಗಳು, ಸ್ಟೀಕರ್ ಗಳು ಹಾಗೂ ಅನಧಿಕೃತ ಸ್ಪೀಕರ್ ಗಳು ಇನ್ನೂ ಅಳವಡಿಸಿಕೊಂಡಿರುವುದು ಅತ್ಯಂತ ಖಂಡನೀಯ ಎಂದು ಅಂಬೇಡ್ಕರ್ ಸಮಿತಿ ಸಮಾಜ ಸೇವಾ ಸಮಿತಿ, ತುಮಕೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಹೊರಡಿಸಿರುವ ಸುತ್ತೋಲೆ/ಆದೇಶದಂತೆ ಸರ್ಕಾರಿ ಸಾರಿಗೆ ಬಸ್ಸುಗಳ ಮೇಲೆ ಇಂಗ್ಲಿಷ್ ಪೋಸ್ಟರ್ ಗಳು, ಸ್ಟೀಕರ್ ಗಳು ಹಾಗೂ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆದರೂ ತುಮಕೂರು ನಗರದಲ್ಲಿ ಸಂಚರಿಸುತ್ತಿರುವ ಕೆಲವು ಕೆ.ಎಸ್.ಆರ್.ಟಿ.ಸಿ./ಬಿ.ಟಿ.ಎಸ್. ಬಸ್ಸುಗಳಲ್ಲಿ ಇಂದಿಗೂ ಇಂಗ್ಲಿಷ್ ಪೋಸ್ಟರ್ ಗಳು ಹಾಗೂ ಸ್ಪೀಕರ್ ಗಳು ರಾರಾಜಿಸುತ್ತಿರುವುದು ಸರ್ಕಾರದ ಆದೇಶಗಳಿಗೆ ನೇರ ಸವಾಲು ಹಾಕಿದಂತೆ ಆಗಿದೆ.
ಇದು ಕನ್ನಡ ಭಾಷೆ, ಕನ್ನಡಿಗರ ಭಾವನೆಗಳು ಹಾಗೂ ರಾಜ್ಯದ ಗೌರವಕ್ಕೆ ಧಕ್ಕೆ ತರುವ ಕಾರ್ಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಕುರಿತು ಅಂಬೇಡ್ಕರ್ ಸಮಿತಿ ಸಮಾಜ ಸೇವಾ ಸಮಿತಿಯು ಪ್ರಾದೇಶಿಕ ಸಾರಿಗೆ ಅಧಿಕಾರಿ (ಡಿ.ಟಿ.ಓ), ತುಮಕೂರು ಅವರಿಗೆ ಲಿಖಿತ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಒಂದು ವೇಳೆ ಕೂಡಲೇ ಈ ಅಕ್ರಮ ಪೋಸ್ಟರ್ ಗಳು, ಸ್ಟೀಕರ್ ಗಳು ಹಾಗೂ ಸ್ಪೀಕರ್ ಗಳನ್ನು ತೆರವುಗೊಳಿಸದಿದ್ದಲ್ಲಿ, ಅಂಬೇಡ್ಕರ್ ಸಮಿತಿ ಸಮಾಜ ಸೇವಾ ಸಮಿತಿ ವತಿಯಿಂದ ಕಾನೂನು ಬದ್ಧವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.
ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


