ತುಮಕೂರು: ಎಸ್ ಐಆರ್ ಎನ್ಯುಮರೇಷನ್ ಅರ್ಜಿ ವಿತರಣೆಯಲ್ಲಿ ಜು.23ರ ಗುರುವಾರದ ಅಂತ್ಯಕ್ಕೆ ಶೇ.100ರಷ್ಟು ಪ್ರಗತಿಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ಶುಭಕಲ್ಯಾಣ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಲಾದ 22,98,879 ಸಂಖ್ಯೆಯ ಮತದಾರರೆಲ್ಲರಿಗೂ ಎನ್ಯುಮರೇಷನ್ ಅರ್ಜಿಗಳನ್ನು ವಿತರಣೆ ಮಾಡಲಾಗಿದ್ದು, ಈ ಪೈಕಿ 1,80,5783 ಅರ್ಜಿಯನ್ನು ಮರು ಸ್ವೀಕರಿಸಿ ಶೇ.78.55ರಷ್ಟು ಡಿಜಿಟೈಸೇಷನ್ ಮಾಡಲಾಗಿದೆ. ಇದರಲ್ಲಿ ಆನ್ ಲೈನ್ ಮೂಲಕ ಮತದಾರರಿಂದಲೇ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 10,930ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
68,597 ಮಂದಿ ಮತದಾರರು ನಿಧನ, ಸ್ಥಳಾಂತರ ಮತ್ತಿತರ ಕಾರಣದಿಂದ ಗಣತಿ ವೇಳೆ ಲಭ್ಯವಾಗದಿರುವುದು ಕಂಡುಬಂದಿದೆ ಎಂದಿದ್ದಾರೆ. ಆಗಸ್ಟ್ 8ರವರೆಗೆ ಗಣತಿ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಅಷ್ಟರೊಳಗೆ ಎಲ್ಲಾ ಅರ್ಜಿದಾರರ ಅರ್ಜಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


