ಗುಬ್ಬಿ: ನಾನು ಯಾವ ಪಕ್ಷದಲ್ಲಿ ಬೇಕಾದರೂ ಟಿಕೆಟ್ ತರುವ ಯೋಗ್ಯತೆ ಉಳಿಸಿಕೊಂಡಿದ್ದೇನೆ ಎಂದು ಕೆಎಸ್ ಆರ್ ಟಿಸಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಅಡಗೂರು, ಧೂಳನಹಳ್ಳಿ ಪಾಳ್ಯ, ಕಕ್ಕೆನಹಳ್ಳಿ, ಕೊಪ್ಪ , ಸುರಿಗೇನಹಳ್ಳಿ, ತೊಂಗನಹಳ್ಳಿ, ಸಿಂಗೊನಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಇರುವ ಕಡೆ ಆತ್ಮ ಗೌರವಕ್ಕೆ ಧಕ್ಕೆ ಬರುವಂತ ಸಂದರ್ಭದಲ್ಲಿ ಸೋಲು ಗೆಲುವು ಮುಖ್ಯ ಅಂದುಕೊಂಡಿಲ್ಲ, ರಾಜಕೀಯದಲ್ಲಿ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ಜನಸೇವೆ ಮುಖ್ಯ, ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಅವರು, ಸರ್ಕಾರ ಮತ್ತು ಮಂತ್ರಿಗಳ ಸಹಕಾರದಿಂದ ಕೆಎಸ್ ಆರ್ ಟಿಸಿಯಲ್ಲಿ ತಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.
ವೇತನ ಪರಿಷ್ಕರಣೆ ಕುರಿತಂತೆ ಬಿಜೆಪಿ ಸರ್ಕಾರ ಇದ್ದಾಗ 23ಕ್ಕೆ ನಂತರ 27ಕ್ಕೆ ಇತ್ತು ಒಂದು ವಿಚಾರವಾಗಿ ಸರ್ಕಾರ ಮತ್ತು ನೌಕರರ ನಡುವೆ ಕೆಲವೊಂದು ಗೊಂದಲಗಳಿವೆ. ಸರ್ಕಾರದ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಅಂತಾ ತಿಳಿಸಿದರು.
ರಾಜ್ಯದಿಂದ ಅತಿ ಹೆಚ್ಚು ತೆರಿಗೆ ತೆಗೆದುಕೊಂಡು ಕೇಂದ್ರ ಸರ್ಕಾರ ಜನರಿಗೆ ಅನ್ಯಾಯ ಮಾಡುತ್ತಿದೆ. ರಾಜಕಾರಣಿಗಳು ರಾಜ್ಯದ ಜನತೆಯ ವಿಚಾರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ್, ಚನ್ನಬಸವೇಗೌಡ ರಾಜಣ್ಣ, ಶ್ರೀನಿವಾಸ್ ಕರೀತಿಮ್ಮಯ್ಯ ಚಿಕ್ಕೋಡಪ್ಪ, ವೆಂಕಟೇಶ್ಮೂರ್ತಿ, ಶಿವಯ್ಯ, ಕಳ್ಳಿಪಾಳ್ಯ ರಾಜು ಮುಂತಾದವರು ಹಾಜರಿದ್ದರು.
ವರದಿ: ಚೇತನ್ ಗೌಡ, ಗುಬ್ಬಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


